ಗೋಕಾಕ:ಶಿವಾ ಫೌಂಡೇಶನ್ ಕಾರ್ಯ ಶ್ಲಾಘಣೀಯವಾಗಿದೆ : ವಿಜಯಲಕ್ಷ್ಮಿ ಜತ್ತಿ
ಶಿವಾ ಫೌಂಡೇಶನ್ ಕಾರ್ಯ ಶ್ಲಾಘಣೀಯವಾಗಿದೆ : ವಿಜಯಲಕ್ಷ್ಮಿ ಜತ್ತಿ
ಗೋಕಾಕ ಡಿ 3 : ಪಾಲಕರು ತಮ್ಮ ಮಕ್ಕಳಿಗೆ ಸರಿಯಾದ ದಾರಿ ತೋರಿಸಲು ಮರೆತು ಬಿಡುವ ಇಂದಿನ ದಿನಗಳಲ್ಲಿ ಬೇರೊಬ್ಬರ ಮಕ್ಕಳನ್ನು ತಮ್ಮ ಮಕ್ಕಳಂತೆ ಪಾಲನೆ ಮಾಡುತ್ತಿರುವ ಶಿವಾ ಫೌಂಡೇಶನ್ ಕಾರ್ಯ ಶ್ಲಾಘಣೀಯವಾಗಿದೆ ಎಂದು ನಗರಸಭೆ ಉಪಾಧ್ಯಕ್ಷೆ ವಿಜಯಲಕ್ಷ್ಮಿ ಜತ್ತಿ ಹೇಳಿದರು.
ಅವರು, ನಗರದ ಯೋಗಿಕೊಳ್ಳ ರಸ್ತೆಯಲ್ಲಿ ಶಿವಾ ಫೌಂಡೇಶನ್ ಇವರ ನೂತನ ಅನಾಥ ಮಕ್ಕಳ ಆಶ್ರಮವನ್ನು ಉದ್ಘಾಟಿಸಿ ಮಾತನಾಡಿ, ಮಕ್ಕಳ ಬೆಳವಣಿಗೆಗೆ ಶ್ರಮಿಸುತ್ತಿರುವ ರಮೇಶ ಪೂಜೇರಿ ಹಾಗೂ ಶಿವಾ ಫೌಂಡೇಶನ್‍ಗೆ ಸಾರ್ವಜನಿಕವಾಗಿ ಪ್ರೋತ್ಸಾಹಿಸುವದು ಅವಶ್ಯವಾಗಿದೆ ಎಂದು ಹೇಳಿದರು.
ಸಂಸ್ಥಾಪಕ ರಮೇಶ ಪೂಜೇರಿ ಮಾತನಾಡಿ, ಅನಾಥ ಮಕ್ಕಳು ಕಂಡು ಬಂದಲ್ಲಿ ನಮ್ಮ ಸಂಸ್ಥೆಗೆ ಸಾರ್ವಜನಿಕರು 9019295556 ಸಂಪರ್ಕಿಸಲು ಕೋರಿದ್ದಾರೆ.
ಇದೇ ಸಂದರ್ಭದಲ್ಲಿ ಆಶಿರ್ವಾದ ಹುಲಕುಂದ ಅವರು ಸಂಸ್ಥೆಗೆ ಟಿವಿ ದೇಣಿಗೆ ನೀಡಿ ತಮ್ಮ ಹುಟ್ಟು ಹಬ್ಬವನ್ನು ಅನಾಥಾಶ್ರಮದ ಮಕ್ಕಳೊಂದಿಗೆ ಆಚರಿಸಿಕೊಂಡರು.
ಉದ್ಘಾಟನಾ ಕಾರ್ಯಕ್ರಮದಲ್ಲಿ ನಗರಸಭೆ ಸ್ಥಾಯಿ ಸಮೀತಿ ಚೇರಮನ್ ಭಗವಂತ ಹುಳ್ಳಿ, ಎಪಿಎಮ್‍ಸಿ ನಿರ್ದೇಶಕ ಬಸವರಾಜ ಸಾಯನ್ನವರ, ನಗರಸಭೆ ಸದಸ್ಯ ಹಾಗೂ ಬೆಳಗಾವಿ ಜಿಲ್ಲಾ ಯೋಜನಾ ಪ್ರಧಿಕಾರ ಸದಸ್ಯರಾದ ಭೀಮಶಿ ಭರಮನ್ನವರ, ಗಿರೀಶ ಖೋತ, ಸದಸ್ಯ ಚಂದ್ರಕಾಂತ ಈಳಿಗೇರ, ಘಟಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಯ ನಿರ್ದೇಶಕ ಶಿವಲಿಂಗ ಪೂಜೇರಿ, ಚನ್ನಪ್ಪ ವಗ್ಗನ್ನವರ, ವಿಠ್ಠಲ ಬಡೆಪ್ಪಗೋಳ, ಸತ್ತೆಪ್ಪ ಸುಭಂಜಿ, ನಾಗರಾಜ ಬಬಲಿ, ರಾಮಪ್ಪ ಹುಲಕುಂದ, ಶಾನೂರ ಹಿರೇಹೊಳಿ, ಗಿರೀಶ ಗೋರಬಾಳ, ಚೇತನ ಜೋಗನ್ನವರ ಸೇರಿದಂತೆ ಸಂಸ್ಥೆಯ ಸದಸ್ಯರು, ಮಕ್ಕಳು ಇತರರು ಇದ್ದರು.