RNI NO. KARKAN/2006/27779|Saturday, July 12, 2025
You are here: Home » breaking news » ಗೋಕಾಕ:ಉದ್ಭವ ಠಾಕ್ರೆ ಬಂಧಿಸಲು ಆಗ್ರಹಿಸಿ ಕರವೇ ಸ್ವಾಭಿಮಾನ ಬಣದಿಂದ ತಹಶೀಲದ್ದಾರಗೆ ಮನವಿ

ಗೋಕಾಕ:ಉದ್ಭವ ಠಾಕ್ರೆ ಬಂಧಿಸಲು ಆಗ್ರಹಿಸಿ ಕರವೇ ಸ್ವಾಭಿಮಾನ ಬಣದಿಂದ ತಹಶೀಲದ್ದಾರಗೆ ಮನವಿ 

ಉದ್ಭವ ಠಾಕ್ರೆ ಬಂಧಿಸಲು ಆಗ್ರಹಿಸಿ ಕರವೇ ಸ್ವಾಭಿಮಾನ ಬಣದಿಂದ ತಹಶೀಲದ್ದಾರಗೆ ಮನವಿ

ಗೋಕಾಕ ನ 25: ನಾಡವಿರೋಧಿ ಹೇಳಿಕೆಯನ್ನು ನೀಡಿರುವ ಶಿವಸೇನೆ ಮುಖ್ಯಸ್ಥ ಉದ್ಭವ ಠಾಕ್ರೆಯನ್ನು ಬಂಧಿಸುವಂತೆ ಆಗ್ರಹಿಸಿ ಕರವೇ ಸ್ವಾಭಿಮಾನ ಬಣ ತಾಲೂಕಾ ಘಟಕದಿಂದ ಪ್ರತಿಭಟನೆ ನಡೆಸಿ, ತಹಶೀಲದಾರ ಮುಖಾಂತರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಶನಿವಾರದಂದು ನಗರದ ಶ್ರೀ ಬಸವೇಶ್ವರ ವೃತ್ತದಲ್ಲಿ ಸೇರಿದ ಕರವೇ ಸ್ವಾಭಿಮಾನ ಬಣದ ಕಾರ್ಯಕರ್ತರು, ಟೈರ್‍ಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿ ನಂತರ ಮಿನಿ ವಿಧಾನ ಸೌಧಕ್ಕೆ ತೆರಳಿ ತಹಶೀಲದಾರರಿಗೆ ಮನವಿ ಅರ್ಪಿಸಿದರು.
ಶಿವಸೇನೆ ಮುಖ್ಯಸ್ಥ ಉದ್ಭವ ಠಾಕ್ರೆ ಬೆಳಗಾವಿ, ನಿಪ್ಪಾಣಿ ಸೇರಿದಂತೆ ಕರ್ನಾಟಕ ವ್ಯಾಪ್ತಿಯಲ್ಲಿರುವ ಮರಾಠಿ ಭೂಭಾಗ ಮಹಾರಾಷ್ಟ್ರಕ್ಕೆ ಸೇರಬೇಕೆಂದು ಉದ್ಧಟತನದ ಹೇಳಿಕೆಯನ್ನು ನೀಡಿದಲ್ಲದೇ ಎಮ್‍ಇಎಸ್‍ನವರು ನಡೆಸುತ್ತಿರುವ ಗಡಿಹೋರಾಟಕ್ಕೆ ಶಿವಸೇನೆಯ ಸಂಸದರು ಹಾಗೂ ಶಾಸಕರು ಮರಾಠಿಗರ ಬೆಂಬಲಕ್ಕೆ ನಿಲ್ಲಬೇಕೆಂದು ಹೇಳಿಕೆ ನೀಡಿ, ಕನ್ನಡಿಗರ ಭಾವನೆಗೆ ಧಕ್ಕೆಯನ್ನುಂಟು ಮಾಡಿರುವ ಠಾಕ್ರೆಯವರನ್ನು ಜಿಲ್ಲಾಡಳಿತ ಹಾಗೂ ಕರ್ನಾಟಕ ಸರ್ಕಾರ ಕೂಡಲೇ ಬಂಧಿಸಿ, ನಾಡದ್ರೋಹಿ ಪ್ರಕರಣ ದಾಖಲಿಸಬೇಕು. ಪದೆ ಪದೇ ನಾಡದ್ರೋಹಿ ಕೆಲಸವನ್ನು ಮಾಡುತ್ತಿರುವ ಎಮ್‍ಇಎಸ್ ವಿರುದ್ಧ ಹಾಗೂ ಉದ್ಭವ ಠಾಕ್ರೆಯ ಮೇಲೆ ಕಾನೂನು ಕ್ರಮ ಕೈಗೊಳ್ಳದೆ ಹೋದರೇ ಕರವೇ ಸ್ವಾಭಿಮಾನ ಬಣದಿಂದ ಬೆಳಗಾವಿ ಜಿಲ್ಲಾದ್ಯಂತ ಉಗ್ರ ಹೋರಾಟ ನಡೆಸುವುದಾಗಿ ಮನವಿಯಲ್ಲಿ ತಿಳಿಸಿದ್ದಾರೆ.
ಪ್ರತಿಭಟನೆಯಲ್ಲಿ ಕರವೇ ಸ್ವಾಭಿಮಾನ ಬಣ ತಾಲೂಕಾಧ್ಯಕ್ಷ ಸಂತೋಷ ಖಂಡ್ರಿ, ಮಹಿಳಾ ಜಿಲ್ಲಾಧ್ಯಕ್ಷೆ ಯಶೋಧಾ ಬಿರಡಿ, ಉಪಾಧ್ಯಕ್ಷೆ ಲಕ್ಷ್ಮೀ ಪಾಟೀಲ, ಕಾರ್ಯದರ್ಶಿ ರೂಪಾ ಧನಶೆಟ್ಟಿ, ಮಾರುತಿ ಚೌಕಾಶಿ, ಪವನ ಮಹಾಲಿಂಗಪೂರ, ಪ್ರವೀಣ ಧನಶೆಟ್ಟಿ, ಇಮ್ರಾನ ಜಕಾತಿ, ಬಸವರಾಜ ಹುಬ್ಬಳ್ಳಿ, ಸತ್ತೆವ್ವ ತಾಶೀಲದಾರ, ಗಂಗವ್ವ ಹರಿಜನ, ಮಹಾಂತೇಶ ಕುಂಬಾರ, ರಾಜು ನೀಲಜಗಿ, ಜುಬೇರ ಬಣಗಾರ, ರಮೇಶ ಮಾಳಿ ಸೇರಿದಂತೆ ಅನೇಕರು ಇದ್ದರು.

Related posts: