ಬೈಲಹೊಂಗಲ:ಸರಕಾರದ ಯೋಜನೆಗಳ ಸದುಪಯೋಗ ಪಡೆಸಿಕೊಳ್ಳಿ ಜಿ.ಪಂ ಸದಸ್ಯೆ ರೋಹಿಣಿ ಪಾಟೀಲ
ಸರಕಾರದ ಯೋಜನೆಗಳ ಸದುಪಯೋಗ ಪಡೆಸಿಕೊಳ್ಳಿ ಜಿ.ಪಂ ಸದಸ್ಯೆ ರೋಹಿಣಿ ಪಾಟೀಲ
ಬೈಲಹೊಂಗಲ ನ 25: ನಮ್ಮ ಭಾರತ ದೇಶದಲ್ಲಿ ಮಹಿಳೆಯರಿಗೆ ವಿಶೇಷ ಸ್ಥಾನವಿದ್ದರೂ ಸಹ ಆರ್ಥಿಕ ಮತ್ತು ಸಾಮಾಜಿಕವಾಗಿ ಮಹಿಳೆಯರು ಸಬಲೀಕರಣವಾಗದ ಹೊರತು ದೇಶ ಅಭಿವೃದ್ಧಿ ಹೊಂದಲು ಸಾಧ್ಯವಿಲ್ಲ ಎಂದು ಸಂಪಗಾವಿ ಜಿಲ್ಲಾ ಪಂಚಾಯತ್ ಸದಸ್ಯೆ ರೋಹಿಣಿ ಪಾಟೀಲ ಹೇಳಿದರು.
ನೇಗಿನಹಾಳ ಗ್ರಾಮದ ಬನಶಂಕರಿ ದೇವಸ್ಥಾನದ ಸಭಾಭವನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯಿಂದ ಹಮ್ಮಿಕೊಂಡಿದ್ದ ಜ್ಞಾನವಿಕಾಸ, ಸ್ವ-ಉದ್ಯೋಗದ ಮಾಹಿತಿ, ಮಹಿಳಾ ಸಭಲೀಕರಣದ ಕಾರ್ಯಕ್ರಮದಲ್ಲಿ ಉದ್ಘಾಟಕರಾಗಿ ಆಗಮಿಸಿ ಮಾತನಾಡಿದರು. ಮಹಿಳೆಯರು ಸರಕಾರದಿಂದ ದೊರೆಯುವ ಸೌಲಭ್ಯಗಳನ್ನು ಸದ್ಬಳಿಕೆ ಮಾಡಿಕೊಂಡು ಆರ್ಥಿಕವಾಗಿ ಸಧೃಢರಾಗಬೇಕು, ಮಹಿಳೆಯರ ಸಬಲೀಕರಣಕ್ಕಾಗಿ ಧರ್ಮಸ್ಥಳ ಡಾ. ವೀರೇಂದ್ರ ಹೆಗಡೆಯವರ ಕೊಡುಗೆ ಅವಿಸ್ಮರಣೀಯವಾದದ್ದು ಎಂದರು. ಜ್ಞಾನವಿಕಾಸ ಸಮನ್ವಯಧಿಕಾರಿ ನೀಲಮ್ಮ ರಾಯನಾಳ ಮಾತನಾಡಿ ಪ್ರತಿ ತಿಂಗಳು ಸಂಘದ ಸದಸ್ಯರಿಗೆ ಆರೋಗ್ಯ ನೈರ್ಮಲ್ಯ, ಪೌಷ್ಠಿಕ ಆಹಾರ, ಸ್ವ-ಉದ್ಯೋಗ, ಕೌಟುಂಬಿಕ ಸಾಮರಸ್ಯ, ಆರ್ಥಿಕ ಭದ್ರತೆ, ಸರಕಾರಿ ಸೌಲಭ್ಯಗಳ ಕುರಿತು ಮಾಹಿತಿ ನೀಡಿ ಬ್ಯೂಟಿಶಿಯನ್, ಹೊಲಿಗೆ, ಮೋಟಾರ್, ವೈಡಿಂಗ್, ಎಲೆಕ್ಟ್ರೀಕಲ್, ಮೂಬೈಲ್ ರಿಪೇರಿ, ಕೃಷಿ ಸಂಭದಿಸಿದ ತರಬೇತಿ ಆರಂಭಿಸಲಾಗುವುದು ಎಂದರು. ಸಿಂಡ್ ತರಬೇತಿ ಸಂಸ್ಥೆಯ ಉಪನ್ಯಾಸಕಿ ಕು ರಾಜೇಶ್ವರಿ ಉಪನ್ಯಾಸ ನೀಡಿದರು. ವಲಯ ಮೇಲ್ವೀಚಾರಕಿ ಪ್ರೇಮಾ ಎಚ್ ಕಾರ್ಯಕ್ರಮ ಸ್ವಾಗತಿಸಿ, ನಿರೂಪಿಸಿದರು, ಸೇವಾಪ್ರತಿನಿಧಿ ಆಫ್ರಿನ್ ವಂದಿಸಿದರು.