ಗೋಕಾಕ:ದಿ. 6 ರಿಂದ 8 ರವರೆಗೆ ಉಪ್ಪಾರ ಓಣಿಯ ಶ್ರೀ ರೇಣುಕಾದೇವಿಯ ಜಾತ್ರಾ ಮಹೋತ್ಸವ

ದಿ. 6 ರಿಂದ 8 ರವರೆಗೆ ಉಪ್ಪಾರ ಓಣಿಯ ಶ್ರೀ ರೇಣುಕಾದೇವಿಯ ಜಾತ್ರಾ ಮಹೋತ್ಸವ
ಗೋಕಾಕ ಎ 5 : ನಗರದ ಉಪ್ಪಾರ ಓಣಿಯ ಶ್ರೀ ರೇಣುಕಾದೇವಿಯ ಜಾತ್ರಾ ಮಹೋತ್ಸವವು ದಿ. 6 ರಿಂದ 8 ರವರೆಗೆ ಮೂರು ದಿನಗಳ ಕಾಲ ವಿಜೃಂಭಣೆಯಿಂದ ಜರುಗಲಿದೆ.
ದಿ. 6 ರಂದು ಬೆಳಗಿನ ಜಾವ ಅಭಿಷೇಕ ಹಾಗೂ ಮಂಗಳಾರತಿ ನಂತರ 8 ಗಂಟೆಗೆ ನಗರದ ಕೊಳವಿ ಹನುಮಾನ ದೇವಸ್ಥಾನದಿಂದ ಹಂದರ ತಪ್ಪಲನ್ನು ವಾದ್ಯ-ಮೇಳದೊಂದಿಗೆ ತರುವುದು. ಸಾಯಂಕಾಲ 5 ಗಂಟೆಗೆ ನಗರದ ಸುತ್ತಮುತ್ತಲಿನ ದೇವರ ಪಲ್ಲಕ್ಕಿಗಳನ್ನು ಬರಮಾಡಿಕೊಳ್ಳುವುದು. ರಾತ್ರಿ 9 ಗಂಟೆಯಿಂದ ಶ್ರೀ ಭರಮದೇವರ ಗಾಯನ ಸಂಘ ರನ್ನ ಬೆಳಗಲಿ (ಹರದೇಶಿ) ಹಾಗೂ ಶ್ರೀ ದುರ್ಗಾದೇವಿ ಗಾಯನ ಸಂಘ ನಾವಲಗಿ (ನಾಗೇಶಿ) ಇವರಿಂದ ಚೌಡಕಿ ಪದಗಳು ಜರಗುವವು.
ದಿ. 7 ರಂದು ಮುಂಜಾನೆ 7 ಗಂಟೆಗೆ ಶ್ರೀ ದೇವಿಯ ಪಲ್ಲಕ್ಕಿ ಮೆರವಣಿಗೆಯ ಮೂಲಕ ಸಕಲ ವಾಧ್ಯ-ಮೇಳದೊಂದಿಗೆ ಹಾಗೂ ಮುತೈದೆಯರ ಆರತಿ ಅಂಬಲಿ ಬಿಂದಿಗೆಗಳೊಂದಿಗೆ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ನಂತರ ಶ್ರೀ ದೇವಿ ದೇವಸ್ಥಾನ ತಲುಪುವುದು ನಂತರ ನಂತರ ಶ್ರೀ ದೇವಿಗೆ ಉಡಿ ತುಂಬುವ ಕಾರ್ಯಕ್ರಮ ನಂತರ ಮಹಾಪ್ರಸಾದ, ರಾತ್ರಿ 8 ಗಂಟೆಗೆ ಶ್ರೀಫಲಗಳ ಲೀಲಾವು ನಂತರ 9 ಗಂಟೆಗೆ ಪ್ರತಿಕ್ಷಾ ಮೇಲೋಡಿಸ್ ಆರ್ಕೆಷ್ಟ್ರಾ ಗೋಕಾಕ-ಫಾಲ್ಸ ಇವರಿಂದ ರಸಮಂಜರಿ ಕಾರ್ಯಕ್ರಮ ಜರುವುದು.
ದಿ. 8 ರಂದು ಮುಂಜಾನೆ 9 ಗಂಟೆಗೆ ದೇವರ ಪಲ್ಲಕ್ಕಿಗಳನ್ನು ತಮ್ಮ-ತಮ್ಮ ದೇವಸ್ಥಾನಗಳಿಗೆ ಮರಳಿ ಕಳುಹಿಸುವ ಮೂಲಕ ಸಂಪನ್ನಗೊಳ್ಳಲಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾಧಿಗಳು ಪಾಲ್ಗೊಳ್ಳಬೇಕೆಂದು ಜಾತ್ರಾ ಮಹೋತ್ಸವ ಕಮೀಟಿಯವರು ಪತ್ರಿಕಾ ಪ್ರಕಟನೆಯಲ್ಲಿ ಕೋರಿದ್ದಾರೆ
