RNI NO. KARKAN/2006/27779|Wednesday, January 14, 2026
You are here: Home » breaking news » ಗೋಕಾಕ:ನೆಲ,ಜಲ, ಭಾಷೆ ರಕ್ಷಣೆಗಾಗಿ ಕರವೇ ನಿರಂತರ ಹೋರಾಟ ಮಾಡುತ್ತಿದೆ : ಅಪೆಕ್ಸ ಬ್ಯಾಂಕ್ ನಿರ್ದೇಶಕ ರಾಹುಲ್

ಗೋಕಾಕ:ನೆಲ,ಜಲ, ಭಾಷೆ ರಕ್ಷಣೆಗಾಗಿ ಕರವೇ ನಿರಂತರ ಹೋರಾಟ ಮಾಡುತ್ತಿದೆ : ಅಪೆಕ್ಸ ಬ್ಯಾಂಕ್ ನಿರ್ದೇಶಕ ರಾಹುಲ್ 

ನೆಲ,ಜಲ, ಭಾಷೆ ರಕ್ಷಣೆಗಾಗಿ ಕರವೇ ನಿರಂತರ ಹೋರಾಟ ಮಾಡುತ್ತಿದೆ : ಅಪೆಕ್ಸ ಬ್ಯಾಂಕ್ ನಿರ್ದೇಶಕ ರಾಹುಲ್

ಗೋಕಾಕ ಡಿ 7 : ಕನ್ನಡದ ನೆಲ,ಜಲ, ಭಾಷೆ, ಸಂಸ್ಕೃತಿಯ ರಕ್ಷಣೆಗಾಗಿ ಕರ್ನಾಟಕ ರಕ್ಷಣಾ ವೇದಿಕೆ ನಿರಂತರ ಹೋರಾಟ ಮಾಡುತ್ತಿದೆ ಎಂದು ಡಿಸಿಸಿ ಹಾಗೂ ಅಪೆಕ್ಸ ಬ್ಯಾಂಕ್ ನಿರ್ದೇಶಕ ರಾಹುಲ್ ಜಾರಕಿಹೊಳಿ ಹೇಳಿದರು.

ಶನಿವಾರದಂದು ನಗರದ ನ್ಯೂ ಇಂಗ್ಲಿಷ್ ಸ್ಕೂಲ್ ಕನ್ನಡ ಮಾಧ್ಯಮ ಶಾಲಾ ಆವರಣದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಗೋಕಾಕ ತಾಲೂಕು ಘಟಕ ಹಾಗೂ ಕರವೇ ಸಾಂಸ್ಕೃತಿಕ ಘಟಕದಿಂದ ರಾಜ್ಯೋತ್ಸವ ಸಂಭ್ರಮದ ನಿಮಿತ್ತ ಹಮ್ಮಿಕೊಂಡ ಹಾಸ್ಯ ರಸಮಂಜರಿ ಕಾರ್ಯಕ್ರಮದಲ್ಲಿ ಸತ್ಕಾರ ಸ್ವೀಕರಿಸಿ ಮಾತನಾಡಿದರು.

ರಾಜ್ಯಾದ್ಯಂತ ಕರವೇ ಸಂಘಟನೆಯನ್ನು ಬಲಿಷ್ಠ ಗೋಳಿಸುತಾ ಯುವಕರಲ್ಲಿ ಕನ್ನಡಾಭಿಮಾನವನ್ನು ಮೂಡಿಸುತ್ತಿದೆ. ನಾಡಿನ ರಕ್ಷಣೆಗೆಗಾಗಿ ಹೋರಾಡಿದ ವ್ಯಕ್ತಿಗಳನ್ನು ನೆನಪಿಸುವ ಮೂಲಕ ಯುವಕರಲ್ಲಿ ಸ್ಪೂರ್ತಿ ಮೂಡಿಸುತ್ತಿದೆ.ಮಕ್ಕಳಿಗೆ ಕನ್ನಡದಲ್ಲಿ ಶಿಕ್ಷಣ ಕೋಡಿಸುವ ಮೂಲಕ ಕನ್ನಡಕ್ಕೆ ಆದ್ಯತೆ ಕೊಡಬೇಕು. ಎಲ್ಲರೂ ಕನ್ನಡ ಭಾಷೆಯನ್ನು ಓದಿ ಬರೆಯುವಂತೆ ಮಾಡಬೇಕು. ರಾಜಕೀಯ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ಯುವ ಪೀಳಿಗೆ ಮುಂದೆ ಬರಬೇಕು. ಯುವಶಕ್ತಿಗೆ ಹೆಚ್ಚಿನ ಬಲವಿದ್ದು, ಅದರ ಸದುಪಯೋಗವಾಗಲು ಯುವಕರು ಎಲ್ಲ ಕ್ಷೇತ್ರದಲ್ಲಿ ಮುಂಚೂಣಿಗೆ ಬರಬೇಕಾಗಿದೆ.

ಅಭಿವೃದ್ಧಿ ದೃಷ್ಟಿಯಿಂದ ಗೋಕಾಕ ಜಿಲ್ಲೆ ಮಾಡಬೇಕಾಗಿದೆ‌.ಇದರಿಂದ ಉದ್ಯೋಗ ಕ್ಷೇತ್ರ ಬೆಳೆದು ಯುವಕರಿಗೆ ಉದ್ಯೋಗವಕಾಶ ದೊರೆಯುತ್ತದೆ. ಜನರ ಬಹುದಿನಗಳ ಆಶಯವಾಗಿರುವ ವೈದ್ಯಕೀಯ ಕಾಲೇಜು ಸೇರಿದಂತೆ ಇತರ ಕಾಲೇಜುಗಳು ಪ್ರಾರಂಭಗೊಂಡು ಶೈಕ್ಷಣಿಕ ಪ್ರಗತಿ ಆಗುತ್ತದೆ. ಗೋಕಾಕ ಜಿಲ್ಲೆಯನ್ನಾಗಿ ಮಾಡಲು ತಂದೆ ಸಚಿವ ಸತೀಶ ಜಾರಕಿಹೊಳಿ ಅವರು ಪ್ರಯತ್ನ ಶೀಲರಾಗಿದ್ದು, ನಾವೆಲ್ಲ ಅವರಿಗೆ ಸಹಕರಿಸೋಣ ಎಂದರು.

ಇದೇ ಸಂದರ್ಭದಲ್ಲಿ ಕರ್ನಾಟಕ ಉಪ್ಪಾರ ಅಭಿವೃದ್ಧಿ ನಿಗಮದ ಅಧ್ಯಕ್ಷ ಭರಮಣ್ಣ ಉಪ್ಪಾರ, ಲಕ್ಷ್ಮೀ ಎಜುಕೇಶನ್ ಟ್ರಸ್ಟ್ ನ ನಿರ್ದೇಶಕ ಸರ್ವೋತ್ತಮ ಜಾರಕಿಹೊಳಿ, ಘಟಪ್ರಭಾ ಸಹಕಾರಿ ಸಕ್ಕರೆ ಕಾರಖಾನೆಯ ನಿರ್ದೇಶಕ ಆರೀಫ ಪೀರಜಾದೆ ಅವರನ್ನು ಸತ್ಕರಿಸಲಾಯಿತು.

ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಅಂಕಲಗಿ ಅಡವಿಸಿದ್ದೇಶ್ವರ ಮಠದ ಪ‌.ಪೂ ಡಾ.ಅಮರಸಿದ್ದೇಶ್ವರ ಮಹಾಸ್ವಾಮಿಗಳು, ಶೂನ್ಯ ಸಂಪಾದನ ಮಠದ ಬಸವಪ್ರಭು ಸ್ವಾಮೀಜಿ, ಉದಗಟ್ಟಿಯ ಶ್ರೀ ಶ್ರಿದೇವಿ ಅಮ್ಮಾಜೀ ವಹಿಸಿದ್ದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರವೇ ಜಿಲ್ಲಾಧ್ಯಕ್ಷ ದೀಪಕ್ ಗುಡಗನಟ್ಟಿ ವಹಿಸಿದ್ದರು.

ವೇದಿಕೆಯಲ್ಲಿ ಕರವೇ ರಾಜ್ಯ ಸಂಚಾಲಕ ಸುರೇಶ್ ಗವನ್ನವರ, ತಾಲೂಕು ಅಧ್ಯಕ್ಷ ಬಸವರಾಜ ಖಾನಪ್ಪನರ, ಡಾ‌.ರವೀಂದ್ರ ಅಂಟಿನ, ಮಹೆಬೂಬ ಮಂಕಾದಾರ, ಕರವೇ ಸಾಂಸ್ಕೃತಿಕ ಘಟಕದ ಶಿವಾಜಿ ಪಾಟೀಲ, ಗುರುಪಾದ ಮದನ್ನವರ, ಶಶಿ ಕನ್ನಪ್ಪನವರ ಉಪಸ್ಥಿತರಿದ್ದರು.

Related posts: