ಗೋಕಾಕ:ಎ 27 ರಿಂದ ಮೂರು ದಿನಗಳ ಕಾಲ ಬೆಟಗೇರಿಯಲ್ಲಿ ಪುನಶ್ಚೇತನ ಶಿಬಿರ
ಎ 27 ರಿಂದ ಮೂರು ದಿನಗಳ ಕಾಲ ಬೆಟಗೇರಿಯಲ್ಲಿ ಪುನಶ್ಚೇತನ ಶಿಬಿರ
ನಮ್ಮ ಬೆಳಗಾವಿ ಸುದ್ದಿ , ಕೌಜಲಗಿ ಏ 25 :
ಗೋಕಾಕದ ಶಿವಾ ಫೌಂಡೇಶನ್ ಹಾಗೂ ಕಟಕೋಳದ ಚೈತನ್ಯ ವುಮೆನ್ಸ್ ಸೋಸಾಯಿಟಿ ಸಹಯೋಗದಲ್ಲಿ ಸಮೀಪದ ಬೆಟಗೇರಿ ಗ್ರಾಮದ ಚೈತನ್ಯ ಗ್ರುಪ್ಸ್‍ನ ಕನ್ನಡ ಹಾಗೂ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ವಸತಿ ಶಾಲೆಯಲ್ಲಿ ಇದೇ ಶನಿವಾರ ಎ.27 ರಿಂದ ಎ.29 ರವರೆಗೆ ನಿರ್ಗತಿಕ, ಅನಾಥ, ಅಂಗವಿಕಲ ಹಾಗೂ ಎಚ್‍ಐವಿ ಬಾಧಿತ ಮಕ್ಕಳಿಗಾಗಿ ಪುನಃಶ್ಚೇತನ ಶಿಬಿರ ಆಯೋಜಿಸಲಾಗಿದೆ.
ಬೆಳಗಾವಿ ಜಿಲ್ಲೆ ಸೇರಿದಂತೆ ವಿವಿಧ ನಗರ, ಪಟ್ಟಣ, ಹಳ್ಳಿಗಳಲ್ಲಿರುವ ನಿರ್ಗತಿಕ, ಅನಾಥ, ಅಂಗವಿಕಲ ಹಾಗೂ ಎಚ್‍ಐವಿ ಬಾಧಿತ ಮಕ್ಕಳು ಶಿಬಿರದಲ್ಲಿ ಪಾಲ್ಗೊಳ್ಳಲು ಶನಿವಾರ ಎ.27 ರಂದು ಮುಂಜಾನೆ 10 ಗಂಟೆಯೊಳಗೆ ಹೆಸರು ನೊಂದಾಯಿಸಿಕೊಳ್ಳಬೇಕು. ವಿವಿಧ ಜಿಲ್ಲೆ, ತಾಲೂಕಿನ ಹಲವು ಎನ್‍ಜಿಒಗಳು ಈ ಶಿಬಿರವನ್ನು ಪ್ರತಿನಿಧಿಸಲಿವೆ ಎಂದು ಗ್ರಾಮದ ಚೈತನ್ಯ ಗ್ರುಪ್ಸ್‍ನ ಕನ್ನಡ ಹಾಗೂ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ವಸತಿ ಶಾಲೆಯ ಆಡಳಿತಾಧಿಕಾರಿ ಚಂದ್ರು ಹಾಲೋಳ್ಳಿ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಮೊ.ನಂ-9663141977, 9019295556, 6360143005, 9900577195 ಗೆ ಸಂಪರ್ಕಿಸಬೇಕೆಂದು ಕೋರಿದ್ದಾರೆ.