RNI NO. KARKAN/2006/27779|Tuesday, January 27, 2026
You are here: Home » breaking news » ಘಟಪ್ರಭಾ:ವೃತ್ತಿ ನಿರತರರಿಗಾಗಿ ಕ್ರಿಕೇಟ್ ಪಂದ್ಯವಾಳಿ ಆಯೋಜನೆ

ಘಟಪ್ರಭಾ:ವೃತ್ತಿ ನಿರತರರಿಗಾಗಿ ಕ್ರಿಕೇಟ್ ಪಂದ್ಯವಾಳಿ ಆಯೋಜನೆ 

ವೃತ್ತಿ ನಿರತರರಿಗಾಗಿ ಕ್ರಿಕೇಟ್ ಪಂದ್ಯವಾಳಿ ಆಯೋಜನೆ

ಘಟಪ್ರಭಾ ನ 9: ಕೆಲಸದ ಒತ್ತಡ ಹಾಗೂ ಸದಾ ವ್ಯವಹಾರದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ವೃತ್ತಿ ನಿರತರರಿಗಾಗಿ 5ನೇ ಬಾರಿಗೆ ಅನುಕಂಪ ಗ್ರುಪ್, ಕಾರ್ಯನಿರತ ಪತ್ರಕರ್ತರು ಹಾಗೂ ಸಂಗಮ ಆಫ್‍ಸೆಟ್ ಘಟಪ್ರಭಾ ಇವರ ಸಂಯುಕ್ತ ಆಶ್ರಯದಲ್ಲಿ ಕರ್ನಾಟಕ ರಾಜ್ಯೋತ್ಸವ ನಿಮಿತ್ಯವಾಗಿ ಒಂದು ದಿನದ ಮಟ್ಟಿಗೆ “ಡಾ| ಮೂಜಗಂ ಟ್ರೋಫಿ-2017” ಕ್ರೀಕೆಟ್ ಪಂದ್ಯಾವಳಿಯನ್ನು ನ.11 ರಂದು ಇಲ್ಲಿಯ ಎಸ್.ಡಿ.ಟಿ ಕಾಲೇಜ ಮೈದಾನದಲ್ಲಿ ಆಯೋಜಿಸಲಾಗಿದೆ.
ಕೇವಲ ಉದ್ಯೋಗಿಗಳಿಗೆ ಸ್ನೇಹ ಪೂರ್ವಕವಾಗಿ ಒಂದು ದಿನದ ಮಟ್ಟಿಗೆ ಮಾತ್ರ ಏರ್ಪಡಿಸಲಾಗಿರುವ ಈ ಪಂದ್ಯಾವಳಿಯಲ್ಲಿ ಪತ್ರಕರ್ತರು ಹಾಗೂ ಕಂದಾಯ ಇಲಾಖೆ, ಸ್ವಾಮಿಜೀಗಳು, ವೈದ್ಯರು, ನ್ಯಾಯವಾದಿಗಳು, ಶಿಕ್ಷಣ ಇಲಾಖೆ, ಪಂಚಾಯತರಾಜ್, ಗುತ್ತಿಗೆದಾರರು, ರಾಜಕೀಯ, ಪೊಲೀಸ ಇಲಾಖೆ, ಹೆಸ್ಕಾಂ ಇಲಾಖೆ ಮತ್ತು ವ್ಯಾಪಾರಸ್ಥರು ಹೀಗೆ 11 ತಂಡಗಳು ಭಾಗವಹಿಸಲಿವೆ.

ಪಂದ್ಯಾವಳಿಯ ವಿಜೇತರಿಗೆ ಗೋಕಾಕ ರೋಟರಿ ರಕ್ತ ಭಂಡಾರ ಕೇಂದ್ರದಿಂದ ಟ್ರೋಫಿಯನ್ನು ವಿತರಿಸಲಾಗುವುದು. ಪಂದ್ಯಾವಳಿಯನ್ನು ಮೂರು ಸಾವಿರ ಶಾಖಾ ಮಠದ ಮಲ್ಲಿಕಾರ್ಜುನ ಮಹಾಸ್ವಾಮಿಗಳು ಹಾಗೂ ಸ್ಥಳೀಯ ಮುಖಂಡರು ಉದ್ಘಾಟಿಸಲಿದ್ದಾರೆ. ಸಂಜೆ ಜರುಗುವ ಬಹುಮಾನ ವಿತರಣಾ ಸಮಾರಂಭದಲ್ಲಿ ಗೋಕಾಕ ರಕ್ತ ಭಂಡಾರ ಕೇಂದ್ರದ ನಿರ್ದೇಶಕರಾದ ಮಲ್ಲಿಕಾರ್ಜುನ ಕಲ್ಲೋಳಿ, ಮಹಾಂತೇಶ ತಾವಂಶಿ, ಸೋಮಶೇಖರ ಮಗದುಮ ಭಾಗವಹಿಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Related posts: