RNI NO. KARKAN/2006/27779|Wednesday, July 30, 2025
You are here: Home » breaking news » ಗೋಕಾಕ:ಕ್ರೀಡೆಗಳಿಂದ ಶರೀರ ಸದೃಢವಾಗಿ ಸಾಧನೆಗೆ ಸಹಕಾರಿಯಾಗುತ್ತದೆ : ರಾಮಚಂದ್ರ ಏಕಡೆ

ಗೋಕಾಕ:ಕ್ರೀಡೆಗಳಿಂದ ಶರೀರ ಸದೃಢವಾಗಿ ಸಾಧನೆಗೆ ಸಹಕಾರಿಯಾಗುತ್ತದೆ : ರಾಮಚಂದ್ರ ಏಕಡೆ 

ಕ್ರೀಡೆಗಳಿಂದ ಶರೀರ ಸದೃಢವಾಗಿ ಸಾಧನೆಗೆ ಸಹಕಾರಿಯಾಗುತ್ತದೆ : ರಾಮಚಂದ್ರ ಏಕಡೆ

ಗೋಕಾಕ ಜು 20 : ಪಠೇದಷ್ಟೆ ಪಠ್ಯೇತರ ಚಟುವಟಿಕೆಗಳು ವಿದ್ಯಾರ್ಥಿಗಳ ಸರ್ವಾಂಗೀಣಯ ಬೆಳವಣಿಗೆಯಲ್ಲಿ ಮಹತ್ವದ ಪಾತ್ರ ವಹಿಸುತ್ತವೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ರಾಮಚಂದ್ರ ಏಕಡೆ ಹೇಳಿದರು.
ರವಿವಾರದಂದು ಕೆ.ಎಲ್.ಇ ಸಂಸ್ಥೆಯ ಸಿ.ಎಸ್.ಅಂಗಡಿ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡ ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳ ಉದ್ಘಾಟನಾ ಸಮಾರಂಭ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ವ್ಯಕ್ತಿಯ ಶರೀರ, ಮನಸ್ಸು ಹಾಗೂ ಬುದ್ದಿ ವಿಕಾಸವಾಗಬೇಕು. ಕ್ರೀಡೆಗಳಿಂದ ಶರೀರ ಸದೃಢವಾಗಿ ಸಾಧನೆಗೆ ಸಹಕಾರಿಯಾಗುತ್ತದೆ. ನಮ್ಮ ಸಂಸ್ಕೃತಿಯನ್ನು ಜೀವನದಲ್ಲಿ ಅಳವಡಿಸಿಕೊಂಡು ಮಹಾಪುರುಷರ ಸಂದೇಶವನ್ನು ಆಚರಣೆಗೆ ತರಬೇಕು. ಶಾಲೆ ಜೀವನಕ್ಕೊಂದು ಪಾಠ ಕೊಡುತ್ತದೆ. ಆಟ ,ಊಟ ಪಾಠಕ್ಕೆ ಮಹತ್ವ ನೀಡಿ ಜ್ಞಾನದ ಹಸಿವನ್ನು ಇಂಗಿಸಬೇಕು. ಗುರುಗಳ ಮಾರ್ಗದರ್ಶನದಲ್ಲಿ ಕಠಿಣ ಪರಿಶ್ರಮದಿಂದ ಪ್ರಯತ್ನ ಶೀಲರಾಗಿ ಪ್ರತಿಭಾವಂತರಾಗಿ ಎಂದು ಹಾರೈಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸ್ಥಳೀಯ ಕೆಎಲ್ಇ ಸಂಸ್ಥೆಯ ಅಧ್ಯಕ್ಷ ಎಂ.ಡಿ.ಚುನಮರಿ ವಹಿಸಿದ್ದರು.
ಈ ಸಂದರ್ಭದಲ್ಲಿ ಆಡಳಿತಾಧಿಕಾರಿ ಜಿ.ಎಂ.ಅಂದಾನಿ, ಓಂಪ್ರಕಾಶ್ ಅಂಗಡಿ, ಅಮೃತ ಜಕ್ಕಲಿ, ಎಂ.ಎಸ್.ಕಾಮಗೌಡರ, ಜಿ.ಎಂ ಬಿರಾದಾರ ಉಪಸ್ಥಿತರಿದ್ದರು.

Related posts: