ಗೋಕಾಕ:ಭಂಡಾರಮಯವಾದ ರಸ್ತೆಗಳನ್ನು ಮುತುವರ್ಜಿ ವಹಿಸಿ ಸ್ವಚ್ಛಗೊಳಿಸಿದ ಸಚಿವ ಸತೀಶ

ಭಂಡಾರಮಯವಾದ ರಸ್ತೆಗಳನ್ನು ಮುತುವರ್ಜಿ ವಹಿಸಿ ಸ್ವಚ್ಛಗೊಳಿಸಿದ ಸಚಿವ ಸತೀಶ ಜಾರಕಿಹೊಳಿ
ಗೋಕಾಕ ಜು 5 : ಐತಿಹಾಸಿಕ ಗ್ರಾಮ ದೇವತೇಯರ ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ಕಳೆದ ಮೂರು ದಿನಗಳಿಂದ ನಡೆದ ರಥೋತ್ಸವದಲ್ಲಿ ಭಂಡಾರದಲ್ಲಿ ಮಿಂದೆದ್ದ ನಗರವನ್ನು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಸೂಚನೆ ಮೆರೆಗೆ ರಾತ್ರೋರಾತ್ರಿ ಸ್ವಚ್ಚಗೊಳಿಸಲಾಗಿದೆ.
ಶುಕ್ರವಾರ ರಾತ್ರಿ ನಗರದ ರಸ್ತೆ ಬೀದಿಗಳಲ್ಲಿ ಬಿದ್ದಿದ ಭಂಡಾರವನ್ನು ಸತೀಶ ಶುರ್ಗಸ್ಸ ಲಿಮಿಟೆಡ್ ನ ಅಗ್ನಿ ಶಾಮಕ ದಳದ ಸಿಬ್ಬಂದಿಗಳು ನೀರಿನಿಂದ ಸಚ್ಚಗೊಳಿಸಿ ವಾಹನ ಮತ್ತು ಸಾರ್ವಜನಿಕ ಸಂಚಾರವನ್ನು ಸುಗಮಗೊಳಿದರು. ಸಚಿವರ ಈ ಕಾರ್ಯಕ್ಕೆ ಜನತೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ನಗರದ ಬಸವೇಶ್ವರ ವೃತ್ತದಿಂದ ಲಕ್ಷೀ ದೇವಿ ದೇವಸ್ಥಾನ, ಸೋಮವಾರ ಪೇಠೆಯಿಂದ, ಸಂಗೋಳಿ ರಾಯಣ್ಣ ವೃತ್ತ, ಸಂಗೋಳಿ ರಾಯಣ್ಣ ವೃತ್ತದಿಂದ, ಹನುಮಂತ ದೇವರ ಗುಡಿ ಮತ್ತು ಬಸವೇಶ್ವರ ವೃತ್ತ ಸೇರಿದಂತೆ ಅನೇಕ ರಸ್ತೆಗಳು ಸಂಪೂರ್ಣ ಭಂಡಾರವಯವಾಗಿದ್ದು, ಸಾಯಂಕಾಲ ಬಸವೇಶ್ವರ ವೃತ್ತದ ತಮ್ಮ ಕಛೇರಿಯಲ್ಲಿಯೇ ಕುಳಿತಿದ್ದ ಸಚಿವರು ವಾಹನ ಸವಾರರು ಜಾರಿ ಬಿಳುವುದನ್ನು ಕಂಡು ತಮ್ಮ ಸತೀಶ ಶುಗರ್ಸ ಕಾರಖಾನೆಯ ಅಗ್ನಿಶಾಮಕ ವಾಹನವನ್ನು ಕರೆಯಿಸಿ ದ್ವಿಚಕ್ರ ವಾಹನ ಮತ್ತು ಜನರ ರಸ್ತೆ ಸಂಚಾರಕ್ಕೆ ಅಡಚನೆ ಉಂಟಾಗಿ ಅಫಘಾತ ಸಂಭವಿಸಬಾರದೆಂಬ ಹಿನ್ನೆಲೆಯಲ್ಲಿ ಸಚಿವ ಸತೀಶ ಜಾರಕಿಹೊಳಿ ಅವರು ವಿಶೇಷ ಮುತುವರ್ಜಿ ವಹಿಸಿ ಸ್ವತಃ ತಾವೇ ಮುಂದೆ ನಿಂತು ಸ್ವಚ್ಛತಾ ಕಾರ್ಯಾಚರಣೆಯನ್ನು ಯಶಸ್ವಿಗೋಳಿಸಿದ್ದಾರೆ. ಸಚಿವರ ಈ ಸಾಮಾಜಿಕ ಕಳಕಳಿ ರಥೋತ್ಸವ ಯಶಸ್ವಿಗೆ ಕಾರಣವಾಗಿದೆ.
ಈ ಸಚ್ಚತಾ ಕಾರ್ಯಕ್ಕೆ ಶಿವು ಪಾಟೀಲ, ಆರೀಫ ಪೀರಜಾದೆ ಸೇರಿದಂತೆ ಸತೀಶ ಶುರ್ಗಸ್ಸ ಅಗ್ನಿಶಾಮಕ ದಳದ ಸಿಬ್ಬಂದಿಗಳು ಸಾಥ್ ನೀಡಿದರು.