ಗೋಕಾಕ:ದಿನಾಂಕ 27 ರಿಂದ ಗೋಕಾಕದಲ್ಲಿ ” ಗಂಗಿ ಮನ್ಯಾಗ ಗೌರಿ ಹೊಲದಾಗ್ ನಾಟಕ :ರಂಗ ಕಲಾವಿದೆ ಸುಜಾತಾ ಜೇರ್ವಗಿ

ದಿನಾಂಕ 27 ರಿಂದ ಗೋಕಾಕದಲ್ಲಿ ” ಗಂಗಿ ಮನ್ಯಾಗ ಗೌರಿ ಹೊಲದಾಗ್ ನಾಟಕ :ರಂಗ ಕಲಾವಿದೆ ಸುಜಾತಾ ಜೇರ್ವಗಿ
ಗೋಕಾಕ ಜೂ 25 : ರಾಜ್ಯದಲ್ಲೇ ರಂಗ ನಾಟಕಗಳಿಗೆ ಜನ್ಮ ನೀಡಿದ ಊರು ಗೋಕಾಕ ತಾಲೂಕಿನ ಕೊಣ್ಣೂರ ಆಗಿದ್ದು, ತಾಲೂಕಿನ ಜನತೆ ರಂಗಭೂಮಿ ಕಲಾವಿದರನ್ನು ಪ್ರೋತ್ಸಾಹಿಸಿ ಬೆಳೆಸುವಂತೆ ರಂಗ ಕಲಾವಿದೆ ಸುಜಾತಾ ಜೇರ್ವಗಿ ಹೇಳಿದರು.
ಬುಧವಾರದಂದು ನಗರದಲ್ಲಿ ಕರೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡುತ್ತಾ ಗೋಕಾಕ ಗ್ರಾಮ ದೇವತೆಯರ ಜಾತ್ರಾ ನಿಮಿತ್ತ ರಾಜಣ್ಣ ಜೇರ್ವಗಿ ಮಾಲಿಕತ್ವದ ವಿಶ್ವ ಜ್ಯೋತಿ ಶ್ರೀ ಪಂಚಾಕ್ಷರ ನಾಟ್ಯ ಸಂಘದಿಂದ ದಿನಾಂಕ 27 ರಿಂದ ಪ್ರಾರಂಭಿಸಲಾಗುವ ” ಗಂಗಿ ಮನ್ಯಾಗ ಗೌರಿ ಹೊಲದಾಗ್” ಎಂಬ ಸುಂದರ ಸಾಮಾಜಿಕ ನಾಟಕಕ್ಕೆ ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಪ್ರೋತ್ಸಾಹಿಸುವಂತೆ ಕೋರಿದರು.
ದಿನಾಂಕ 27 ಸಂಜೆ 6:30 ಕ್ಕೆ ಸಂಗೋಳಿ ರಾಯಣ್ಣ ವೃತ್ತದ ಸಮೀಪದಲ್ಲಿ ನಿರ್ಮಿಸಿರುವ ರಂಗ ಮಂದಿರದಲ್ಲಿ ಜರುಗುವ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ವಹಿಸುವರು. ಉದ್ಘಾಟಕರಾಗಿ ಶಾಸಕರುಗಳಾದ ರಮೇಶ ಜಾರಕಿಹೊಳಿ, ಬಾಲಚಂದ್ರ ಜಾರಕಿಹೊಳಿ ಆಗಮಿಸುವರು. ಮುಖ್ಯ ಅತಿಥಿಗಳಾಗಿ ಕಾಂಗ್ರೆಸ್ ಮುಖಂಡ ಅಶೋಕ ಪೂಜಾರಿ, ಸಿದ್ದಲಿಂಗಯ ದಳವಾಯಿ, ಪ್ರಕಾಶ ಮುರಾರಿ, ತಹಶೀಲ್ದಾರ ಮೋಹನ ಭಸ್ಮೆ, ಡಿ.ವಾಯ್.ಎಸ್.ಪಿ ರವಿ ನಾಯಿಕ, ಮಹಾಂತೇಶ ತಾವಂಶಿ, ಚಂದ್ರಶೇಖರ್ ಕೊಣ್ಣೂರ, ಕೀಶೋರ ಭಟ್, ಅಬ್ಬಾಸ ದೇಸಾಯಿ, ಯಂಕವ್ವ ಶಾಸ್ತ್ರಿ ಗೋಲ್ಲರ ,ಜವಹಾರ ಸಾತಪುತೆ ಆಗಮಿಸಲ್ಲಿದ್ದಾರೆ. ಈ ಕಾರ್ಯಕ್ರಮಕ್ಕೆ ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ಸುಜಾತಾ ಜೇರ್ವಗಿ ವಿನಂತಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಕಲಾವಿದರಾದ ನೀಲಾ ಜೇರ್ವಗಿ, ಶಂಕರ ಮ್ಯಾನೇಜರ್ ಚೌಡಾಪೂರ ಉಪಸ್ಥಿತರಿದ್ದರು.