ಗೋಕಾಕ:ರಹೆಮಾನ ಪೌಂಡೇಶನ್ ವತಿಯಿಂದ ರೇನ್ ಕೋಟ, ಬ್ಯಾಗ , ನೋಟಬುಕ್ಕ ವಿತರಣೆ

ರಹೆಮಾನ ಪೌಂಡೇಶನ್ ವತಿಯಿಂದ ರೇನ್ ಕೋಟ, ಬ್ಯಾಗ , ನೋಟಬುಕ್ಕ ವಿತರಣೆ
ಗೋಕಾಕ ಜೂ 24 : ಪುರುಷನಷ್ಟೇ ಸಮಾನತೆಯನ್ನು ಹೊಂದಿರುವ ಮಹಿಳೆಯರು ಈ ದೇಶದ ಬಹುದೊಡ್ಡ ಶಕ್ತಿಯಾಗಿದ್ದಾರೆ ಎಂದು ರಹೆಮಾನ ಪೌಂಡೇಶನ್ ಮುಖ್ಯಸ್ಥೆ ಶ್ರೀಮತಿ ಸುಮ್ಮಯ್ಯಾ ನೋಮಾನಿ ಹೇಳಿದರು.
ಸ್ಥಳೀಯ ರಹೆಮಾನ ಪೌಂಡೇಶನ್ ಶಾಖೆಯ ವತಿಯಿಂದ ಮಹಿಳಾ ಪೌರಕಾರ್ಮಿಕರಿಗೆ ಹಮ್ಮಿಕೊಂಡ ಸತ್ಕಾರ ಹಾಗೂ ರೇನ್ ಕೋಟ ವಿತರಣೆ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು
ಸಮಾಜದಲ್ಲಿ ಮಹಿಳೆಯರು ಮತ್ತು ಪುರುಷರು ಸರಿ ಸಮಾನರು. ಎಲ್ಲಿ ಮಹಿಳೆಯನ್ನು ಪೂಜಿಸುತ್ತಾರೋ ಅಲ್ಲಿ ದೇವರು ನೆಲೆಸಿರುತ್ತಾರೆ ಎನ್ನುವ ಭಾವನೆ ಗ್ರಂಥಗಳಲ್ಲಿ ಅಡಕವಾಗಿದೆ. ಪ್ರತಿ ಮಗುವಿಗೆ ಮನೆಯೇ ಮೊದಲ ಪಾಠ ಶಾಲೆ. ಹಾಗೆಯೇ ತಾಯಿಯೇ ಮೊದಲ ಗುರು. ಮಹಿಳೆಯು ಒಂದು ಸಮುದಾಯದ ಹಾಗೂ ದೇಶದ ಅಭಿವೃದ್ದಿಗೆ ಕಾರಣಕರ್ತಳಾಗುತ್ತಾಳೆ. ಅವರಿಗೆ ಸಿಗಬೇಕಾದ ಸ್ಥಾನಮಾನ, ಗೌರವ ಕೊಡುವುದು ಎಲ್ಲರ ಕರ್ತವ್ಯವಾಗಿದೆ. ಪ್ರತಿ ಮಹಿಳೆಯು ಸಾಮಾಜಿಕ ವ್ಯವಹಾರಗಳ ಮೂಲಕ ಆರ್ಥಿಕ ಭದ್ರತೆಯನ್ನು ಕಂಡುಕೊಳ್ಳುವಲ್ಲಿ ಮುಂದಾಗಬೇಕು ಎಂದು ಅವರು ಸಲಹೆ ನೀಡಿದರು.
ಇದೇ ಸಂದರ್ಭದಲ್ಲಿ ನಗರ ಸಭೆಯ 39 ಮಹಿಳಾ ಕಾರ್ಮಿಕರಿಗೆ ಮತ್ತು ಕೊಣ್ಣೂರ ಪಟ್ಟಣ ಪಂಚಾಯಿತಿಯ ಪೌರ ಕಾರ್ಮಿಕರಿಗೆ ಮಳೆಯಿಂದ ರಕ್ಷಸುವ ಸಲುವಾಗಿ ರೇನ್ ಕೋಟ ಹಾಗೂ ತಾಲೂಕಿನ ವಿವಿಧ ಪ್ರಾಥಮಿಕ ಶಾಲಾ ಮಕ್ಕಳಿಗೆ ನೋಟಬುಕ್ಕ, ಬ್ಯಾಗ್ ಗಳನ್ನು ರಹೆಮಾನ ಪೌಂಡೇಶನ್ ವತಿಯಿಂದ ವಿತರಿಸಿ, ಗೌರವಿಸಲಾಯಿತು.
ಈ ಸಂದರ್ಭದಲ್ಲಿ ರಹೆಮಾನ ಪೌಂಡೇಶನ್ ಮುಂಬೈನ ನಸೀಮ್ ಬಾಯಿ, ಮುಖಂಡರುಗಳಾದ ಮೌಲಾನಾ ಅಬ್ಬದುಲ್ಲಾ , ಹಾಜಿ ಸಲೀಮ ಅಮ್ಮಣಗಿ, ಹಾಜಿ ಫಯಾಜ ಕಮತನೂರ, ಮಹ್ಮದಲ್ಲಿ ಮಾರಿಹಾಳ, ಆಫತಾಬ ಕಮತನೂರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.