ಗೋಕಾಕ:ಮನೆ ಬಾಗಿಲು ಮುರಿದು ಅಪಾರ ಪ್ರಮಾಣದ ಚಿನ್ನಾಭರಣ ಕಳ್ಳತನ : ಗೋಕಾಕ ನಗರದಲ್ಲಿ ಘಟನೆ

ಮನೆ ಬಾಗಿಲು ಮುರಿದು ಅಪಾರ ಪ್ರಮಾಣದ ಚಿನ್ನಾಭರಣ ಕಳ್ಳತನ : ಗೋಕಾಕ ನಗರದಲ್ಲಿ ಘಟನೆ
ಗೋಕಾಕ ಜೂ 21 : ನಗರದ ಬಸವನಗರದ ಮನೆಯೊಂದರಲ್ಲಿ ಬಾಗಿಲು ಮುರಿದು 12 ತೊಲೆ ಬಂಗಾರ, 20 ತೊಲೆ ಬೆಳ್ಳಿ ಮತ್ತು 50 ಸಾವಿರ ನಗದು ಹಣ ಕದ್ದು ಖದೀಮರು ಪರಾರಿಯಾಗಿರುವ ಘಟನೆ ಶುಕ್ರವಾರ ರಾತ್ರಿ ನಡೆದಿದೆ.
ಬಸವನಗರದ ಸುಧಾಕರ ಚಿಂಚಲಿ ಎಂಬುವವರ ಮನೆಯಲ್ಲಿ ಯಾರು ಇಲ್ಲದನ್ನು ಗಮನಿಸಿದ ಕಳ್ಳರು ಮನೆಯಲ್ಲಿಯ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ.
ಘಟನಾ ಸ್ಥಳಕ್ಕೆ ಗೋಕಾಕ ಶಹರ ಪೊಲೀಸರು ಮತ್ತು ಶ್ವಾನದಳ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಈ ಕುರಿತು ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.