RNI NO. KARKAN/2006/27779|Thursday, July 31, 2025
You are here: Home » breaking news » ಗೋಕಾಕ:ಕೋಮು ಸಾಮರಸ್ಯದ ಸಂದೇಶವನ್ನು ಇಡಿ ಜಗತ್ತಿಗೆ ಪರಿಚಯಿಸಿದ ಕೀರ್ತಿ ಕನಕದಾಸರಿಗೆ ಸಲುತ್ತದೆ: ಸಚಿವ ರಮೇಶ

ಗೋಕಾಕ:ಕೋಮು ಸಾಮರಸ್ಯದ ಸಂದೇಶವನ್ನು ಇಡಿ ಜಗತ್ತಿಗೆ ಪರಿಚಯಿಸಿದ ಕೀರ್ತಿ ಕನಕದಾಸರಿಗೆ ಸಲುತ್ತದೆ: ಸಚಿವ ರಮೇಶ 

ಕೋಮು ಸಾಮರಸ್ಯದ ಸಂದೇಶವನ್ನು ಇಡಿ ಜಗತ್ತಿಗೆ ಪರಿಚಯಿಸಿದ ಕೀರ್ತಿ ಕನಕದಾಸರಿಗೆ ಸಲುತ್ತದೆ: ಸಚಿವ ರಮೇಶ

ಗೋಕಾಕ ನ 6: ಕುಲ ಕುಲವೆಂದು ಹೊಡೆದಾಡದಿರಿ ಎಂದು ಕೋಮು ಸಾಮರಸ್ಯದ ಸಂದೇಶವನ್ನು ಇಡಿ ಜಗತ್ತಿಗೆ ಪರಿಚಯಿಸಿದ ವಿಶ್ವ ಮಾನವ, ಭಕ್ತ ಶ್ರೇಷ್ಠ, ಕನಕದಾಸರಾಗಿದ್ದಾರೆ ಎಂದು ಸಹಕಾರ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಹೇಳಿದರು.

ಸೋಮವಾರದಂದು ನಗರದ ಸಂಗೋಳ್ಳಿ ರಾಯಣ್ಣ ವೃತ್ತದಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಬೆಳಗಾವಿ, ತಾಲೂಕಾಡಳಿತ, ತಾಲೂಕಾ ಪಂಚಾಯತ, ನಗರ ಸಭೆ, ಕುರಬರ ಸಮಾಜದ ಸಂಯುಕ್ತಾಶ್ರಯದಲ್ಲಿ ನಡೆದ ಸಂತ ಭಕ್ತ ಕನಕದಾಸರ 530ನೇ ಜಯಂತಿ ಉತ್ಸವದ ಮೆರವಣಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತ್ತಿದ್ದರು.

 

ದಾಸ ಶ್ರೇಷ್ಠ ಕನಕದಾಸರ ಸಂದೇಶಗಳು, ಸರ್ವಕಾಲಕ್ಕೂ ಸರ್ವರಿಗೂ ದಾರಿದೀಪವಾಗಿವೆ. ಅವುಗಳನ್ನು ಆಚರಣೆಗೆ ತರುವುದರೊಂದಿಗೆ ಸಮಾನತೆಯ ಸಮಾಜವನ್ನು ನಿರ್ಮಿಸಲು ಶ್ರಮಿಸೋಣ ಎಂದು ಹೇಳಿದರು.
ಶ್ರೀ ಕನಕದಾಸರ ಭಾವಚಿತ್ರ, ಸುಮಂಗಲಿಯರ ಕುಂಭಮೇಳ ಹಾಗೂ ಡೊಳ್ಳು ವಾದ್ಯದೊಂದಿಗೆ ಭವ್ಯ ಮೆರವಣಿಗೆ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಸಮಾರಂಭದ ಸ್ಥಳವಾದ ಬೀರೇಶ್ವರ ಸಮುದಾಯ ಭವನವನ್ನು ತಲುಪಿತು.

ಸಮಾರಂಭವನ್ನು ತಾಲೂಕಾ ಕುರುಬರ ಸಮಾಜದ ಅಧ್ಯಕ್ಷ ಸಿದ್ದಲಿಂಗ ದಳವಾಯಿ ಅವರು ಉದ್ಘಾಟಿಸಿ ಮಾತನಾಡಿ, ನಗರದಲ್ಲಿ ಶ್ರೀ ಕನಕದಾಸರ ಪುತ್ಥಳಿಯನ್ನು ಸ್ಥಾಪಿಸಿ, ಸದಾ ಅವರ ಸ್ಮರಣೆಯೊಂದಿಗೆ ಅವರ ಆದರ್ಶಗಳ ಜಾಗೃತಿಯನ್ನು ಮೂಡಿಸುವ ಉದ್ದೇಶಕ್ಕೆ ನಗರ ಸಭೆಯವರು ಹಾಗೂ ಜನತೆ ಸಹಕಾರ ನೀಡುವಂತೆ ಕೋರಿದರು.
ಬೆಳಗಾವಿ ಆರ್‍ಪಿಡಿ ಕಾಲೇಜಿನ ಪ್ರಾಧ್ಯಾಪಕ ಎಚ್.ಬಿ.ಕೋಲಕಾರ ಶ್ರೀ ಕನಕದಾಸರ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಈ ಕಾರ್ಯಕ್ರಮದಲ್ಲಿ ಜಿಪಂ ಸದಸ್ಯರಾದ ಟಿ.ಆರ್.ಕಾಗಲ, ಮಡ್ಡೆಪ್ಪ ತೋಳಿನವರ, ಗೋವಿಂದ ಕೊಪ್ಪದ, ನಗರ ಸಭೆ ಅಧ್ಯಕ್ಷ ತಳದಪ್ಪ ಅಮ್ಮಣಗಿ, ಉಪಾಧ್ಯಕ್ಷೆ ವಿಜಯಲಕ್ಷ್ಮೀ ಜತ್ತಿ, ಸ್ಥಾಯಿ ಸಮಿತಿ ಚೇರಮನ್ ಭಗವಂತ ಹುಳ್ಳಿ, ಎಪಿಎಮ್‍ಸಿ ಅಧ್ಯಕ್ಷ ಅಡಿವೆಪ್ಪ ಕಿತ್ತೂರ, ತಾಪಂ ಅಧ್ಯಕ್ಷೆ ಸುನಂದಾ ಕರದೇಸಾಯಿ, ಉಪಾಧ್ಯಕ್ಷ ಯಲ್ಲಪ್ಪ ನಾಯಿಕ, ಸದಸ್ಯ ಲಕ್ಷ್ಮಣ ಮುಸಗುಪ್ಪಿ, ತಹಶೀಲದಾರ ಜಿ.ಎಸ್.ಮಳಗಿ, ಪೌರಾಯುಕ್ತ ವಿ.ಸಿ.ಚಿನ್ನಪ್ಪಗೌಡರ, ಇಒ ಎಫ್.ಜಿ.ಚಿನ್ನನವರ, ವಿವಿಧ ಇಲಾಖೆಯ ಅಧಿಕಾರಿಗಳಾದ ಜಿ.ಬಿ.ಬಳಗಾರ, ಎ.ಡಿ.ಸವದತ್ತಿ.ಎಸ್.ವಿ.ಕಲ್ಲಪ್ಪನವರ, ಡಾ|| ಆರ್.ಎಸ್.ಬೆಣಚಿನಮರಡಿ, ಡಾ|| ಮೋಹನ ಕಮತ, ಡಾ|| ಶಶಿಕಾಂತ ಕೌಜಲಗಿ, ಎಮ್.ಎಸ್.ನಾಗನ್ನವರ, ಮುಖಂಡರಾದ ಟಿ.ಬಿ.ತುರಾಯಿದಾರ, ಮಂಜುನಾಥ ಸಣ್ಣಕ್ಕಿ, ಮನೋಹರ ಗಡಾದ, ರಾಜು ಬೈರುಗೋಳ, ವಿಠ್ಠಲ ಚಂದರಗಿ, ಭೀಮಶಿ ಮಗದುಮ್ಮ, ಗಿರೀಶ ಹಳ್ಳೂರ, ಮಲ್ಲಿಕಾರ್ಜುನ ವಡೇರ, ನಗರ ಸಭೆ ಸದಸ್ಯರು ಸೇರಿದಂತೆ ಅನೇಕರು ಇದ್ದರು.
ಕಾರ್ಯಕ್ರಮವನ್ನು ಮಾಲತೇಶ ಸಣ್ಣಕ್ಕಿ ಸ್ವಾಗತಿಸಿದರು, ಎ.ಜಿ.ಕೋಳಿ ನಿರೂಪಿಸಿ, ವಂದಿಸಿದರು.

Related posts: