ಗೋಕಾಕ:ಸಾಲಬಾದೆ ತಾಳಲಾರದೆ ರೈತ ಆತ್ಮಹತ್ಯೆ: ಕೌಜಲಗಿಯಲ್ಲಿ ಘಟನೆ
ಸಾಲಬಾದೆ ತಾಳಲಾರದೆ ರೈತ ಆತ್ಮಹತ್ಯೆ: ಕೌಜಲಗಿಯಲ್ಲಿ ಘಟನೆ
ಗೋಕಾಕ ನ 5: ಸಾಲಬಾಧೆ ತಾಳಲಾರದೆ ರೈತನೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಗೋಕಾಕ ತಾಲೂಕಿನ ಕೌಜಲಗಿ ಗ್ರಾಮದಲ್ಲಿ ನಡೆದಿದೆ
ಸತೀಶ ಕೃಷ್ಣಾ ಮೂಲಿಮನಿ (45) ಎಂಬ ರೈತ ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ ಎಂದು ಗುರುತಿಸಲಾಗಿದೆ ರವಿವಾರ ಮಧ್ಯಾಹ್ನ ರೈಥ ಆತ್ಮಹತ್ಯೆಗೆ ಶರಣಾಗಿದ್ದಾನೆಂದು ಹೇಳಲಾಗುತ್ತಿದೆ
ವ್ಯವಸಾಯಕ್ಕಾಗಿ ಬ್ಯಾಂಕ್-ಸಂಘ ಸಂಸ್ಥೆಗಳಲ್ಲಿ ಲಕ್ಷಾಂತರ ರೂಪಾಯಿಗಳನ್ನು ಸಾಲ ಮಾಡಿದ್ದನು. ಮೂವರು ಹೆಣ್ಣು ಮಕ್ಕಳು, ಒರ್ವ ಗಂಡು ಮಗು, ಪತ್ನಿ, ತಾಯಿ, ತಂಗಿಯರನ್ನು ಸಲಹುವ ಜವಾಬ್ದಾರಿ ಹೊತ್ತುಕೊಂಡಿದ್ದ ರೈತ ಸಾಲ ತೀರಿಸಲಾಗದೆ ಸಂಕಷ್ಟಕ್ಕೊಳಗಾಗಿ ಹೊಲದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಕುರಿತು ಕುಲಗೋಡ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.