RNI NO. KARKAN/2006/27779|Monday, December 29, 2025
You are here: Home » breaking news » ಬೆಳಗಾವಿ:ಕೋವಿಡ ಸೋಂಕಿಗೆ ಮೊದಲ ಬಲಿ : ಬೆಳಗಾವಿಯಲ್ಲಿ ವೃದ್ಧ ಸಾವು

ಬೆಳಗಾವಿ:ಕೋವಿಡ ಸೋಂಕಿಗೆ ಮೊದಲ ಬಲಿ : ಬೆಳಗಾವಿಯಲ್ಲಿ ವೃದ್ಧ ಸಾವು 

ಕೋವಿಡ ಸೋಂಕಿಗೆ ಮೊದಲ ಬಲಿ : ಬೆಳಗಾವಿಯಲ್ಲಿ ವೃದ್ಧ ಸಾವು

ಬೆಳಗಾವಿ ಮೇ 29 : ರಾಜ್ಯದಲ್ಲಿ ಮಳೆಯ ಅಬ್ಬರದ ನಡುವೆಯೇ ಕೊರೊನಾ ವೈರಸ್ ಹೆಚ್ಚುತ್ತಿದ್ದು, ಸಾವು-ನೋವುಗಳು ಸಂಭವಿಸುತ್ತಿವೆ. ಗಡಿ ಜಿಲ್ಲೆ ಬೆಳಗಾವಿಯಲ್ಲಿ ಮಹಾಮಾರಿ ಕೊರೊನಾ ಸೋಂಕಿಗೆ ಮೊದಲ ಬಲಿಯಾಗಿದೆ.

ಬಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೇ ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ.

ಬೆಳಗಾವಿ ತಾಲೂಕಿನ ಬೆನಕನಹಳ್ಳಿ ನಿವಾಸಿ 70 ವರ್ಷದ ವೃದ್ಧರೊಬ್ಬರಲಿ ಕೊರೊನಾ ಸೋಂಕು ಕಾಣಿಸಿಕೊಂಡಿತ್ತು.

ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರನ್ನು ಬಿಮ್ಸ್ ಆಸ್ಪತ್ರೆಗೆ ದಾಖಲಿಸಿದಾಗ ಪರೀಕ್ಷೆ ಮಾಡಿದಾಗ ಕೋವಿಡ ಇರುವುದು ದೃಢಪಟ್ಟಿದ್ದು, ಪ್ರತ್ಯೇಕ ವಾರ್ಡ್ ನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ತಡರಾತ್ರಿ ಸೋಂಕಿತ ವ್ಯಕ್ತಿ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

Related posts: