RNI NO. KARKAN/2006/27779|Thursday, October 16, 2025
You are here: Home » breaking news » ಖಾನಾಪುರ:ಈಜಲು ನದಿಗೆ ತೆರಳಿದ್ದ ಬಾಲಕ ಸಾವು : ಖಾನಾಪುರದಲ್ಲಿ ಘಟನೆ

ಖಾನಾಪುರ:ಈಜಲು ನದಿಗೆ ತೆರಳಿದ್ದ ಬಾಲಕ ಸಾವು : ಖಾನಾಪುರದಲ್ಲಿ ಘಟನೆ 

ಈಜಲು ನದಿಗೆ ತೆರಳಿದ್ದ ಬಾಲಕ ಸಾವು : ಖಾನಾಪುರದಲ್ಲಿ ಘಟನೆ

ಖಾನಾಪುರ ನ 5: ಸ್ನೇಹಿತರೊಂದಿಗೆ ಈಜಲು ನದಿಗೆ ತೆರಳಿದ್ದ ಬಾಲಕ ನದಿಯಲ್ಲಿ ಬಿದ್ದು ಸಾವನ್ನಪ್ಪಿದ ಘಟನೆ ಪಟ್ಟಣದ ರಾಜ್ಯ ಪೊಲೀಸ್ ತರಬೇತಿ ಶಾಲೆಯ ಆವರಣದ ಹಿಂಭಾಗದ ಮಲಪ್ರಭಾ ನದಿಯಲ್ಲಿ ವರದಿಯಾಗಿದೆ. ಪಟ್ಟಣದ ಸರ್ವೋದಯ ಶಾಲೆಯ 9ನೇ ವರ್ಗದ ವಿದ್ಯಾರ್ಥಿ ರೋಹನ ಅನೀಲ ಲೋಕರೆ (15) ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ದುರ್ದೈವಿ. ಮಧ್ಯಂತರ ಪರೀಕ್ಷೆ ಮುಗಿದಿದ್ದರಿಂದ ರೋಹನ ಶನಿವಾರ ಮಧ್ಯಾಹ್ನ ತನ್ನ ಸ್ನೇಹಿತರೊಂದಿಗೆ ಈಜಲು ತೆರಳಿದ್ದ. ಈಜುವಾಗಿ ಆಕಸ್ಮಿಕವಾಗಿ ನೀರಲ್ಲಿ ಮುಳುಗಿದ್ದು, ಖಾನಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶವದ ಶೋಧಕಾರ್ಯ ಕೈಗೊಂಡಿರುವ ಪೊಲೀಸರು.

ರಾತ್ರಿಯವರೆಗೂ ಶವಕ್ಕಾಗಿ ಶೋಧಕಾರ್ಯ ಮುಂದುವರೆದರೂ ಶವ ಪತ್ತೆಯಾಗಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ರೋಹನ ತಂದೆ ಪಟ್ಟಣದ ನ್ಯಾಯಾಲಯದಲ್ಲಿ ಹಿರಿಯ ವಕೀಲ.

Related posts: