RNI NO. KARKAN/2006/27779|Friday, August 1, 2025
You are here: Home » breaking news » ಗೋಕಾಕ:ಅಂಧಕಾರ ಹೋಗಲಾಡಿಸುವಲ್ಲಿ ಸದ್ಗುರು ಮಾಧವನಾಂದ ಪ್ರಭುಜೀಯವರು ಅವಿರತವಾಗಿ ಶ್ರಮಿಸಿದ್ದಾರೆ : ಅಂಬಿರಾವ ಪಾಟೀಲ

ಗೋಕಾಕ:ಅಂಧಕಾರ ಹೋಗಲಾಡಿಸುವಲ್ಲಿ ಸದ್ಗುರು ಮಾಧವನಾಂದ ಪ್ರಭುಜೀಯವರು ಅವಿರತವಾಗಿ ಶ್ರಮಿಸಿದ್ದಾರೆ : ಅಂಬಿರಾವ ಪಾಟೀಲ 

ಅಂಧಕಾರ ಹೋಗಲಾಡಿಸುವಲ್ಲಿ ಸದ್ಗುರು ಮಾಧವನಾಂದ ಪ್ರಭುಜೀಯವರು ಅವಿರತವಾಗಿ ಶ್ರಮಿಸಿದ್ದಾರೆ : ಅಂಬಿರಾವ ಪಾಟೀಲ

 
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ನ 2 :

 
ಜನರಲ್ಲಿ ಆಧ್ಯಾತ್ಮಿಕ ಜಾಗೃತಿ ಮೂಡಿಸಿ ಅಂಧಕಾರ ಹೋಗಲಾಡಿಸುವಲ್ಲಿ ಸದ್ಗುರು ಮಾಧವನಾಂದ ಪ್ರಭುಜೀಯವರು ಅವಿರತವಾಗಿ ಶ್ರಮಿಸಿದ್ದರೆಂದು ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ ಹೇಳಿದರು.
ಶ್ರೀ ಸದ್ಗುರು ಸಮರ್ಥ ಮಾಧವಾನಂದ ಪ್ರಭುಜಿಯವರ 106ನೇ ಜಯಂತ್ಯುತ್ಸವಕ್ಕೆ ಸೋಮವಾರ ನಗರದ ಶ್ರೀ ಸ.ಸ. ಮಾಧವಾನಂದ ವೃತ್ತದಲ್ಲಿ ಶ್ರೀ ಮಾಧವಾನಂದರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವುದರ ಮೂಲಕ ಜಯಂತಿ ಆಚರಣೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ಸಮಾನತೆಯ ಸಮಾಜ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಅವರು ಸಾವಿರಾರು ಅಂತರಜಾತಿ ಸಾಮೂಹಿಕ ವಿವಾಹಗಳನ್ನು ನಡೆಸಿದ್ದರು. ಸಾಮೂಹಿಕ ಬೇಸಾಯ ಪದ್ಧತಿ, ಸ್ವತಂತ್ರ ಹೋರಾಟ, ಕರ್ನಾಟಕ ಏಕೀಕರಣ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದರು. ಸರ್ವರಿಗೂ ಸಮಪಾಲು, ಸಹಬಾಳ್ವೆ ತತ್ವಕ್ಕೆ ಹೆಚ್ಚಿನ ಮಹತ್ವ ನೀಡಿದ್ದರು. ಅವರ ಆದರ್ಶಗಳನ್ನು ಎಲ್ಲರೂ ಆಚರಣೆಗೆ ತರುವಂತೆ ಕರೆ ನೀಡಿದರು.
ನಂತರ ನಗರದ ಲಕ್ಷ್ಮಿ ದೇವಸ್ಥಾನದಲ್ಲಿ ತೊಟ್ಟಿಲೋತ್ಸವ ಕಾರ್ಯಕ್ರಮ ಜರುಗುತು.
ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷ ಜಯಾನಂದ ಹುಣಚ್ಯಾಳ, ಉಪಾಧ್ಯಕ್ಷ ಬಸವರಾಜ ಆರೇನ್ನವರ, ಸ್ಥಾಯಿ ಸಮಿತಿ ಚೇರಮನ್ನ ಕೆ. ಎಂ. ಗೋಕಾಕ, ಬಿಜೆಪಿ ನಗರ ಮಂಡಲ ಅಧ್ಯಕ್ಷ ಭೀಮಶಿ ಭರಮನ್ನವರ, ಕೆಂಚಪ್ಪ ಭಜಂತ್ರಿ, ಮಾರುತಿ ತರಕಾರ, ಮಲ್ಲಪ್ಪ ಬಂಡ್ರೋಳಿ, ಅಶೋಕ ಪೋತದಾರ, ಮಲ್ಲಪ್ಪ ಚಿಂಚಲಿ, ಗುರುನಾಥ ಗುಡೇನ್ನವರ, ಭೀಮಶಿ ರೊಡ್ಡನವರ, ಗುರುಲಿಂಗ ನಂದಗಾಂವ, ಎಮ್.ಬಿ.ಸುಲ್ತಾನಪೂರ, ಶಿವಾನಂದ ಕಬ್ಬೂರ, ಸಿದ್ರಾಮ ಜಗದಾಳೆ, ಕುಶಾಲ ಗುಡೆನ್ನವರ, ಪ್ರಭುದೇವ ಹಡಪದ ಸೇರಿದಂತೆ ನಗರಸಭೆ ಸದಸ್ಯರು, ಬಿಜೆಪಿ ಪದಾಧಿಕಾರಿಗಳು ಕಾರ್ಯಕರ್ತರು ಇದ್ದರು

Related posts: