ಗೋಕಾಕ:ಚಿಂತನೆ ಚಿಕ್ಕದಾಗಿದ್ದರು ಜಗತ್ತನ್ನು ಬದಲಿಸುವ ಶಕ್ತಿಯನ್ನು ಹೊಂದಿದೆ. : ಶ್ರೀ ಅಭಿನವ ಮಹಾಂತ ಮಹಾಸ್ವಾಮಿಗಳು
ಚಿಂತನೆ ಚಿಕ್ಕದಾಗಿದ್ದರು ಜಗತ್ತನ್ನು ಬದಲಿಸುವ ಶಕ್ತಿಯನ್ನು ಹೊಂದಿದೆ. : ಶ್ರೀ ಅಭಿನವ ಮಹಾಂತ ಮಹಾಸ್ವಾಮಿಗಳು
ಗೋಕಾಕ ಜ 14 : ಚಿಂತನೆ ಚಿಕ್ಕದಾಗಿದ್ದರು ಜಗತ್ತನ್ನು ಬದಲಿಸುವ ಶಕ್ತಿಯನ್ನು ಹೊಂದಿದೆ. ಎಂದು ಆಂಧ್ರಪ್ರದೇಶ ಹಾಲ್ವಿಯ ಶ್ರೀ ಅಭಿನವ ಮಹಾಂತ ಮಹಾಸ್ವಾಮಿಗಳು ಹೇಳಿದರು.
ಸೋಮವಾರದಂದು ನಗರದ ಶ್ರೀ ಶೂನ್ಯ ಸಂಪಾದನ ಮಠದಲ್ಲಿ ಬಸವೇಶ್ವರ ಧರ್ಮ ಪ್ರಚಾರಕ ಸಂಸ್ಥೆ, ಲಿಂಗಾಯತ ಮಹಿಳಾ ವೇದಿಕೆ ಹಾಗೂ ವಚನ ಸಾಹಿತ್ಯ ಚಿಂತನ ಮಂಥನ ವೇದಿಕೆ ಇವುಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ 183ನೇ ಶಿವಾನುಭವಗೋಷ್ಠಿ ಹಾಗೂ ಲಿಂ.ಪೂಜ್ಯ ಶ್ರೀ ಚನ್ನಬಸವ ಮಹಾಸ್ವಾಮಿಗಳ ಪುಣ್ಯ ಸ್ಮರಣೋತ್ಸವ ಮೇಲೆ ಲಿಂಗಾಯತ ಮಹಿಳಾ ವೇದಿಕೆ ಅಧಿಕಾರ ಹಸ್ತಾಂತರ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವಹಿಸಿ ಅವರು ಮಾತನಾಡಿದರು.
ಗುರು ಶಿಷ್ಯನಲ್ಲಿರುವ ಭೌದ್ದಿಕ ಮಟ್ಟವನ್ನು ಅರಿತು ತಮ್ಮ ಶಿಷ್ಯರನ್ನು ಸಮಾಜದಲ್ಲಿ ಉನ್ನತ ಮಟ್ಟಕ್ಕೆ ಬೆಳೆಸಿ ಇನ್ನೊಬ್ಬರಿಗೆ ಗುರು ಆಗುವ ಹಾಗೆ ನೋಡಿಕೊಳ್ಳುತ್ತಾರೆ. ಗುರುಗಳು ಸ್ವಚ್ಛವಾದಂತಹ ಸಂದೇಶವನ್ನು ಕೊಡಬೇಕು. ಮೌಢ್ಯವನ್ನು ಮೆಟ್ಟಿನಿಲ್ಲುವಂತಹ ಶಕ್ತಿಯನ್ನು ಗುರುಕೊಡಬೇಕು. ಅಂದಾಗ ಶಿಷ್ಯರಿಂದ ಸದೃಢ ಸಮಾಜ ನಿರ್ಮಿಸಲು ಸಾಧ್ಯ.ಶರಣ ವಿಚಾರಗಳನ್ನು ಮನ ಮನಗಳಲ್ಲಿ ತುಂಬಿಕೊಂಡು ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಬದುಕಬೇಕು. ಮಾನವ ಗುರುವಿನ ಮೂಲಕ ತಮ್ಮ ಶರೀರವನ್ನು ಶುದ್ದಿಕರಿಸಿಕೊಳ್ಳಬೇಕು.ಶಿಷ್ಯ ಗುರು ಆದೇಶವನ್ನು ಮರುಪ್ರಶ್ನಿಸದೆ ಅನುಕರಿಸಿದಾಗ ಒಳ್ಳೆಯ ಶಿಷ್ಯನಾಗಲು ಸಾಧ್ಯ ಆ ನಿಟ್ಟಿನಲ್ಲಿ ಶಿಷ್ಯರು ತಮ್ಮ ಗುರುಗಳ ಆರಾಧನೆ ಮಾಡಬೇಕು ಎಂದು ಹೇಳಿದರು.
ಕಾರ್ಯಕ್ರಮದ ಸಾನಿಧ್ಯವನ್ನು ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳು ವಹಿಸಿದ್ದರು.
ಅಧ್ಯಕ್ಷತೆಯನ್ನು ಬಸನಗೌಡ ಪಾಟೀಲ ವಹಿಸಿದ್ದರು
ಇದೇ ಸಂದರ್ಭದಲ್ಲಿ ಲಿಂಗಾಯತ ಮಹಿಳಾ ವೇದಿಕೆಯ ನೂತನ ಅಧ್ಯಕ್ಷೆಯಾಗಿ ಆಯ್ಕೆಯಾದ ಶ್ರೀಮತಿ ಭಾರತಿ ಮರೆನ್ನವರ ಅವರಿಗೆ ನಿಕಟಪೂರ್ವ ಅಧ್ಯಕ್ಷೆ ಶೈಲಾ ಬಿದರಿ ಅಧಿಕಾರ ಹಸ್ತಾಂತರಿಸಿದರು.
ವೇದಿಕೆಯಲ್ಲಿ ಬಟಕುರ್ಕಿಯ ಬಸವಲಿಂಗ ಮಹಾಸ್ವಾಮಿಗಳು, ಮೈಲಾರಲಿಂಗ ಉಪ್ಪಿನ, ಡಿ.ಎನ್.ಬೆಟ್ಟದಗೌಡರ, ವಿನಾಯಕ ಪಾಟೀಲ, ಶ್ರೀಮತಿ ಶೈಲಾ ಬಿದರಿ, ಶ್ರೀಮತಿ ವಿನುತಾ ನಾವಲಗಿ ಉಪಸ್ಥಿತರಿದ್ದರು