RNI NO. KARKAN/2006/27779|Sunday, August 3, 2025
You are here: Home » breaking news » ಗೋಕಾಕ:ಬಿತ್ತನೆಯ ಬೀಜ ಹಾಗೂ ಬೆಳೆಗಳಿಗೆ ಸಿಂಪಡಿಸುವ ಔಷಧಗಳು ರೈತರಿಗೆ ದೊರೆಯುತ್ತಿಲ್ಲ : ಭೀಮಶಿ ಗದಾಡಿ

ಗೋಕಾಕ:ಬಿತ್ತನೆಯ ಬೀಜ ಹಾಗೂ ಬೆಳೆಗಳಿಗೆ ಸಿಂಪಡಿಸುವ ಔಷಧಗಳು ರೈತರಿಗೆ ದೊರೆಯುತ್ತಿಲ್ಲ : ಭೀಮಶಿ ಗದಾಡಿ 

ಬಿತ್ತನೆಯ ಬೀಜ ಹಾಗೂ ಬೆಳೆಗಳಿಗೆ ಸಿಂಪಡಿಸುವ ಔಷಧಗಳು ರೈತರಿಗೆ ದೊರೆಯುತ್ತಿಲ್ಲ : ಭೀಮಶಿ ಗದಾಡಿ
ಗೋಕಾಕ ಅ 26: ತಾಲೂಕಿನಲ್ಲಿರುವ ರೈತ ಸಂಪರ್ಕ ಕೇಂದ್ರಗಳಲ್ಲಿ ರೈತರಿಗೆ ಅವಶ್ಯಕತೆ ಇದ್ದ ಸಂದರ್ಭದಲ್ಲಿ ಯಾವುದೇ ತರಹದ ಬಿತ್ತನೆಯ ಬೀಜಗಳು ಹಾಗೂ ಬೆಳೆಗಳಿಗೆ ಸಿಂಪಡಿಸುವ ಔಷಧಗಳು ರೈತರಿಗೆ ದೊರೆಯುತ್ತಿಲ್ಲ ಎಂದು ರೈತ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಭೀಮಶಿ ಗದಾಡಿ ಆರೋಪಿಸಿದ್ದಾರೆ.

ಈ ಕುರಿತು ಗುರುವಾರದಂದು ಪತ್ರಿಕಾ ಪ್ರಕಟನೆ ನೀಡಿರುವ ಅವರು, ರೈತರ ನೋವಿಗೆ ಸ್ಪಂದಿಸುವ ನಿಟ್ಟಿನಲ್ಲಿ ಸರ್ಕಾರದಿಂದ ರಿಯಾಯಿತಿ ದರದಲ್ಲಿ ವಿತರಿಸಬೇಕಾದ ಬೀಜ ಹಾಗೂ ಔಷಧಗಳು ದಾಸ್ತಾನು ಸರಿಯಾಗಿ ಇರುವದಿಲ್ಲ, ಕೇವಲ ಹೆಸರಿಗೆ ಮಾತ್ರ ರಿಯಾಯಿತಿ ದರವಾಗಿದೆ. ರೈತ ಸಂಪರ್ಕ ಕೇಂದ್ರಗಳಲ್ಲಿ ರೈತರು ಸಂಪರ್ಕಿಸಲು ಅಧಿಕಾರಿಗಳೇ ಇರುವದಿಲ್ಲ ಎಂದು ಆರೋಪಿಸಿದ್ದಾರೆ.
ಕೃಷಿ ಇಲಾಖೆಗೆ ಸಂಬಂಧಪಟ್ಟ ಹಿರಿಯ ಅಧಿಕಾರಿಗಳು ಕೂಡಲೇ ಎಚ್ಚೆತ್ತು ರೈತರಿಗೆ ಬೇಕಾದ ಬಿತ್ತನೆಯ ಬೀಜಗಳನ್ನು ಹಾಗೂ ಔಷಧಗಳನ್ನು ದಾಸ್ತಾನುಗಳನ್ನು ಇಟ್ಟುಕೊಳ್ಳದೇ ಹೋದರೆ ರೈತ ಸಂಘದಿಂದ ಉಗ್ರ ಹೋರಾಟ ನಡೆಸಲಾಗುವುದು ಎಂದು ತಿಳಿಸಿದ್ದಾರೆ.

Related posts: