ಬೈಲಹೊಂಗಲ:ಶಾಮನೂರ ಶಿವಶಂಕರೆಪ್ಪ ಪಂಚಮಸಾಲಿ ಶ್ರೀಗಳ ಕ್ಷಮೆ ಕೇಳಲಿ :ವೀರೇಶ ಹಲಕಿ
ಶಾಮನೂರ ಶಿವಶಂಕರೆಪ್ಪ ಪಂಚಮಸಾಲಿ ಶ್ರೀಗಳ ಕ್ಷಮೆ ಕೇಳಲಿ :ವೀರೇಶ ಹಲಕಿ
ಬೈಲಹೊಂಗಲ ಅ 26: ಲಿಂಗಾಯತ ಸ್ವತಂತ್ರ ಧರ್ಮ ಮಾನ್ಯತೆಗಾಗಿ ಹೋರಾಟ ಮಾಡಲು ಮತ್ತು ಈ ಹೋರಾಟವನ್ನು ಅತ್ಯಂತ ತೀವ್ರಗೊಳಿಸಲು ಕೂಡಲ ಸಂಗಮದ ಪಂಚಮಸಾಲಿ ಪೀಠದ ಪ್ರಥಮ ಜಗದ್ಗುರು ಬಸವಜಯ ಮೃತ್ಯುಂಜಯ ಮಹಾಸ್ವಾಮಿಗಳು ಹಣ ಪಡೆದುಕೊಂಡಿದ್ದಾರೆ. ಮತ್ತು ವಾಹನದ ಆಮೀಶಕ್ಕೆ ಒಳಗಾಗಿದ್ದಾರೆ ಎಂದಿರುವ ಅಖಿಲ ಭಾರತ ವೀರಶೈವ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಶಾಮನೂರು ಶಿವಶಂಕರೆಪ್ಪ ಹೇಳಿಕೆಯನ್ನು ಲಿಂಗಾಯತ ಅಭಿವೃದ್ದಿ ಸಂಸ್ಥೆಯ ರಾಜ್ಯ ಉಪಾಧ್ಯಕ್ಷರಾದ ವೀರೇಶ ಹಲಕಿ ತೀವ್ರವಾಗಿ ಖಂಡಿಸಿದ್ದಾರೆ.
ಲಿಂಗಾಯತ ಪಂಚಮಸಾಲಿ ಶ್ರೀಗಳು ಹುಟ್ಟು ಹೋರಾಟಗಾರರು, ರೈತರ ಪರವಾಗಿ, ನಿರಾಶ್ರಿತರ ಪರವಾಗಿ, ವೀರಮಾತೆ ಚೆನ್ನಮ್ಮ, ರಾಯಣ್ಣರ ಅಬಿವೃದ್ಧಿಗಾಗಿ ನಿರಂತರ ಹೋರಾಟ ಮಾಡುತ್ತಾ ಬಂದಿರುವ ಕಾಯಕ ತತ್ವದ ಸಮಾಜೋಧಾರ್ಮಿಕ ಕಾರ್ಯದಲ್ಲಿ ಕೈಲಾಸ ಕಂಡವರು ಅವರ ಬಗ್ಗೆ ಮಾತನಾಡುವ ನೈತಿಕತೆ ಶಾಮನೂರ ಅವರಿಗಿಲ್ಲಾ. ಲಿಂಗಾಯತ ಪಂಚಮಸಾಲಿ ಪೀಠಾಧ್ಯಕ್ಷರಾದಾಗಿನಿಂದ ಶ್ರೀಗಳು ಹಳ್ಳಿಗೆ ಏಕರಾತ್ರಿ-ಪಟ್ಟಣಕ್ಕೆ ಪಂಚರಾತ್ರಿಯಂತೆ ಸಂಚರಿಸಿ ಲಿಂಗಾಯತ ಧರ್ಮದ ತತ್ವಗಳನ್ನು ಬಸವಾದಿ ಶರಣರ ಸಿದ್ದಾಂತಗಳನ್ನು ತಿಳಿಸುತ್ತಾ ಸಮಾಜವನ್ನು ಕಟ್ಟಿ ಬೆಳೆಸಿಕೊಂಡು ಬರುತ್ತಿದ್ದಾರೆ.
ಲಿಂಗಾಯತ ಹೋರಾಟ ಹಲವು ದಶಕಗಳ ಹಳೆಯದು
ಮೊದಲಿನಿಂದಲೂ ಲಿಂಗಾಯತವು ಒಂದು ಸ್ವತಂತ್ರ ಧರ್ಮ. ಭಾರತದ ಸಂವಿಧಾನದ ಪ್ರಕಾರ ಯಾವ ರೀತಿಯಾಗಿ ಜೈನ, ಬೌದ್ಧ, ಸಿಖ್ ಧರ್ಮಗಳು ಮಾನ್ಯತೆ ಸಂವಿಧಾನದಲ್ಲಿ ಪಡೆದುಕೊಂಡಿವೆಯೋ ಹಾಗೆಯೇ ಲಿಂಗಾಯತವು ಒಂದು ಸ್ವತಂತ್ರ ಧರ್ಮವಾಗಿದ್ದು ಈ ಧರ್ಮಕ್ಕೆ ಸಂವಿಧಾನಿಕ ಮಾನ್ಯತೆ ಸಿಗಬೇಕು ಅಂತಾ ಹೋರಾಟ ಮಾಡುತ್ತಾ ಬಂದಿರುತ್ತಾರೆ. ಅಂತಹ ಪೂಜ್ಯರ ಬಗ್ಗೆ ಹಗುರವಾಗಿ ಮಾತನಾಡಿದರೆ ಅಖಂಡತೆಯ ಲಿಂಗಾಯತ ಹೋರಾಟ ಮಾಡುತ್ತಿರುವ ಒಕ್ಕೂಟವು ಇತಂಹ ಹೇಳಿಕೆಗಳನ್ನು ಸಹಿಸುವುದಿಲ್ಲಾ ಇದೇ ರೀತಿಯ ಆರೋಪಗಳು ಮುಂದೆವರೆದರೆ ಉಗ್ರವಾದ ಹೋರಾಟ ಕೈಗೊಳ್ಳಲಾಗುವುದು
ಪ್ರತಿಯೊಬ್ಬರಿಗೆ ಅನ್ನನೀಡುವ ಸಮಾಜ ಕಣ್ಣು ಪಂಚಮಸಾಲಿ ಶ್ರೀಗಳು
ನಾಡಿನ ಕೃಷಿ ಕಾಯಕ ವರ್ಗವಾದ 80ಲಕ್ಷಕ್ಕೂ ಹೆಚ್ಚಿನÀ ಜನಸಂಖ್ಯೆ ಹೊಂದಿದ ಬಲಿಷ್ಠ ಸಮುದಾಯವಾಗಿದ್ದು, ಸಮಾಜದ ಪ್ರತಿಯೊಬ್ಬರು ಕೇವಲ ನೂರು ನೀಡಿದರೆ ಸುಮಾರು 80ಕೋಟಿ ರೂಗಳ ಹಣ ಬಂದುಬೀಳುತ್ತದೆ ಅವರಿಗೆ ಹೋರಾಟ ನಡೆಸಲು ಯಾವ ವಾಮಮಾರ್ಗದ ದುಡ್ಡು ಪಡೆದುಕೊಳ್ಳುವ ಅವಶ್ಯಕತೆ ಇಲ್ಲಾ. ಕಾಯಕ-ದಾಸೋಹ ತತ್ವ ಸಿದ್ದಾಂತದ ಹಿನ್ನಲೆ ಹೊಂದಿರುವ ಶ್ರೀಗಳು ರಾಜ್ಯದ ಯಾವುದೇ ಧರ್ಮ, ಸಮಾಜಗಳಿಗೆ ಅನ್ಯಾಯವಾದಾಗ ಅದಕ್ಕೆ ಬೆನ್ನಲೆಬುಗಾಗಿ ನಿಂತ ತನು-ಮನ-ಧನದಿಂದ ಪಂಚಮಸಾಲಿ ಶ್ರೀಗಳಿಗೆ ಸಮಾಜವು ಸೇವೆ ಸಲ್ಲಿಸುತ್ತಿದ್ದು ಇದನ್ನರಿಯಬೇಕು. ಶ್ರೀಗಳ ಬಗ್ಗೆ ಇಲ್ಲ ಸಲ್ಲದ ಆರೋಪ ಮಾಡಿರುವ ಶಾಮನೂರ ಶಿವಶಂಕರೆಪ್ಪ ಇವರ ಹೇಳಿಕೆಯು ಸತ್ಯಕ್ಕೆ ದೂರವಾಗಿದೆ ಎಂದರು.
ಬಸವಪರ ಮಠಾಧೀಶರ ಬಗ್ಗೆ ಹಗುರವಾಗಿ ಮಾತನಾಡುವುದು ಶಾಮನೂರ ಅವರ ಘಣತೆ-ಗೌರವಕ್ಕೆ ಶೋಭೆ ತರುವಂತಹದಲ್ಲಾ. ಕೂಡಲೇ ಶಾಮನೂರವರು ಪಂಚಮಸಾಲಿ ಶ್ರೀಗಳಲ್ಲಿ ಕ್ಷಮೆ ಯಾಚಿಸದಿದ್ದರೆ ಅವರ ವಿರುದ್ಧ ಬಹಿರಂಗವಾಗಿ ಪ್ರತಿಭಟಣೆ ಮಾಡಬೇಕಾದಿತು ಎಂದು ತಾಕೀತು ಮಾಡಿದರು.