ಗೋಕಾಕ:ಸರಕಾರದ ಸೌಲಭ್ಯಗಳನ್ನು ಜನರಿಗೆ ತಲುಪಿಸುವ ಪ್ರಾಮಾಣಿ ಪ್ರಯತ್ನ ಮಾಡಿ : ಸಿಇಓ ರಾಹಲ್ ಶಿಂಧೆ

ಸರಕಾರದ ಸೌಲಭ್ಯಗಳನ್ನು ಜನರಿಗೆ ತಲುಪಿಸುವ ಪ್ರಾಮಾಣಿ ಪ್ರಯತ್ನ ಮಾಡಿ : ಸಿಇಓ ರಾಹಲ್ ಶಿಂಧೆ
ಗೋಕಾಕ ಸೆ 19 : ಸರಕಾರದ ಸೌಲಭ್ಯಗಳನ್ನು ಜನರಿಗೆ ತಲುಪಿಸುವ ಪ್ರಾಮಾಣಿ ಪ್ರಯತ್ನ ಮಾಡುವಂತೆ ಜಿಪಂ ಸಿಇಓ ರಾಹುಲ ಶಿಂಧೆ ಹೇಳಿದರು.
ಅವರು, ಗುರುವಾರದಂದು ನಗರದಲ್ಲಿ ಗೋಕಾಕ ಹಾಗೂ ಮೂಡಲಗಿ ತಾಲೂಕಿನ ಪಶು ಪಾಲನೆ ಹಾಗು ಪಶು ವೈದ್ಯಕೀಯ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯನ್ನು ಇಲಾಖೆಯ ಸಭಾಂಗಣದಲ್ಲಿ ಪಾಲ್ಗೊಂಡು ಮಾತನಾಡಿ, ಜನರಿಗೆ ಸರಕಾರಿ ಯೋಜನೆಗಳ ಮಾಹಿತಿಯ ಕೊರತೆಯಿದ್ದು ಅಧಿಕಾರಿಗಳು ಜನರನ್ನು ಸಂಪರ್ಕಿಸಿ ಅವುಗಳ ಕುರಿತು ಅರಿವು ಮೂಢಿಸುವದರೊಂದಿಗೆ ಅವುಗಳನ್ನು ಜನತೆಗೆ ತಲುಪಿಸಿ ಯೋಜನೆಗಳನ್ನು ಯಶಸ್ವಿಗೊಳಿಸುವಂತೆ ತಿಳಿಸಿದರು.
ನರೇಗಾ ಯೋಜನೆಯಡಿಯಲ್ಲಿ ತಾಲೂಕಿನ 33 ಗ್ರಾಮ ಪಂಚಾಯತಗಳಿಗೆ ಜಾನುವಾರು ಕೊಟ್ಟಿಗೆ ನಿರ್ಮಾಣ ಕಾರ್ಯಕ್ರಮಕ್ಕೆ ಪಶು ವೈದ್ಯಾಧಿಕಾರಿಗಳು ಹಾಗೂ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿಗಳ ಸಹಯೋಗದಲ್ಲಿ 10ಸಾವಿರ ಕೊಟ್ಟಿಗೆಗಳನ್ನು ನಿರ್ಮಾಣ ಮಾಡಲು ಸೂಚನೆ ನೀಡಿದರು. ಬರಗಾಲ ಮತ್ತು ಪ್ರವಾಹ ಸಂದರ್ಭದಲ್ಲಿ ಜಾನುವಾರುಗಳಿಗೆ ಸೂಕ್ತ ಮೇವಿನ ವ್ಯವಸ್ಥೆ ಮಾಡಿದ ಪಶುಪಾಲನಾ ಇಲಾಖೆಯ ಕಾರ್ಯವನ್ನು ಶ್ಲಾಘಿಸಿದರು.
ಇದಕ್ಕೂ ಮುಂಚೆ ತಾಲೂಕಿನ ಗೊಡಚಿನಮಲ್ಕಿ ಗ್ರಾಮ ಮಹ್ಮದಶರೀಫ ಪಾಟೀಲ ಅವರ ರಾಷ್ಟ್ರೀಯ ಜಾನುವಾರು ಯೋಜನೆಯಡಿಯಲ್ಲಿ 1ಕೋಟಿ ರೂಪಾಯಿ ವೆಚ್ಚದ ಆಡು ಸಾಕಾಣಿಕೆ ಘಟಕದ ಪರಿಶೀಲನೆ ಮಾಡಿದರು. ರೇಬಿಸ್ ಲಸಿಕಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ನಗರದ ತಹಶೀಲದಾರ ಕಾರ್ಯಾಲಯದಲ್ಲಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ಮಾಡಿದರು.
ಈ ಸಂದರ್ಭದಲ್ಲಿ ತಹಶೀಲದಾರ ಡಾ.ಮೋಹನ ಭಸ್ಮೆ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಪರಶುರಾಮ ಗಸ್ತಿ, ಪಶು ಪಾಲನೆ ಹಾಗು ಪಶು ವೈದ್ಯಕೀಯ ಸೇವಾ ಇಲಾಖೆಯ ಉಪನಿರ್ದೇಶಕ ಡಾ.ರಾಜೀವ ಕುಲೇರ, ಸಹಾಯಕ ನಿರ್ದೇಶಕ ಡಾ.ಮೋಹನ ಕಮತ ಇದ್ದರು.