RNI NO. KARKAN/2006/27779|Tuesday, December 3, 2024
You are here: Home » breaking news » ಗೋಕಾಕ:ಶಾಲಾ ಆವರಣದಲ್ಲಿ ಸಿಕ್ಕ ಚಿನ್ನದ ಉಂಗುರವನ್ನು ಮರಳಿ ಪ್ರಾಮಾಣಿಕ ಮೆರೆದ 7 ನೇ ತರಗತಿ ವಿದ್ಯಾರ್ಥಿ ಉದಯ

ಗೋಕಾಕ:ಶಾಲಾ ಆವರಣದಲ್ಲಿ ಸಿಕ್ಕ ಚಿನ್ನದ ಉಂಗುರವನ್ನು ಮರಳಿ ಪ್ರಾಮಾಣಿಕ ಮೆರೆದ 7 ನೇ ತರಗತಿ ವಿದ್ಯಾರ್ಥಿ ಉದಯ 

ಶಾಲಾ ಆವರಣದಲ್ಲಿ ಸಿಕ್ಕ ಚಿನ್ನದ ಉಂಗುರವನ್ನು ಮರಳಿ ಪ್ರಾಮಾಣಿಕ ಮೆರೆದ 7 ನೇ ತರಗತಿ ವಿದ್ಯಾರ್ಥಿ ಉದಯ

ಗೋಕಾಕ ಜೂ 9 : ಗೋಸಬಾಳ ಗ್ರಾಮದ ಸರಕಾರಿ ಹಿರಿಯ ಕನ್ನಡ ಪ್ರಾಥಮಿಕ ಶಾಲೆಯಲ್ಲಿ 7ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿ ಉದಯ ಮಹಾದೇವ ನಂದಿ ತನಗೆ ಸಿಕ್ಕ 5 ಗ್ರಾಂ ಚಿನ್ನದ ಉಂಗುರವನ್ನು ಶಾಲೆಯ ಮುಖ್ಯೋಪಾಧ್ಯಾಯರಿಗೆ ಮರಳಿಸಿ ಪ್ರಾಮಾಣಿಕತೆ ಮೆರೆದಿದ್ದಾನೆ.

ಶುಕ್ರವಾರದಂದು ಗೋಸಬಾಳ ಗ್ರಾಮದ ಸರಕಾರಿ ಹಿರಿಯ ಕನ್ನಡ ಪ್ರಾಥಮಿಕ ಶಾಲೆಯಲ್ಲಿ ವಲಯ ಮಟ್ಟದ ಗುರುಸ್ವಂದನ ಕಾರ್ಯಕ್ರಮ ನಡೆದ ಸಂದರ್ಭದಲ್ಲಿ ಎಂ,ಎಲ್.ವಗ್ಗರ ಎಂಬ ನಿವೃತ್ತ ಶಿಕ್ಷಕರು ತಮ್ಮ ಬೆರಳಲ್ಲಿ ಹಾಕಿದ ಬಂಗಾರದ ಉಂಗುರ ಕಳೆದುಕೊಂಡಿದ್ದಾರೆ. ಕಾರ್ಯಕ್ರಮ ಮುಗಿಸಿ ವಾಪಸ ಮನೆಗೆ ಹೋದಾಗ ಅವರಿಗೆ ಉಂಗುರ ಕಳೆದು ಹೋದ ಬಗ್ಗೆ ಹೋತ್ತಾಗಿದೆ. ತಕ್ಷಣ ಶಾಲೆಯ ಮುಖ್ಯೋಪಾಧ್ಯಾಯ ಎಸ್.ಎಂ.ಲೋಕನ್ನವರ ಅವರಿಗೆ ಪೋನ ಮಾಡಿ ಬಂಗಾರದ ಉಂಗುರ ಕಳೆದು ಹೋದ ಬಗ್ಗೆ ಮಾಹಿತಿ ನೀಡಿದ್ದಾರೆ. ಮುಖ್ಯೋಪಾಧ್ಯಾಯರು ಮತ್ತು ಇತರ ಶಿಕ್ಷಕರು ಶಾಲೆಯ ತುಂಬ ಹುಡುಕಾಡಿದರೂ ಉಂಗುರ ಸಿಕ್ಕಿಲ್ಲ.ಇದರಿಂದ ಬೆಸರಗೊಂಡ ಶಿಕ್ಷಕರು ಮನೆಗೆ ಹಿಂತಿರುಗಿದ್ದಾರೆ.
ಮಾರನೇ ದಿನ ಶನಿವಾರ ಬೆಳಿಗ್ಗೆ ಶಾಲೆ ಆವರಣದಲ್ಲಿ ಆಟವಾಡುವಾಗ 7ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿ ಉದಯ ನಂದಿ ಇತನಿಗೆ ಉಂಗುರ ಸಿಕ್ಕದೆ. ತಕ್ಷಣ ವಿದ್ಯಾರ್ಥಿ ಉಂಗುರವನ್ನು ಮುಖ್ಯೋಪಾಧ್ಯಾಯ ಎಸ್.ಎಂ ಲೋಕನ್ನವರ ಅವರಿಗೆ ಮರಳಿಸಿ ಪ್ರಾಮಾಣಿಕತೆ ಮೆರದಿದ್ದಾನೆ . ಮುಖ್ಯೋಪಾಧ್ಯಾಯರು ಉಂಗುರ ಕಳೆದುಕೊಂಡು ನಿವೃತ್ತ ಶಿಕ್ಷಕರನ್ನು ಶಾಲೆಗೆ ಕರೆಯಿಸಿ ಉಂಗುರವನ್ನು ಮರಳಿಸಿದ್ದಾರೆ. ಸಿಕ್ಕ ಚಿನ್ನದ ಉಂಗುರವನ್ನು ಮರಳಿಸಿದ ವಿದ್ಯಾರ್ಥಿಯ ಪ್ರಾಮಾಣಿಕತೆಗೆ ಎಲ್ಲಡೆ ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ಪ್ರಾಮಾಣಿಕತೆ ಮೆರೆದ ವಿದ್ಯಾರ್ಥಿ ಉದಯ ನಂದಿ ಇತನಿಗೆ ಶಾಲೆಯ ವತಿಯಿಂದ ಸತ್ಕರಿ, ಗೌರವಿಸಲಾಗಿದೆ.

Related posts: