ಗೋಕಾಕ:ಜಾರಕಿಹೊಳಿ ಕುಟುಂಬದಲ್ಲಿ ಹೊಸ ಇತಿಹಾಸ ಬರೆದ ಪ್ರಿಯಾಂಕಾ ಜಾರಕಿಹೊಳಿ.

ಜಾರಕಿಹೊಳಿ ಕುಟುಂಬದಲ್ಲಿ ಹೊಸ ಇತಿಹಾಸ ಬರೆದ ಪ್ರಿಯಾಂಕಾ ಜಾರಕಿಹೊಳಿ.
ಜಾರಕಿಹೊಳಿ ಕುಟುಂಬ ರಾಜ್ಯದ ಪ್ರತಿಷ್ಠಿತ ಕುಟುಂಬಗಳಲ್ಲಿ ಒಂದು. ಕಳೆದ ಹತ್ತಾರು ವರ್ಷಗಳಿಂದ ಹಲವಾರು ಐತಿಹಾಸಿಕ ಕಾರ್ಯಗಳನ್ನು ಮಾಡಿ ಜನಮಾನಸದಲ್ಲಿ ಮನೆಮಾಡಿರುವ ಈ ಕುಟುಂಬ ರಾಜ್ಯ ರಾಜಕೀಯದಲ್ಲಿ ತಮ್ಮದೇ ಹಿಡಿದ ಸಾಧಿಸಿದೆ. ಯಾವುದೇ ಸರಕಾರ ರಾಜ್ಯದಲ್ಲಿ ಅಧಿಕಾರದಲ್ಲಿರಲಿ ಜಾರಕಿಹೊಳಿ ಕುಟುಂಬದ ಒಬ್ಬ ಶಾಸಕರು ಸಚಿವರಾಗಿ ಕಾರ್ಯನಿರ್ವಹಿಸುತ್ತಾರೆ. ಹಾಗಾಗಿ ರಾಜ್ಯ ರಾಜಕೀಯದಲ್ಲಿ ಜಾರಕಿಹೊಳಿ ಎಂದರೆ ಪರವಪುಲ್ ಎಂದೇ ಬಣ್ಣಿಸಲಾಗುತ್ತಿದೆ. ಕಳೆದ ವಿಧಾನ ಪರಿಷತ್ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ವರ್ಧಿಸಿ ಪರಿಷತ್ ಗೆ ಆಯ್ಕೆಯಾದ ಲಖನ ಜಾರಕಿಹೊಳಿ ಅವರ ಗೆಲುವಿನಿಂದ ಒಂದೇ ಕುಟುಂಬದ ನಾಲ್ಕು ಜನ ಸಹೋದರರು ರಾಜ್ಯದ ವಿಧಾನ ಸಭೆಗೆ ಆಯ್ಕೆಯಾಗಿ ರಾಷ್ಟ್ರ ರಾಜಕೀಯದಲ್ಲಿ ಇತಿಹಾಸವನ್ನೇ ಸೃಷ್ಟಿಸಿದೆ. ಆ ಸಾಲಿಗೆ ಮತ್ತೋಂದು ಹೊಸ ಸೇರ್ಪಡೆ ಕುಮಾರಿ ಪ್ರಿಯಾಂಕಾ ಜಾರಕಿಹೊಳಿ. ಪ್ರಿಯಾಂಕಾ ಜಾರಕಿಹೊಳಿ ಚಿಕ್ಕೋಡಿ ಲೋಕಸಭೆ ಗೆ 1 ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಗೆಲುವು ಸಾಧಿಸುವ ಮೂಲಕ ಹೊಸ ಇತಿಹಾಸವನ್ನು ಸೃಷ್ಟಿಸಿ, ಜಾರಕಿಹೊಳಿ ಕುಟುಂಬದ ಮೊದಲ ಎಂ.ಪಿ ಯಾಗಿ ಆಯ್ಕೆಯಾಗಿರುವ ಜೊತೆಗೆ ಜಾರಕಿಹೊಳಿ ಕುಟುಂಬದ ಮಹಿಳೆ ಯೋರ್ವಳು ಇದೇ ಮೊದಲ ಬಾರಿಗೆ ರಾಜಕೀಯಕ್ಕೆ ಅಧಿಕೃತವಾಗಿ ಎಂಟ್ರಿ ಕೊಟ್ಟ ಸಾಲಿಗೆ ಸೇರಿದ್ದಾರೆ.
ಚಿಕ್ಕೋಡಿ ಲೋಕಸಭೆ ಗೆ ಪ್ರಿಯಾಂಕಾ ಅವರ ಹೆಸರು ಘೋಷಣೆಯಾಗುವ ಸುಳಿವು ಸಿಕ್ಕಾಗಿನಿಂದ ಚಿಕ್ಕೋಡಿ ಲೋಕಸಭಾ ಕ್ಷೇತ್ರವನ್ನು ತಮ್ಮ ಸುರ್ಪದಿಗೆ ತೆಗೆದುಕೊಂಡು ಹಗಲಿರುಳು ಕಾರ್ಯನಿರ್ವಹಿಸಿದ ಸಚಿವ ಸತೀಶ ಜಾರಕಿಹೊಳಿ ಅವರು ತಮ್ಮ ಸಾವಿರಾರು ಬೆಂಬಲಿಗರು ಪಡೆಯನ್ನು ಚುನಾವಣಾ ಕಾರ್ಯಕ್ಕೆ ಅನಿಮಾಡಿ ಅತ್ಯಂತ ಸರಳ ಮತ್ತು ಶಿಸ್ತಿನಿಂದ ಚುನಾವಣೆಯನ್ನು ಎದುರಿಸಿ ತಮ್ಮ ಪುತ್ರಿ ಪ್ರಿಯಾಂಕ ಜಾರಕಿಹೊಳಿ ಅವರಿಗೆ ಗೆಲುವಿಗೆ ನಾಂದಿ ಹಾಡಿದ್ದಾರೆ.