RNI NO. KARKAN/2006/27779|Thursday, October 16, 2025
You are here: Home » breaking news » ಗೋಕಾಕ:ಸರಕಾರಿ ಆಸ್ಪತ್ರೆ ಆವರಣದಲ್ಲಿ ವಿಶ್ವ ಭೂಮಿ ದಿನಾಚರಣೆ ಆಚರಣೆ

ಗೋಕಾಕ:ಸರಕಾರಿ ಆಸ್ಪತ್ರೆ ಆವರಣದಲ್ಲಿ ವಿಶ್ವ ಭೂಮಿ ದಿನಾಚರಣೆ ಆಚರಣೆ 

ಸರಕಾರಿ ಆಸ್ಪತ್ರೆ ಆವರಣದಲ್ಲಿ ವಿಶ್ವ ಭೂಮಿ ದಿನಾಚರಣೆ ಆಚರಣೆ

ಗೋಕಾಕ ಎ 22 : ತಾಲೂಕು ಕಾನೂನು ಸೇವೆಗಳ ಸಮಿತಿ ಗೋಕಾಕ , ನ್ಯಾಯವಾದಿಗಳ ಸಂಘ, ಅರಣ್ಯ ಇಲಾಖೆ ಹಾಗೂ ತಾಲೂಕು ಆರೋಗ್ಯ ಇಲಾಖೆ ಇವುಗಳ ಸಂಯುಕ್ತಾಶ್ರಯದಲ್ಲಿ ಸೋಮವಾರದಂದು ನಗರದ ಸರಕಾರಿ ಆಸ್ಪತ್ರೆ ಆವರಣದಲ್ಲಿ ವಿಶ್ವ ಭೂಮಿ ದಿನಾಚರಣೆಯನ್ನು ಸಸಿಗೆ ನೆಡುವ ಮೂಲಕ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಶಿವಾನಂದ ನಾಯಕವಾಡಿ, ಸಹಾಯಕ ಅರಣ್ಯ ಸಂರಕ್ಷಾಣಾಧಿಕಾರಿ ವಾಸಿಮ ತೆನಗಿ, ವಲಯ ಅರಣ್ಯ ಅಧಿಕಾರಿ ಸಂಜೀವ ಸಂಸುದ್ದಿ, ಬಿ.ಆರ್.ಕೋಟಗಿ, ಪಿ.ಡಿ.ಸೋಮನ್ನವರ, ಡಾ.ರವೀಂದ್ರ ಅಂಟಿನ, ಎ.ಕೆ.ಕುಲಕರ್ಣಿ , ಎಸ್.ಎಸ್.ಜಿಡ್ಡಿಮನಿ, ಬಿ.ಬಿ.ಬಿರನಗಡ್ಡಿ, ಜಿ.ಆರ್.ಕಂಬಾರ, ಆರ್. ಎಸ್.ಶನವಿ, ಪ್ರೇಮಾ ಚಿಕ್ಕೋಡಿ ಉಪಸ್ಥಿತರಿದ್ದರು.

Related posts: