ಗೋಕಾಕ:ಶಿಕ್ಷಣ ಮಗುವಿನ ಅವಿಭಾಜ್ಯ ಅಂಗ,ಶಿಕ್ಷಣ ಇಲಾಖೆಗೆ ಶಕ್ತಿಯಾಗಿ ಅಡುಗೆ ಸಿಬ್ಬಂದಿಗಳು ನಿಂತಿದ್ದಾರೆ : ಬಿಇಒ ಜಿ.ಬಿ.ಬಳಗಾರ

ಶಿಕ್ಷಣ ಮಗುವಿನ ಅವಿಭಾಜ್ಯ ಅಂಗ,ಶಿಕ್ಷಣ ಇಲಾಖೆಗೆ ಶಕ್ತಿಯಾಗಿ ಅಡುಗೆ ಸಿಬ್ಬಂದಿಗಳು ನಿಂತಿದ್ದಾರೆ : ಬಿಇಒ ಜಿ.ಬಿ.ಬಳಗಾರ
ಗೋಕಾಕ ಮಾ 9 : ಶಿಕ್ಷಣ ಮಗುವಿನ ಅವಿಭಾಜ್ಯ ಅಂಗ, ಗುಣಮಟ್ಟದ ಶಿಕ್ಷಣ ದೊರೆಯಬೇಕು ಎಂಬ ಉದ್ದೇಶದಿಂದ ಪಾಲಕರು ಮಕ್ಕಳನ್ನು ಸರಕಾರಿ ಶಾಲೆಗಳಲ್ಲಿ ಕಳುಹಿಸುತ್ತಿದ್ದು, ಶಿಕ್ಷಣ ಇಲಾಖೆಗೆ ಶಕ್ತಿಯಾಗಿ ಅಡುಗೆ ಸಿಬ್ಬಂದಿಗಳು ನಿಂತಿದ್ದಾರೆ ಎಂದು ಬಿಇಒ ಜಿ.ಬಿ.ಬಳಗಾರ ಹೇಳಿದರು.
ಶನಿವಾರದಂದು ನಗರದಲ್ಲಿ ಲಕ್ಷ್ಮೀ ಸಭಾಂಗಣದಲ್ಲಿ ಜಿಲ್ಲಾ ಪಂಚಾಯತ್ ಬೆಳಗಾವಿ , ಶಾಲಾ ಶಿಕ್ಷಣ ಮತ್ತು ಸಾಕ್ಷಾರತಾ ಇಲಾಖೆ ಚಿಕ್ಕೋಡಿ, ಪ್ರಧಾನ ಮಂತ್ರಿ ಪೋಷಣ ಶಕ್ತಿ ನಿರ್ಮಾಣ ಯೋಜನೆ (ಎಂ.ಡಿ.ಎಮ್) ಹಾಗೂ ತಾಲೂಕು ಪಂಚಾಯತ್ ಗೋಕಾಕ ಇವುಗಳ ಸಂಯುಕ್ತಾಶ್ರಯದಲ್ಲಿ ಗೋಕಾಕ ವಲಯದ ಅಡುಗೆ ಸಿಬ್ಬಂದಿಗಳಲ್ಲಿಗೆ ” ಅಡುಗೆ ಸಿಬ್ಬಂದಿ ತರಬೇತಿ ಕಾರ್ಯಾಗಾರದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಮಕ್ಕಳು ನಾಳೆಯ ದಿನ ಸರ್ಮಥ ನಾಯಕರಾಗಿ ಬೆಳೆಯುವ ಸದುದ್ದೇಶದಿಂದ ಸರಕಾರ ಮಧ್ಯಾಹ್ನ ಬಿಸಿಯೂಟ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೆ. ಶಾಸಕ ರಮೇಶ್ ಜಾರಕಿಹೊಳಿ ಅವರು ಗೋಕಾಕ್ ವಲಯದ ಅಡುಗೆ ಸಿಬ್ಬಂದಿಗಳಿಗೆ ಎಲ್ಲಾ ರೀತಿಯ ಸಹಕಾರ ನೀಡುತ್ತಿದ್ದಾರೆ.
ಗೋಕಾಕ ವಲಯದಲ್ಲಿ ಬಗೆ,ಬಗೆಯ ಅಡುಗೆ ಮಾಡಿ ಮಕ್ಕಳಿಗೆ ನೀಡುತ್ತಿರುವುದು ಇಡೀ ಜಿಲ್ಲೆಗೆ ಮಾದರಿಯಾಗಿದೆ. ಇದು ಸಕಾರವಾಗಲು ಶಾಲೆಯ ಮುಖ್ಯೋಪಾಧ್ಯಾಯರು ತಮ್ಮ ತನು,ಮನ ಧನದಿಂದ ಕಾರ್ಯಮಾಡುತ್ತಿದ್ದಾರೆ. ಯೋಜನೆ ಅನುಷ್ಠಾನ ಮಾಡುವ ಸಂದರ್ಭದಲ್ಲಿ ಅಡುಗೆ ಸಿಬ್ಬಂದಿಗಳು ಹಲವಾರು ತೊಂದರೆಗಳನ್ನು ಅನುಭವಿಸುವ ಬೇಕಾಗುತ್ತದೆ ಅದನ್ನು ಸಮರ್ಥವಾಗಿ ನಿಭಾಯಿಸುವ ಸಲುವಾಗಿ ಇಲಾಖೆ ಅವರಿಗೆ ತರಬೇತಿ ನೀಡುತ್ತಿದ್ದಾರೆ ಇದರ ಸದುಪಯೋಗ ಪಡೆದುಕೊಂಡು ಒಳ್ಳೆಯ ಕಾರ್ಯನಿರ್ವಹಿಸಬೇಕು ಎಂದು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿ ಜಿಪಂ ಮಾಜಿ ಸದಸ್ಯ ಟಿ.ಆರ್.ಕಾಗಲ್ ಉದ್ಘಾಟಿಸಿದರು.
ಇದೇ ಸಂದರ್ಭದಲ್ಲಿ ಅಗ್ನಿಶಾಮಕ ದಳದ ಅಧಿಕಾರಿಗಳಿಂದ ಸಿಲಿಂಡರಗೆ ಬೆಂಕಿ ತಗುಲಿದಾಗ ನಂದಿಸುವ ಪ್ರಾತ್ಯಕ್ಷಿತೆ ನಡೆಸಿದರು.
ಈ ಸಂದರ್ಭದಲ್ಲಿ ಮಾಜಿ ಜಿಪಂ ಸದಸ್ಯ ಮಡೆಪ್ಪ ತೋಳಿನವರ, ಮಾಜಿ ನಗರಾಧ್ಯಕ್ಷ ಜಯಾನಂದ ಹುಣ್ಣಚ್ಯಾಳಿ, ಬಿಸಿಯೂಟ ಅಧಿಕಾರಿ ಎ.ಬಿ.ಮಲ್ಲಬನ್ನವರ, ಎಂ.ಡಿ.ಚುನಮರಿ, ಬಸವರಾಜ ಮುರಗೋಡ, ಶ್ರೀಮತಿ ಎಂ.ವ್ಹಿ ಬಾಗೇನ್ನವರ, ಜಿ.ಆರ್.ಸನದಿ, ಅಗ್ನಿಶಾಮಕ ದಳದ ಠಾಣಾಧಿಕಾರಿ ಎಸ್.ಎನ್.ಮೆಳವಂಕಿ, ಎಸ್.ಎಮ್.ಲೋಕನ್ನವರ, ಮಂಜುನಾಥ್ ಕಡೋಳಿ, ಸಂಜು ನಾಯಕ, ಎಂ.ಎಲ್.ಹಸರಂಗಿ, ಶ್ರೀಮತಿ ಎಸ್.ಎಸ್.ಮಳಗಿ, ಎಸ್.ಎಸ್.ಮಾಳಗಿ, ಢವಳೇಶ್ವರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.