ಗೋಕಾಕ:ಪುಟ್ಟರಾಜು ಗವಾಯಿಗಳು ಸಂಗೀತ ಲೋಕದಲ್ಲಿ ಅವಿಸ್ಮರಣೀಯ ಸಾಧನೆ ಮಾಡಿದ್ದಾರೆ : ಗಂಗಾಧರ ಮಳಗಿ

ಪುಟ್ಟರಾಜು ಗವಾಯಿಗಳು ಸಂಗೀತ ಲೋಕದಲ್ಲಿ ಅವಿಸ್ಮರಣೀಯ ಸಾಧನೆ ಮಾಡಿದ್ದಾರೆ : ಗಂಗಾಧರ ಮಳಗಿ
ಗೋಕಾಕ ಮಾ 3 : ವಿಶ್ವವನ್ನು ನೋಡಲು ಸಾಧ್ಯವಿಲ್ಲದಿದ್ದರು ಸಹ ವಿಶ್ವವೇ ತಮ್ಮತ್ತ ನೋಡುವ ಹಾಗೆ ಮಾಡಿದ ಪುಟ್ಟರಾಜು ಗವಾಯಿಗಳು ಸಂಗೀತ ಲೋಕದಲ್ಲಿ ಅವಿಸ್ಮರಣೀಯ ಸಾಧನೆ ಮಾಡಿದ್ದಾರೆ ಎಂದು ಸಾಹಿತಿ – ಚಿಂತಕ ಗಂಗಾಧರ ಮಳಗಿ ಹೇಳಿದರು.
ರವಿವಾರದಂದು ನಗರದ ರೋಟರಿ ರಕ್ತ ಭಂಡಾರದ ಸಭಾಂಗಣದಲ್ಲಿ ಅಖಿಲ ಕರ್ನಾಟಕ ಗಾನಯೋಗಿ ಸಂಗೀತ ಪರಿಷತ್ ಗದಗ- ಬೆಂಗಳೂರು ಹಾಗೂ ಗೋಕಾಕ ತಾಲೂಕು ಘಟಕದ ಸಂಯುಕ್ತಾಶ್ರಯದಲ್ಲಿ ಗಾನಯೋಗಿ ಪಂಡಿತ್ ಪುಟ್ಟರಾಜ ಕವಿ ಗವಾಯಿಗಳವರ 110 ನೇ ಜಯಂತಿಯ ನಿಮಿತ್ತ ಹಮ್ಮಿಕೊಂಡ ಸಂಗೀತ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಸಂಗೀತ ಶಿಕ್ಷಣವನ್ನು ಕಲಿಯಲು ಬಂದು ಅನೇಕರಿಗೆ ಸಂಗೀತ ಧಾರೆಯರೆದ ಪುಟ್ಟರಾಜು ಗವಾಯಿಯವರು ಎಲ್ಲಾ ಜಾತಿ ಜನಾಂಗದವರನ್ನು ಗೌರವಿಸಿ ಸಂಗೀತದ ಜೊತೆಗೆ ಆಧ್ಯಾತ್ಮಿಕ ಶಿಕ್ಷಣವನ್ನು ನೀಡಿದ್ದಾರೆ . ಕನ್ನಡ, ಸಂಸ್ಕೃತ ಹಾಗೂ ಹಿಂದಿ ಭಾಷೆಯನ್ನು ಅರಿತ ತ್ರಿಭಾಷಾ ಕವಿಯಾಗಿದ್ದ ಪುಟ್ಟರಾಜ ಗವಾಯಿಯವರು ಹಿಂದುಸ್ತಾನಿ ಮತ್ತು ಕರ್ನಾಟಕ ಸಂಗೀತದಲ್ಲಿ ಪ್ರಭುದ್ದತೆ ಪಡೆದ ಮಹಾನ ಗಾಯಕರಾಗಿದ್ದರು. ಅವರು ಅಂಧರ ಮತ್ತು ಅನಾಥರ ಆಶ್ರಯದಾತ್ತರಾಗಿದ್ದರು. ಸಂಗೀತ, ಆಧ್ಯಾತ ಕ್ಷೇತ್ರದಲ್ಲಿ ಅದ್ವಿತೀಯ ಸಾಧನೆ ಮಾಡಿದ ಶ್ರೇಷ್ಠ ಕಲಾವಿದರಾಗಿದ್ದರು. ಇಂದಿನ ಜಗತ್ತಿನಲ್ಲಿ ಕಣ್ಣಿದ್ದರು ಕುರೂಡರಾಗಿರುವರೆ ಹೆಚ್ಚು ತಾನು ಕುರುಡುರಾಗಿ ಅದ್ಬುತ ಸಾಧನೆ ಮಾಡಿದ ಪುಟ್ಟರಾಜು ಗವಾಯಿಯವರು ಇಂದಿಗೂ ನಮ್ಮಗೆಲ್ಲರಿಗೂ ಮಾದರಿಯಾಗಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿದ್ಯಾ ಮಗದುಮ್ಮ ವಹಿಸಿದ್ದರು.
ಈ ಸಂದರ್ಭದಲ್ಲಿ ಮಲ್ಲಿಕಾರ್ಜುನ ಕಲ್ಲೋಳಿ, ವಿದ್ಯಾ ಗುಲ್, ಅನುಸುಯಾ ದುಳಾಯಿ, ಶಶಿಕಲಾ ಶಿಂಧೆ ಇದ್ದರು. ಮಹೇಶ್ವರಿ ಗಾಣಿಗ ಕಾರ್ಯಕ್ರಮ ನಿರೂಪಿಸಿ,ವಂದಿಸಿದರು.