ಗೋಕಾಕ:ವಿದ್ಯಾರ್ಥಿಗಳು ಪರಿಶ್ರಮ ಮತ್ತು ಪ್ರಾಮಾಣಿಕತನದಿಂದ ಜ್ಞಾನಾರ್ಜನೆ ಮಾಡಿ ಸಾಕ್ಷರರಾಗಬೇಕು : ಗಜಾನನ ಮನ್ನಿಕೇರಿ

ವಿದ್ಯಾರ್ಥಿಗಳು ಪರಿಶ್ರಮ ಮತ್ತು ಪ್ರಾಮಾಣಿಕತನದಿಂದ ಜ್ಞಾನಾರ್ಜನೆ ಮಾಡಿ ಸಾಕ್ಷರರಾಗಬೇಕು : ಗಜಾನನ ಮನ್ನಿಕೇರಿ
ಗೋಕಾಕ ಜ 13 : ವಿದ್ಯಾರ್ಥಿಗಳು ಪರಿಶ್ರಮ ಮತ್ತು ಪ್ರಾಮಾಣಿಕತನದಿಂದ ಜ್ಞಾನಾರ್ಜನೆ ಮಾಡಿ ಸಾಕ್ಷರರಾಗಬೇಕು ಎಂದು ಶಿಕ್ಷಣ ಇಲಾಖೆಯ ನಿವೃತ್ತ ಅಪರ ಆಯುಕ್ತ ಗಜಾನನ ಮನ್ನಿಕೇರಿ ಹೇಳಿದರು.
ಇತ್ತೀಚೆಗೆ ನಗರದ ಜ್ಞಾನದೀಪ ಪದವಿ ಪೂರ್ವ ಕಾಲೇಜಿನ ವಾರ್ಷಿಕ ದಿನಾಚರಣೆಯ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಸಂಸ್ಥೆಯ ವತಿಯಿಂದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಸದೃಢ ದೇಶವನ್ನು ಕಟ್ಟುವ ಗುರುತರವಾದ ಜವಾಬ್ದಾರಿ ಇಂದಿನ ಯುವಕರ ಮೇಲಿದೆ, ಯಾವುದೇ ಕ್ಷೇತ್ರವಿರಲಿ ಸಾಧನೆಗೆ ಆತ್ಮವಿಶ್ವಾಸ ಮತ್ತು ಪ್ರಾಮಾಣಿಕ ಪ್ರಯತ್ನ ಮುಖ್ಯ ಎಂದ ಅವರು ನಾನು ಓದಿದ ಸಂಸ್ಥೆಯ ಗುರುಗಳಿಂದ ನಾನು ಸನ್ಮಾನಪಡೆಯುತ್ತಿರುವುದು ನನ್ನ ಪುಣ್ಯ ಎಂದರು.
ದೇಶವನ್ನು ಕಾಡುತ್ತಿರುವ ಸಮಸ್ಯೆಗಳಲ್ಲಿ ಅನಕ್ಷರತೆಯು ಒಂದು. ನಿರುದ್ಯೋಗ, ಬಡತನ ಮೂಡನಂಬಿಕೆ ಇವುಗಳ ಪರಿಹಾರಕ್ಕೆ ಸಾಕ್ಷರತೆಯೊಂದೇ ಮಾರ್ಗ ಆ ನಿಟ್ಟಿನಲ್ಲಿ ಎಲ್ಲರೂ ಓದಿ ವಿದ್ಯಾವಂತರಾಗಬೇಕು ಎಂದು ಹೇಳಿದರು.
ವೇದಿಕೆಯಲ್ಲಿ ಸಂಸ್ಥೆಯ ಆಡಳಿತ ಮಂಡಳಿಯ ಚೇರಮನ್ನರಾದ ವಿ.ಎ.ಕಡಕೋಳ, ಪ್ರಾಧ್ಯಾಪಕರಾದ ಪ್ರೊ.ಜೆ.ಎಮ್. ಪಾಟೀಲ, ಪ್ರೊ.ಆರ್.ಎಮ್.ಮಹೀಂದ್ರಕರ, ಪ್ರೊ.ಜಿ.ವ್ಹಿ.ಮಳಗಿ, ಪ್ರಾಚಾರ್ಯ ಪ್ರೊ.ಆರ್.ಜಿ.ಭರಭರಿ, ಪ್ರೊ.ಎ.ಎಮ್.ಪಾಟೀಲ . ವಿದ್ಯಾರ್ಥಿ ಮುಖ್ಯಪ್ರತಿನಿಧಿ ಕುಮಾರಿ. ಮೇಘಾ ಉಪಸ್ಥಿತರಿದ್ದರು.