RNI NO. KARKAN/2006/27779|Friday, July 12, 2024
You are here: Home » breaking news » ಬೆಳಗಾವಿ: ಸದನ ಅದು ಕದನ ಅಲ್ಲಾ, ಚಿಂತಕರ ಹಂದರ

ಬೆಳಗಾವಿ: ಸದನ ಅದು ಕದನ ಅಲ್ಲಾ, ಚಿಂತಕರ ಹಂದರ 

ಸದನ ಅದು ಕದನ ಅಲ್ಲಾ, ಚಿಂತಕರ ಹಂದರ

 

ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಡಿಸೆಂಬರ್ 4 ರಿಂದ ಚಳಿಗಾಲದ ಅಧಿವೇಶನ ಪ್ರಾರಂಭವಾಗಿ ಹಲವಾರು ಮಹತ್ತರ ವಿಷಯಗಳು ಬಗ್ಗೆ ಚರ್ಚೆಗಳು ನಡೆಯುತ್ತಿವೆ. ವವಿಧಾನಸಭೆ ಆಗಲಿ, ವಿಧಾನಪರಿಷತ್ ಆಗಲಿ ಎರೆಡು ಸದನದಲ್ಲಿ ಸದನದ ಸದಸ್ಯರು ಎಲ್ಲಾ ಚರ್ಚೆಗಳಲ್ಲಿ ಭಾಗವಹಿಸಿ ಸದನದಲ್ಲಿ ಪ್ರಸ್ತಾಪಕ್ಕೆ ಬರುವ ವಿಷಯಗಳ ಕುರಿತು ಚರ್ಚೆಯಲ್ಲಿ ಭಾಗವಹಿಸಿ ತಮ್ಮ ವಾದಗಳನ್ನು ಮಂಡಿಸುತ್ತಿರುತ್ತಾರೆ ಆದರೆ ಕೆಲವು ಬಾರಿ ಇಂತಹ ಚರ್ಚೆಗಳು ಅತಿರೇಕಕ್ಕೆ ಹೋಗಿ ಸದನದಲ್ಲಿ ಗದ್ದಲಗಳು ನಡೆಯುತ್ತವೆ. ಆ ಗದ್ದಲಗಳನ್ನೇ ನಾವು ಹೆಚ್ಚಾಗಿ ನೋಡಿದುಂಟು ಸದನ ನಡೆಯುವ ಸಂಧರ್ಭದಲ್ಲಿ ಶಾಸಕರ ಕಡೆಯಿಂದ ಪಾಸುಗಳನ್ನು ಪಡೆದು ವಿಕ್ಷಕರ ಗ್ಯಾಲರಿಯಲ್ಲಿ ಕುಳಿತು 10 ನಿಮಿಷ ಸದನ ಆಲಿಸಿದನ್ನು ಬಿಟ್ಟರೆ. ಟಿವಿಗಳಲ್ಲಿ ತೋರಿಸುವ ಗದ್ದಲಗಳನ್ನೇ ನಾವು ನೋಡಿ ಸದನ ಎಂದರೆ ಬರಿ ಗದ್ದಲ ,ಕೋಲಾಹಲ , ಕಾಲ ಹರಣ ಎಂದು ಭಾವಿಸಿ ಸದನಗಳನ್ನು ನಾವು ಅಷ್ಟೊಂದು ಗಂಭೀರವಾಗಿ ಪರಿಗಣಿಸದೆ ಅಧಿವೇಶನ ಅಂದರೆ ಅಸಡ್ಡೆ ತೋರುತ್ತೇವೆ. ಆದರೆ ಪ್ರತ್ಯೇಕವಾಗಿ ಸದನವನ್ನು ಆಲಿಸಿದರೆ ಸದನ ಅಂದರೆ ಕಾಲಹರಣ, ಗದ್ದಲ, ಕೋಲಾಹಲ ಅನಿಸುವುದೆ ಇಲ್ಲಾ. ಅಷ್ಟೊಂದು ನಿಟಾಗಿ, ಅಷ್ಟೊಂದು ಗಂಭೀರವಾಗಿ ಎರೆಡು ಸದನಗಳು ನಡೆಯುತ್ತವೆ. ವಿರೋಧ ಪಕ್ಷದವರು ತಮ್ಮ ನಿಲುವನ್ನು ಪ್ರಸ್ತಾಪಿಸಿದರೆ ಆಡಳಿತ ಪಕ್ಷದವರು ತಮ್ಮ ನಿಲುವನ್ನು ಸದನಕ್ಕೆ ಮನವರಿಕೆ ಮಾಡಿ ಕೊಡುವ ರೀತಿ ಎಲ್ಲವೂ ತುಂಬಾ ಅಚ್ಚುಕಟ್ಟು ಬಹುಶಃ ಸದನಕ್ಕೆ ಸದಸ್ಯರು ನೀಡುವ ಗೌರವ ತಮ್ಮ ಬದುಕಿನುದ್ದಕ್ಕೂ ಬೇರೆಯಾವ ಕಾರ್ಯಕ್ಕೆ ನೀಡಲಾರರು. ಸದನದ ಒಳಗೆ ಪ್ರವೇಶಿಸುವ ಸದನದ ಸದಸ್ಯರು ಸಭಾಧ್ಯಕ್ಷರಿಗೆ ನಮಸ್ಕರಿಸಿ ಸದನದಲ್ಲಿ ಕುಳಿತುಕೊಳ್ಳುವುದು, ಸದನದಿಂದ ಹೊರಗೆ ಹೋಗುವಾಗ ಸಭಾಧ್ಯಕ್ಷರಿಗೆ ನಮಸ್ಕರಿಸಿ ಹೋಗುವುದು ಎಲ್ಲವೂ ಅಚ್ಚುಕಟ್ಟು, ವಿರೋಧ ಪಕ್ಷದ ಸದಸ್ಯರು ಎದ್ದುಹೋಗಿ ಆಡಳಿತ ಪಕ್ಷದ ಶಾಸಕರು, ಸಚಿವರ ಪಕ್ಕ ಕುಳಿತು ಅವರೊಂದಿಗೆ ಅನ್ಯೋನ್ಯವಾಗಿ ಮಾತನಾಡುವುದು, ಆಡಳಿತ ಪಕ್ಷದವರು ವಿರೋಧ ಪಕ್ಷದವರ ಕಡೆ ಹೋಗಿ ಅವರ ಪಕ್ಕ ಕುಳಿತು ಕಿವಿಯಲ್ಲಿ ಚರ್ಚೆ ಮಾಡುವುದು ಎಲ್ಲಾ ಸನ್ನಿವೇಶಗಳು ಕಣ್ಣಿಗೆ ಕಟ್ಟುವ ಹಾಗೆ ಇರುತ್ತವೆ. ಇವೆಲ್ಲಾ ಸನ್ನಿವೇಶಗಳನ್ನು ನಾವು ಟಿವಿಯಲ್ಲಿ ಮತ್ತು ಪ್ರೇಕ್ಷಕರ ಗ್ಯಾಲರಿಯಲ್ಲಿ ಕುಳಿತು ನೋಡಲು ಸಾಧ್ಯವಿಲ್ಲ. ಇವೆಲ್ಲವನ್ನು ನೋಡಬೇಕೆಂದರೆ ಒಂದು ಸದನದ ಸದಸ್ಯರಿಬೇಕು, ಆಯಾ ಇಲಾಖೆಯ ಉನ್ನತ ಮಟ್ಟದ ಅಧಿಕಾರಿಗಳು ಇರಬೇಕು ಇಲ್ಲದಿದ್ದರೆ ಮಾನ್ಯತೆ ಪಡೆದ ಪತ್ರಕರ್ತರಾಗಿರಬೇಕು. ಇವರೆಲ್ಲರೂ ಇಲ್ಲಿಯವರೆಗೆ ಸದನವನ್ನು ಸದನದ ಹಾಗೆ ತೋರಿಸುವ, ಬರೆಯುವ, ಹೇಳುವ ಕಾರ್ಯಗಳನ್ನು ಬಹುಶಃ ಮಾಡಿಲ್ಲಾ ಅದರ ಪರಿಣಾಮವೇ ಇಂದು ಸಾರ್ವಜನಿಕರಲ್ಲಿ ಸದನ ಎಂದರೆ ಚಿರಾಟ,ಗದ್ದಲ ಸದನದ ಬಾವಿಗೆ ಇಳಿದು ಪ್ರತಿಭಟನೆ, ಸಭಾತ್ಯಾಗ ಎಂಬಿತ್ಯಾದಿ ಧೋರಣೆಗಳು ಮೂಡಿವೆ. ಪ್ರತಿಭಟನೆ ಮಾಡುವುದು, ತಮ್ಮ ವಾದಗಳನ್ನು ಮಂಡಿಸುವುದು, ಎಲ್ಲರ ಹಕ್ಕು. ಇದು ಸದನದಲ್ಲಿಯೂ ಅಷ್ಟೇ ಸದನದ ಹೋರಗಡೆ ಆದರೆ ಅಷ್ಟೇ ಎಲ್ಲರಿಗೂ ಸಂವಿಧಾನ ಸಮಾನವಾದ ಹಕ್ಕನ್ನು ನೀಡಿದೆ. ಆ ಸದನ ಒಳಗಡಗಯೂ ಹಾಗೂ ಸದನದ ಹೋರಗಡೆಯೂ ಸದನದ ಸದಸ್ಯರು ಹಾಗೂ ಸಾರ್ವಜನಿಕರು ಸಹ ಪ್ರತಿಭಟನೆಗಳನ್ನು ಮಾಡುತ್ತಾರೆ. ಆ ವಿಷಯವನ್ನೆ ವೈಭವಿಕರಿಸಿ ಸಾರ್ವಜನಿಕರ ಮನಮುಟ್ಟುವಂತೆ ಹೇಳುವದು ಅಥವಾ ತೋರಿಸುವದು ನನ್ನ ಪ್ರಕಾರ ತಪ್ಪು, ತಪ್ಪು ಮತ್ತು ತಪ್ಪು.

ನಾನು ವೃತ್ತಿಯಿಂದ ಪತ್ರಕರ್ತನಾದರರು ಸಹ ಸದನ ಒಳಗಡೆ ಹೋಗಿ ಸುದ್ದಿ ಮಾಡುವ ಗೋಜಿಗೆ ಹೋಗಿರಲಿಲ್ಲ ಒಂದೆರೆಡು ಬಾರಿ ಬೆಂಗಳೂರು ಮತ್ತು ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ವಿಕ್ಷಕರ ಗ್ಯಾಲರಿಯಲ್ಲಿ ಕುಳಿತು ಸದನ ಆಲಿಸಿದ ಹಾಗೂ ಸುವರ್ಣ ವಿಧಾನಸೌಧದಲ್ಲಿ ಸನ್ 2016ರಲ್ಲಿ ಕರ್ನಾಟಕ ಮಾಧ್ಯಮ ಅಕ್ಯಾಡಮಿ ವತಿಯಿಂದ ಎರೆಡು ದಿನಗಳ ಕಾರ್ಯಾಗಾರದಲ್ಲಿ ಭಾಗವಹಿಸಿದ ಅನುಭ ಬಿಟ್ಟರೆ ನಾನು ಸಾರ್ವಜನಿಕರ ಹಾಗೆ ಸದನ ಎಂದರೆ ಗದ್ದಲ, ಪ್ರತಿಭಟನೆ, ಸಭಾತ್ಯಾಗ ,ಸದನದ ಭಾವಿಗೆ ಇಳಿದು ಪ್ರತಿಭಟನೆ ಮಾಡುವುದು ಎಂದು ತಿಳಿದು ಸದನದ ಒಳಗಡೆ ಹೋಗುವ ಸಾಹಸ ಮಾಡಿರಲಿಲ್ಲ.
ಆದರೆ ಮೊನ್ನೆ ಆತ್ಮೀಯ ಸಹೃದಯಿ ಗೆಳೆಯ ಶಶಿ ಹಾಗೂ ಬೆಂಗಳೂರಿನ ಉನ್ನತ ಮಟ್ಟದ ಅಧಿಕಾರಯೊಬ್ಬರ ಹಾಗೂ ವಿಧಾನಪರಿಷತನ ಕಾರ್ಯದರ್ಶಿಗಳು ನನಗೆ ಗುರುತಿನ ಚೀಟಿಯನ್ನು ನೀಡಿದರು ಇವೆರೆಲ್ಲರ ಸಹಕಾರದಿಂದ ಸದನದ ಒಳಗಡೆ ಹೋಗಿ ಸದನವನ್ನು ಅತ್ಯಂತ ಸಮೀಪದಿಂದ ಸಭಾಧ್ಯಕ್ಷರ ಎಡಗಡೆ ಪತ್ರಕರ್ತರ ಗ್ಯಾಲರಿಯಲ್ಲಿ ಕುಳಿತು ಸದನ ನೋಡುವ ಮತ್ತು ಆಲಿಸುವ ಸುಸಂದರ್ಭದ ದೊರತ್ತಿದ್ದು ನಾನಂತೂ ಮರೆಯಲು ಸಾಧ್ಯವಿಲ್ಲ. ಅಲ್ಲಿ ನಡೆದ ಕೆಲ ಚರ್ಚೆ ಮತ್ತು ಪ್ರಸಂಗಗಳನ್ನು ತಮ್ಮ ಮುಂದೆ ಹಂಚಿಕೊಂಡು ಸದನ ಅಂದರೆ ಬರೀ ಸಭಾತ್ಯಾಗ , ಗದ್ದಲ, ಪ್ರತಿಭಟನೆ ಅಲ್ಲಾ ಸದನ ಎಂದರೆ ಅದು ಚಿಂತಕರ ಹಂದರ, ಚಾವಡಿ ಎಂದು ಹೇಳುವ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇನೆ ಅಷ್ಟೇ.
ಸದನದಲ್ಲಿ ನಡೆಯುವ ಪ್ರತಿಯೊಂದು ಮಾತುಗಳು ಕಡತವಾಗುತ್ತವೆ, ಕಾನೂನು ಆಗುತ್ತವೆ, ಸದನವನ್ನು ಸದನದಲ್ಲಿ ಅಲ್ಲದಿದ್ದರೂ ಮನೆಯಲ್ಲಿ ಕುಳಿತು ಪೂರ್ಣ ಪ್ರಮಾಣದಲ್ಲಿ ನೋಡಬೇಕು ಮತ್ತು ತದೆಕ ಚಿತ್ತದಿಂದ ಆಲಿಸಿಬೇಕು ಅಂದಾಗ ಮಾತ್ರ ತಿಳಿಯುತ್ತದೆ ಸದನ ಎಂದರೆ ಏನು ಅಂತಾ.
ಗುರುವಾರ ಡಿಸೆಂಬರ್ 7, 2023 ಕರ್ನಾಟಕ ವಿಧಾನ ಪರಿಷತ್ತಿನ ನೂರಾ ಐವತ್ತೊಂದನೆಯ ಅಧಿವೇಶನವನ್ನು ನೋಡುವ , ಆಲಿಸುವ ಸೌಭಾಗ್ಯ ನನ್ನದಾಗಿತ್ತು ಅಂದು ಗೆಳೆಯ ಶಶಿಯೊಂದಿಗೆ ವಿಧಾನಪರಿಷತ್ ಪ್ರವೇಶ ಮಾಡಿ , ವಿಧಾನಪರಿಷತ್ ಸಭಾಧ್ಯಕ್ಷರ ಪಕ್ಕ ಇರುವ ಪತ್ರಕರ್ತರ ಗ್ಯಾಲರಿಯಲ್ಲಿ ಕುಳಿತು ಕಲಾಪ ಆಲಿಸ ತೊಡಗಿದೆ. ಸದನದಲ್ಲಿ ಮಾನ್ಯ ವಿಧಾನ ಪರಿಷತ್ ಸದಸ್ಯರಾದ ಶ್ರೀ ಮರಿತಿಬ್ಬೇಗೌಡ ಅವರು ನಿಯಮ -72ರ ಅಡಿಯಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷಾರತೆ ಇಲಾಖೆಯ ವ್ಯಾಪ್ತಿಯಲ್ಲಿ ಶಿಕ್ಷಕರಿಗೆ ಹಿರಿಯ ಪ್ರಾಥಮಿಕ ಶಾಲೆಯಿಂದ ಪ್ರೌಢಶಾಲೆಗೆ ಬಡ್ತಿ ನೀಡುವಲ್ಲಿ ಒಂದು ನಿಯಮ, ಪ್ರೌಢಶಾಲೆಯಿಂದ ಪದವಿಪೂರ್ವ ಕಾಲೇಜಿಗೆ ಬಡ್ತಿ ನೀಡುವಲ್ಲಿ ಮತ್ತೊಂದು ನಿಯಮ ರೂಪಿಸಿ ತಾರತಮ್ಯ ಉಂಟುಮಾಡಿರುವ ಗಂಭೀರ ಸಮಸ್ಯೆ ಕುರಿತು ಮಾನ್ಯ ಶಿಕ್ಷಣ ಸಚಿವರಿಗೆ ಪ್ರಶ್ನೆ ಯೊಂದನ್ನು ಕೇಳಿ ಮತ್ತು ಮಾನ್ಯ ವಿಧಾನ ಪರಿಷತ್ ಸದಸ್ಯರಾದ ಶ್ರೀ ಗೋವಿಂದರಾಜು , ಶ್ರೀ ಕೆ.ಎ ತಿಪ್ಪೇಸ್ವಾಮಿ, ಡಾ.ಸೂರಜ್ ರೇವಣ್ಣ ಇವರುಗಳು ಸಹ ನಿಯಮ 72ರ ಅಡಿಯಲ್ಲಿ ಪ್ರಾದೇಶಿಕ ಅಸಮತೋಲನ ನೀಗಿಸುವ ಮತ್ತು ಶೈಕ್ಷಣಿಕ ಹಿಂದುಳಿದಿರುವ ಜಿಲ್ಲೆಗಳಲ್ಲಿ ಉನ್ನತ ಶಿಕ್ಷಣದ ವಾರ್ಷಿಕ ನೋಂದಣಿ ಅನುಪಾತವನ್ನು ಸುಧಾರಿಸುವ ನಿಟ್ಟಿನಲ್ಲಿ ಮಾದರಿ ವಿಶ್ವವಿದ್ಯಾಲಯಗಳನ್ನು ಸ್ಥಾಪಿಸಿ ಅಲ್ಲಿನ ಸಮುದಾಯಕ್ಕೆ ಅವಕಾಶ ಅವಕಾಶವನ್ನು ಸ್ಥಳೀಯವಾಗಿ ಕಲ್ಪಿಸಿ ಯುವಜನಾಂಗವನ್ನು ದೇಶದ ಫಲಪ್ರದವಾಗಿ ಬೆಳೆಸುವ ನಿಟ್ಟಿನಲ್ಲಿ ಹೊಸ ವಿಶ್ವವಿದ್ಯಾಲಯಗಳನ್ನು ಸ್ಥಾಪಿಸಲಾಗಿದೆ ಹೀಗೆ ಸ್ಥಾಪನೆಯಾಗಿರುವ ವಿಶ್ವ ವಿದ್ಯಾಲಯಗಳಲ್ಲಿ ಹಳೆಯ ವಿಶ್ವವಿದ್ಯಾಲಯದಲ್ಲಿ ಇರುವ ಹಾಗೆ ಸಂಯೋಜಿತ ಕಾಲೇಜುಗಳ ಸಂಖ್ಯೆಯು ಹಳೆಯ ವಿಶ್ವವಿದ್ಯಾಲಯಗಳ ರೀತಿಯಲ್ಲಿ ಇಲ್ಲದೇ ಇರುವುದು , ಸ್ವಂತ ಕಟ್ಟಡ ಇಲ್ಲದೆ ಇರುವುದು ಮತ್ತು ಬೋಧಕ, ಭೋಧಕೇತರ ಸಿಬ್ಬಂದಿಗಳ ಕೋರತೆ, ಆರ್ಥಿಕ ಮುಗ್ಗಟ್ಟು ಸೇರಿದಂತೆ ಹಲವಾರು ಸಮಸ್ಯೆಗಳನ್ನು ಗಳಿಂದ ಹೊಸ ವಿಶ್ವ ವಿಶ್ವವಿದ್ಯಾಲಯಗಳು ಇನ್ನೂ ಟೇಕಾಫ ಆಗಿರುವುದಿಲ್ಲ ಎಂದು ಉನ್ನತ ಶಿಕ್ಷಣ ಸಚಿವರಾದ ಶ್ರೀ ಡಾ.ಎಂ.ಸಿ.ಸುಧಾಕರ ಅವರಿಗೆ ಕೇಳಿದ ಪ್ರಶ್ನೆಗೆ ಸಂಬಂಧಿಸಿದಂತೆ ಮತ್ತು ಎನ್.ಇ.ಪಿ ಮತ್ತು ಎಸ್.ಇ ಪಿ ಶಿಕ್ಷಣ ನೀತಿಗಳ ಬಗ್ಗೆ ವಿಧಾನಪರಿಷತ್ ನಲ್ಲಿ ಗಂಭೀರ ಚರ್ಚೆಗಳು ನಡೆಯುತ್ತಿದ್ದವು, ವಿರೋಧ ಪಕ್ಷದ ಪರಿಷತ್ ಸದಸ್ಯರು ಕೇಳಿದ ಪ್ರಶ್ನೆಗೆ ಹಾಗೂ ಶಿಕ್ಷಣ ನೀತಿ ಎನ್.ಇ ಪಿ ಬಗ್ಗೆ ಸಮರ್ಥವಾಗಿ ವಾದ ಮಂಡಿಸುತ್ತಿದ್ದರೆ, ಅತ್ತ್ ಆಡಳಿತ ಪಕ್ಷದ ಪರಿಷತ್ ಸದಸ್ಯರು ಹಾಗೂ ಸದನದಲ್ಲಿ ಇದ್ದ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ, ಪ್ರೌಢ ಮತ್ತು ಪ್ರಾಥಮಿಕ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಕೇಳಿದ ಪ್ರಶ್ನೆಗೆ ಮುಂದಿನ ದಿನಗಳಲ್ಲಿ ಸರಿಪಡಿಸುವುದಾಗಿ ಹಾಗೂ ಎಸ್.ಇ.ಪಿ ಶಿಕ್ಷಣ ನೀತಿಯೆ ಸರಿಯಾದದ್ದು ಅದರಿಂದ ಮಕ್ಕಳ ಮುಂದಿನ ಭವಿಷ್ಯ ಉತ್ತಮ ಮತ್ತು ಉಜ್ವಲವಾಗುತ್ತದೆ ಎಂದು ಸಮರ್ಥಿಸಿಕೊಳ್ಳುತ್ತಿದ್ದರು ಅವರಿಗೆ ಆವಾಗಾವಾಗ ಕಾರ್ಮಿಕ ಸಚಿವ ಸಂತೋಷ ಲಾಡ ಅವರುವ ಸಾಥ್ ನೀಡಿ ಸರಕಾರದ ಎಸ್.ಇ.ಪಿ ಶಿಕ್ಷಣ ನೀತಿಯನ್ನು ಸಮರ್ಥಿಸುತ್ತಿದ್ದರು. ಈ ಗಂಭೀರ ಚರ್ಚೆ ಆಲಿಸುತ್ತಿದ್ದ ನನಗಂತೂ ಎರಡು ಕಡೆಯ ಸದಸ್ಯರು ವಾದಿಸುವ ವಿಚಾರಗಳು ಸರಿಯೇ ಇವೆ ಅನಿಸುತ್ತಿತ್ತು ಅಷ್ಟರ ಮಟ್ಟಿಗೆ ಸದನದಲ್ಲಿ ಸದಸ್ಯರು ತಮ್ಮ ,ತಮ್ಮ ವಾದಗಳನ್ನು ಮಂಡಿಸುತ್ತಿದ್ದರು ಇಂತಹ ಗಂಭೀರ ವಿಷಯಗಳು ಚರ್ಚೆಗೆ ಬಂದಾಗ ಸಾಮನ್ಯವಾಗಿ ಕೆಲ ಗದ್ದಲಗಳು, ವಾಕ ಸಮರಗಳು ನಡೆಯುವದು ಸರ್ವೇ ಸಾಮಾನ್ಯ. ಮುಂಜಾನೆ ಸದನದಲ್ಲಿ ಕುಳಿತು ನಾನು ಮಧ್ಯಾಹ್ನ ಊಟದ ಸಮಯ ಆಗಿದ್ದೆ ತಿಳಿಯಲಿಲ್ಲ ಸಭಾಧ್ಯಕ್ಷರು ಸದನವನ್ನು ಒಂದು ತಾಸು ಮುಂದುಡಿದ್ದಾಗ ಎಂದು ಊಟಮಾಡಿ ಬಂದು ಸದನದಲ್ಲಿ ಕುಳಿತು ಕೊಂಡರೆ ಸದನ ಮುಗಿದಾಗ ಸಂಜೆ 7. ಈ ಸಮಯವೂ ದಾಟ್ಟಿದ್ದೆ ಗೋತ್ತಾಗಲ್ಲಿ ಅಷ್ಟೊಂದು ಗಂಭೀರ ಮತ್ತು ಸ್ವಾರಸ್ಯಕರ ರೀತಿಯಲ್ಲಿ ಎರೆಡು ಸದನಗಳಲ್ಲಿ ನಮ್ಮಗಾಗಿ ಚರ್ಚೆ ನಡೆಯುತ್ತವೆ . ನಂತರ ವಿಷಯಗಳನ್ನು ಮತಕ್ಕೆ ಬಿದ್ದು ಹೆಚ್ಚಿನ ಸದಸ್ಯರು ಇರುವ ಆಡಳಿತ ಪಕ್ಷದವರು ಹೊಸ ಕಾನೂನು ಹೊಸ ನೀತಿಯನ್ನು ಜಾರಿಗೆ ತರುತ್ತಾರೆ ಅದು ಬೇರೆಮಾತು ಆದರೆ ಚರ್ಚೆಗಳು ನಡೆಯುವ ರೀತಿ ನೋಡಿದರೆ ಮೈ ರೋಮಾಂಚನ ವಾಗುತ್ತದೆ. ಇದು ಸದನದ ಒಳಗಿನ ಗಾಂಭೀರ್ಯತೆಯಾದರೆ ಆವಾಗಾವಾಗ ಆಡಳಿತ ಪಕ್ಷದರವರು ವಿರೋಧ ಪಕ್ಷದವರ ಪಕ್ಕ ಕುಳಿತು ಮಾತನಾಡುವುದು, ವಿರೋಧ ಪಕ್ಷದವರು ಆಡಳಿತ ಪಕ್ಷದವರ ಹತ್ತಿರ ಬಂದು ಕುಳಿತು ಮಾತನಾಡುವ ಸನ್ನಿವೇಶಗಳು ನಡೆಯುತ್ತಲೆ ಇರುತ್ತವೆ ಈ ಸನ್ನಿವೇಶಗಳು ಸಹ ನೋಡಗರನ್ನು ಮಂತ್ರ ಮುಗ್ದರನ್ನಾಗಿಸುತ್ತವೆ. ಸದನದಲ್ಲಿ ಚಿರಾಡಿದ, ಬೈದಾಡಿದ ಸದಸ್ಯರು ತಮ್ಮ ಮಾತು ಮುಗಿದ ನಂತರ ಎಲ್ಲವನ್ನೂ ಬಿಟ್ಟು ,ಮರೆತು ಮತ್ತೆ ಸ್ನೇಹಿತರಂತೆ ಕೂಡಿ ಇರುವುದು ಸದನದ ವಿಶೇಷತೆಗಳಲ್ಲಿ ಒಂದು ಎಂದರೆ ಖಂಡಿತ ತಪ್ಪಾಗಲಿಕ್ಕಿಲ್ಲ.‌‌.. ಸದನದ ಒಳಗಿನಿಂದ ನಿಮ್ಮವನ್ನೇ ಆದ ಸಾದಿಕ…

 

Related posts: