ಗೋಕಾಕ:ಕಷ್ಟಗಳನ್ನು ಸಮರ್ಥವಾಗಿ ನಿಭಾಯಿಸಿ ಮುಂದೆ ಸಾಗಬೇಕು : ಮುರುಘರಾಜೇಂದ್ರ ಶ್ರೀ

ಕಷ್ಟಗಳನ್ನು ಸಮರ್ಥವಾಗಿ ನಿಭಾಯಿಸಿ ಮುಂದೆ ಸಾಗಬೇಕು : ಮುರುಘರಾಜೇಂದ್ರ ಶ್ರೀ
ಗೋಕಾಕ ಸೆ 3 : ಜೀವನದಲ್ಲಿ ಸಾದು, ಸಂತರಿಗೂ ಕೂಡಾ ಸಮಸ್ಯೆಗಳು ಬಂದಿವೆ,ಎಲ್ಲರ ಜೀವನದಲ್ಲಿ ಕಷ್ಟಗಳು ಬರುವುದು ಸಹಜ ಅವುಗಳನ್ನು ಸಮರ್ಥವಾಗಿ ನಿಭಾಯಿಸಿ ಮುಂದೆ ಸಾಗಬೇಕು ಎಂದು ಇಲ್ಲಿನ ಶೂನ್ಯ ಸಂಪಾದನ ಮಠದ ಪೀಠಾಧಿಪತಿ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳು ಹೇಳಿದರು
ರವಿವಾರದಂದು ನಗರದ ಉಪಕಾರಾಗೃಹದಲ್ಲಿ ಶ್ರೀ ಶೂನ್ಯ ಸಂಪಾದನ ಮಠ ಹಮ್ಮಿಕೊಂಡ ಶ್ರಾವಣ ಮಾಸದ ನಿಮಿತ್ತ ವಿಚಾರಣಾಧೀನ ಖೈದಿಗಳ ಮನಪರಿವರ್ತನ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವಹಿಸಿ ಅವರು ಮಾತನಾಡಿದರು
ವಿಧಿ ಬರೆದ ಹಣೆಬರಹವನ್ನು ಯಾರಿಂದಲೂ ತಿದ್ದಲು ಸಾಧ್ಯವಿಲ್ಲ. ಆದರೆ ಜೀವನದಲ್ಲಿ ಸಿಕ್ಕ ಅವಕಾಶವನ್ನು ಸದುಪಯೋಗ ಪಡೆಸಿಕೊಂಡು ತಮ್ಮ ಜೀವನವನ್ನು ಬದಲಾಯಿಸಕೊಳ್ಳಬೇಕು. ಜೈಲು ಅಂದರೆ ಕೆಟ್ಟದಲ್ಲ ಇಲ್ಲಿ ಬಂದವರು ಮನಸ್ಸು ಪರಿವರ್ತನೆ ಮಾಡಿಕೊಂಡು ಹೋಗಬೇಕು. ಮಹಾತ್ಮರ ಕಾಲದಲ್ಲಿಯೂ ಸಹ ಇಂತಹ ಕಹಿ ಘಟನೆಗಳು ಬಂದಿವೆ. ಅಂತಹ ಸಮಯದಲ್ಲಿ ಅವರು ತಮ್ಮ ಮನಪರಿವರ್ತನೆ ಮಾಡಿಕೊಂಡು ಸಮಾದಲ್ಲಿ ಒಳ್ಳೆಯ ಸಾಧಕರಾಗಿ ಬೆಳೆದು ಸಮಾಜಕ್ಕೆ ದಾರಿ ದೀಪವಾಗಿದ್ದಾರೆ. ಆ ನಿಟ್ಟಿನಲ್ಲಿ ತಾವು ಸಹ ವಿಚಾರಣಾಧೀನ ಹಂತದಲ್ಲಿ ತಮ್ಮ ಮನ ಪರಿವರ್ತನೆ ಮಾಡಿಕೊಂಡು ಸಮಾಜ ತಮ್ಮನ್ನು ಸಹ ಗೌರವಿಸುವ ನಿಟ್ಟಿನಲ್ಲಿ ಬದುಕನ್ನು ಕಟ್ಟಿಕೊಳ್ಳಬೇಕು. ಭಗವಂತನ ಮುಂದೆ ಪ್ರಾರ್ಥನೆ , ಭಜನೆಯನ್ನು ಮಾಡಿ ಜೀವನವನ್ನು ಬದಲಾಯಿಸಿಕೊಳ್ಳಿ ಜೈಲಿನಲ್ಲಿ ಓದಿನ ಹವ್ಯಾಸ ಬೆಳಿಸಿಕೊಂಡು ಜೀವನವನ್ನು ಪಾವನ ಮಾಡಿಕೊಂಡು ಜೈಲಿನಿಂದ ಹೊರಬಂದು ಒಳ್ಳೆಯ ಜೀವನ ನಡೆಸಿ ಎಂದು ಹಾರೈಸಿದರು.
ಡಾ.ಸಿ.ಕೆ.ನಾವಲಗಿ ಮಾತನಾಡಿ ಶ್ರೀ ಶೂನ್ಯ ಸಂಪಾದನ ಮಠದಿಂದ ವೈಚಾರಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸಮಾಜವನ್ನು ಸುಧಾರಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತಿರುವುದು ಶ್ಲಾಘನೀಯ ಎಂದು ಹೇಳಿದರು
ಕಾರ್ಯಕ್ರಮದ ಉಪ ಕಾರಾಗೃಹದ ಅಧೀಕ್ಷಿ ಶ್ರೀಮತಿ ಲಕ್ಷ್ಮೀ ಹಿರೇಮಠ ಉದ್ಘಾಟಿಸಿದರು.
ವೇದಿಕೆಯಲ್ಲಿ ಮಹಿಳಾ ವೇದಿಕೆ ಅಧ್ಯಕ್ಷೆ ಶ್ರೀಮತಿ ವಿಜಯಲಕ್ಷೀ ಹಿರೇಮಠ, ವಿವೇಕ ಜತ್ತಿ, ಬಸನಗೌಡ ಪಾಟೀಲ ಉಪಸ್ಥಿತರಿದ್ದರು