RNI NO. KARKAN/2006/27779|Saturday, August 2, 2025
You are here: Home » breaking news » ಗೋಕಾಕ:ಕ್ರಿಕೆಟ್ ಪಂದ್ಯಾವಳಿ : ವಿಜೇತರಿಗೆ ಬಹುಮಾನ ವಿತರಿಸಿದ ಸನತ ಜಾರಕಿಹೊಳಿ

ಗೋಕಾಕ:ಕ್ರಿಕೆಟ್ ಪಂದ್ಯಾವಳಿ : ವಿಜೇತರಿಗೆ ಬಹುಮಾನ ವಿತರಿಸಿದ ಸನತ ಜಾರಕಿಹೊಳಿ 

ಕ್ರಿಕೆಟ್ ಪಂದ್ಯಾವಳಿ : ವಿಜೇತರಿಗೆ ಬಹುಮಾನ ವಿತರಿಸಿದ ಸನತ ಜಾರಕಿಹೊಳಿ

ಗೋಕಾಕ ಜು 9 : ಇಲ್ಲಿನ ಮಯೂರ ಸ್ಕೂಲ್ ಕ್ರಿಕೆಟ್ ಟೀಮ್ ವತಿಯಿಂದ ಆಯೋಜಿಸಿದ್ದ ದಿವಂಗತ ಸಂತೋಷ ಖಂಡ್ರಿ ಸ್ಮರಣಾರ್ಥ ಸ್ನೇಹ ಪೂರ್ವಕ್ರಿಕೆಟ್ ಪಂದ್ಯಾವಳಿಯ ವಿಜೇತರಿಗೆ ಲಕ್ಷ್ಮಿ ಎಜುಕೇಷನ್ ಟ್ರಸ್ಟ್ ನ ವ್ಯವಸ್ಥಾಪಕ ನಿರ್ದೇಶಕ ಸನತ ಜಾರಕಿಹೊಳಿ ಟ್ರೋಫಿ ವಿತರಿಸಿದರು.
ರಿಯಾಜ ಮುಲ್ಲಾ ಮತ್ತು ತಂಡದವರು ಪ್ರಥಮ ಬಹುಮಾನ ಪಡೆದುಕೊಂಡರೆ, ಸಂತೋಷ ಅನ್ವೇಕರ ಮತ್ತು ತಂಡದವರು ದ್ವಿತೀಯ ಬಹುಮಾನ ಪಡೆದುಕೊಂಡರು.
ಈ ಸಂದರ್ಭದಲ್ಲಿ ಮಾತನಾಡಿದ ಸನತ ಜಾರಕಿಹೊಳಿ ಕ್ರೀಡಾಪಟ್ಟುಗಳು ಕ್ರೀಡೆಗಳ ಜೊತೆಗೆ ತಮ್ಮನ್ನು ತಾವು ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡು ಸದೃಢ ಸಮಾಜ ನಿರ್ಮಿಸಲು ಮುಂದಾಗಬೇಕು. ಕ್ರೀಡೆಗಳಲ್ಲಿ ತೊಡಗುವುದರಿಂದ ಆಟಗಾರರಲ್ಲಿ ಸ್ವರ್ಧಾ ಸ್ಪೂರ್ತಿ ಹಾಗೂ ನಾಯಕತ್ವದ ಗುಣ ಬೆಳೆಯಲು ಸಾಧ್ಯ. ಸೋಲೆ ಗೆಲುವಿನ ಸೋಪಾನವಾಗಿದ್ದು, ಸ್ವರ್ಧಾಳುಗಳು ಗುರಿ ಸಾಧನೆಯತ್ತ ಮುನ್ನುಗ್ಗಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಗುರುಸಿದಪ್ಪ ಪೂಜೇರಿ, ಕಾರ್ಯದರ್ಶಿ ಸಾದಿಕ ಹಲ್ಯಾಳ, ಕ್ರೀಡಾಪಟುಗಳಾದ ರಿಯಾಜ ಮುಲ್ಲಾ, ಸಂತೋಷ ಅನ್ವೇಕರ, ರಿಯಾಜ ಬಾಗಿ, ವಸಂತ ಹೋಳೆಪ್ಪಗೋಳ, ರವಿ ಪಾಟೀಲ, ಪದ್ಮರಾಜ ದರಗಶೆಟ್ಟಿ, ವಿಜಯ ಹೆಗ್ಗನ್ನವರ, ಮುತ್ತು ಕಳ್ಳಿಮನಿ, ಗುರು ಮಜಲ್ಲಕೋಡಿ, ಪ್ರಕಾಶ ನೇಸರಗಿ, ಸುನೀಲ್ ಬೆಟಗೇರಿ, ಆನಂದ ಮುರಾರಿ, ಆನಂದ ಕಗದಾಳ, ವಿರೇಶ ಹಿರೇಮಠ ಉಪಸ್ಥಿತರಿದ್ದರು.

Related posts: