ಗೋಕಾಕ:ತಾಲೂಕಿನಾದ್ಯಂತ ಉತ್ತಮ ವರ್ಷಧಾರೆ : ವಾಹನ ಸವಾರರ ಪರದಾಟ
ಗೋಕಾಕ: ತಾಲೂಕಿನಾದ್ಯಂತ ಉತ್ತಮ ವರ್ಷಧಾರೆ : ವಾಹನ ಸವಾರರ ಪರದಾಟ
ಗೋಕಾಕ ಜು 19: ನಗರ ಸೇರಿದಂತೆ ತಾಲೂಕಿನಾದ್ಯಂತ ಮಂಗಳವಾರ ಮತು ಇಂದು ಉತ್ತಮ ಮಳೆ ಸುರಿದಿದೆ
ಮಂಗಳವಾರದಿಂದ ನಗರದಲ್ಲಿ ಬಿಟ್ಟು ಬಿಟ್ಟು ಸುರಿಯುತ್ತಿರುವ ಮಳೆಯಿಂದ ನಾಗರಿಕರು , ಶಾಲಾ , ಕಾಲೇಜು ವಿಧ್ಯಾರ್ಥಿಗಳು , ರೋಗಿಗಳು ದೂರದ ಊರಿನಿಂದ ಬರುವ ಪ್ರಯಾಣಿಕರು ಪರದಾಡುತ್ತಿರುವ ದೃಶ್ಯಗಳು ಸಾಮಾನ್ಯವಾಗಿದ್ದವು ನಗರದಲ್ಲಿ ರಸ್ತೆ ಅಗಲಿಕರಣ ಕಾಮಗಾರಿ ಪ್ರಾರಂಭ ಇರುವುದರಿಂದ ಮಳೆ ನೀರು ರಸ್ತೆಯನ್ನು ರಾಡಿಯನ್ನಾಗಿಸಿದೆ ಇದರಿಂದಾಗಿ ದ್ವಿಚಕ್ರವಾಹನ ಸವಾರರು ತೀವ್ರ ತೊಂದರೆ ಅನುಭವಿಸುವಂತಾಗಿದೆ .
ಬೆಳಿಗ್ಗೆಯಿಂದಲೇ ಆರಂಭವಾಗಿರುವ ಮಳೆಯಿಂದಾಗಿ ವ್ಯಾಪಾರ ವಹಿವಾಟುಗಳಲ್ಲಿ ಸ್ವಲ್ಪ ಪ್ರಮಾಣದ ಇಳಿಮುಖ ಕಂಡಿದೆ
ತಾಲೂಕಿನ ಅರಬಾಂವಿ, ದುರದುಂಡಿ, ದಂಡಾಪೂರ , ಕೋಣ್ಣೂರ, ಗೋಡಚನಮಲ್ಕಿ , ಶಿವಾಪೂರ , ಬಳೋಬಾಳ , ಹುಣಶ್ಯಾಳ , ಕುಲಗೋಡ ,ಯಾದವಾಡ ಸೇರಿದಂತೆ ಅನೇಕ ಕಡೆಗಳಲ್ಲಿ ಉತ್ತಮ ವರ್ಷಧಾರೆ ಆಗಿದೆ ಕೆಲವು ಕಡೆ ಮೋಡ ಕವಿದ ವಾತಾವರಣ ಇತ್ತು ಎಂದು ತಿಳಿದು ಬಂದಿದೆ