ಗೋಕಾಕ:ಮಾನವ ಸದೃಡವಾಗಿರುವಾಗಲೇ ಸಮಾಜ ಸೇವೆಯಲ್ಲಿ ತೊಡಗಬೇಕು : ಪ್ರಾದೇಶಿಕ ಆಯುಕ್ತ ಎಂ.ಜಿ.ಹಿರೇಮಠ

ಮಾನವ ಸದೃಡವಾಗಿರುವಾಗಲೇ ಸಮಾಜ ಸೇವೆಯಲ್ಲಿ ತೊಡಗಬೇಕು : ಪ್ರಾದೇಶಿಕ ಆಯುಕ್ತ ಎಂ.ಜಿ.ಹಿರೇಮಠ
ಗೋಕಾಕ ಎ 2 : ಮಾನವ ಸದೃಡವಾಗಿರುವಾಗಲೇ ಸಮಾಜ ಸೇವೆಯಲ್ಲಿ ತೊಡಗಬೇಕು. ಸಮಾಜಕ್ಕೆ ಪ್ರತಿಯೊಬ್ಬರೂ ಏನಾದರೂ ಒಳ್ಳೆಯದನ್ನು ನೀಡಿದಾಗ ಮಾತ್ರ ನಮ್ಮ ಬದುಕು ಸಾರ್ಥಕವಾಗುತ್ತದೆ ಎಂದು ಬೆಳಗಾವಿ ವಿಭಾಗದ ಪ್ರಾದೇಶಿಕ ಆಯುಕ್ತ ಮಹಾಂತೇಶ ಹಿರೇಮಠ ಹೇಳಿದರು.
ರವಿವಾರದಂದು ನಗರದಲ್ಲಿ ನಡೆದ ಬೆಳಗಾವಿ ಜಿಲ್ಲಾ ಎರಡು ವಲಯಗಳ ಎಂಟು ಲಾಯನ್ಸ ಕ್ಲಬ್ ಗಳ ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡುತ್ತಿದ್ದರು.
ಜಗತ್ತಿನಲ್ಲಿ ದಯೆಯೇ ಅತ್ಯಂತ ದೊಡ್ಡ ಧರ್ಮವಾಗಿದೆ. ಲಾಯನ್ಸ ಕ್ಲಬ್ ಗಳ ನಿಸ್ವಾರ್ಥ ಸೇವೆಯನ್ನು ಜನರು ಬಹುವಾಗಿ ಮೆಚ್ಚಿಕೊಂಡಿದ್ದಾರೆ.ದೇಶಾದ್ಯಂತ ಲಕ್ಷಾಂತರ ಸದಸ್ಯತ್ವ ಹೊಂದಿರುವ ಲಾಯನ್ಸ್ ಕ್ಲಬ್ ನಿಸ್ವಾರ್ಥದಿಂದ ವಿವಿಧ ಸಾಮಾಜಿಕ ಸೇವೆ ಸಲ್ಲಿಸಲು ಪ್ರೇರಣೆ ನೀಡುವಂತಹ ಅಂತಾರಾಷ್ಟ್ರೀಯ ಸಂಸ್ಥೆಯಾಗಿದೆ. ನಮ್ಮ ವೃತ್ತಿ ಜೀವನ ಬದುಕಿನ ಜೊತೆಗೆ ಸಾಮಾಜಿಕ, ಮಾನವೀಯ ಸ್ಪಂದನೆ ನೀಡಲು ಲಾಯನ್ಸ್ ನಂತರ ವಿವಿಧ ಸಂಘ ಸಂಸ್ಥೆಗಳು ಕ್ರಿಯಾಶೀಲವಾಗಿ ತಮ್ಮ ಪಾತ್ರ ನಿರ್ವಹಿಸುತ್ತಿವೆ. ಇದರಿಂದಾಗಿ ದೇಶದ ವಿಶ್ವದ ವಿವಿಧೆಡೆ ಸೇವಾ ಚಟುವಟಿಕೆ ನಿರಂತರವಾಗಿ ಜರುಗುತ್ತಿರುತ್ತವೆ. ಈ ಹಿನ್ನೆಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಲಾಯನ್ಸ್‌ನ ಸದಸ್ಯತ್ವ ಪಡೆದು ಸಾರ್ವಜನಿಕರು ಸೇವಾ ಚಟುವಟಿಕೆಗಳಲ್ಲಿ ಹೆಚ್ಚು ಹೆಚ್ಚು ತೊಡಗಿಕೊಳ್ಳಲು ಮುಂದೆ ಬರಬೇಕೆಂದು ಮನವಿ ಮಾಡಿದರು.
ಮುಖ್ಯ ಭಾಷಣಕಾರರಾಗಿ ಮಾತನಾಡಿದ ಡಾ. ಡಿ.ಎನ್. ಮಿಸಾಳೆ ಸಾಮಾಜಿಕ ಕಾರ್ಯಗಳ ಮಹತ್ವ ಮತ್ತು ಅವುಗಳಲ್ಲಿ ತೊಡಗಿಕೊಳ್ಳುವ ಸರಳ ವಿಧಾನಗಳ ಕುರಿತು ತಿಳಿಸಿಕೊಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿ.ಎಸ್. ಸಿದ್ದಾಪೂರಮಠ ವಹಿಸಿಕೊಂಡಿದ್ದರು.
ಈ ಸಂದರ್ಭದಲ್ಲಿ ಸತೀಶ ಬಾಳೆಕುಂದ್ರಿ, ಶಶಿಕಾಂತ ಜೋಶಿ, ಡಾ. ಅಶೋಕ ಮುರಗೋಡ, ಮಹೇಂದ್ರ ಪೋರವಾಲ, ವಿಶ್ವನಾಥ ಬೆಲ್ಲದ, ಎಸ್. ಎಂ. ಹಂಜಿ, ಪಿ.ಸಿ.ಬಾಫನಾ, ವಿಜಯಕುಮಾರ್ ಬಾಫನಾ, ಅಶ್ವಿನ್ ರಾಠೋಡ, ಜಿ.ಡಿ.ಹಿರೇಮಠ, ಅಶೋಕ್ ಪಾಟೀಲ, ಅಶೋಕ ಲಗಮಪ್ಪಗೋಳ, ವಿಜಯಲಕ್ಷ್ಮಿ ಸಿದ್ದಾಪೂರಮಠ, ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು. ಶಿಕ್ಷಕ ಎಸ್. ಕೆ.ಮಠದ ಕಾರ್ಯಕ್ರಮ ನಿರೂಪಿಸಿದರು.

