RNI NO. KARKAN/2006/27779|Wednesday, October 15, 2025
You are here: Home » breaking news » ಗೋಕಾಕ:ವಿಶ್ವಾಸ ಕಿರಣ ಕಾರ್ಯಕ್ರಮದ ಸದುಪಯೋಗ ಪಡೆದುಕೋಳ್ಳಿ : ಉಪಪ್ರಾಚಾರ್ಯ ಪಿ.ಎಚ್.ಕೌಜಲಗಿ

ಗೋಕಾಕ:ವಿಶ್ವಾಸ ಕಿರಣ ಕಾರ್ಯಕ್ರಮದ ಸದುಪಯೋಗ ಪಡೆದುಕೋಳ್ಳಿ : ಉಪಪ್ರಾಚಾರ್ಯ ಪಿ.ಎಚ್.ಕೌಜಲಗಿ 

ವಿಶ್ವಾಸ ಕಿರಣ ಕಾರ್ಯಕ್ರಮದ ಸದುಪಯೋಗ ಪಡೆದುಕೋಳ್ಳಿ : ಉಪಪ್ರಾಚಾರ್ಯ ಪಿ.ಎಚ್.ಕೌಜಲಗಿ

ಗೋಕಾಕ ಅ 12: ಶೈಕ್ಷಣಿಕ ಬೆಳವಣಿಗೆಗೆ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದು ಅದನ್ನು ವಿದ್ಯಾರ್ಥಿಗಳು ಮತ್ತು ಪಾಲಕರು ಸದುಪಯೋಗ ಪಡಿಸಿಕೊಳ್ಳಬೇಕೆಂದು ಬಿಇಓ ಜಿ.ಬಿ.ಬಳಗಾರ ಹೇಳಿದರು.

ಅವರು ಬುಧವಾರದಂದು ನಗರದ ಸರ್ಕಾರಿ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಕ್ಷೇತ್ರಶಿಕ್ಷಣಾಧಿಕಾರಿಗಳ ಕಾರ್ಯಾಲಯ ಹಾಗೂ ಸರ್ಕಾರಿ ಪದವಿ ಪೂರ್ವ ಮಹಾವಿದ್ಯಾಲಯದ ಪೌಢಶಾಲಾ ವಿಭಾಗದ ಆಶ್ರಯದಲ್ಲಿ 9 ಮತ್ತು 10ನೇ ತರಗತಿಯ ಎಸ್‍ಸಿ,ಎಸ್‍ಟಿ ಮತ್ತು ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳಿಗೆ ದಸರಾ ರಜೆಯಲ್ಲಿ ಹಮ್ಮಿಕೊಂಡ ಸರ್ಕಾರದ ವಿಶ್ವಾಸ ಕಿರಣ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ರಾಜ್ಯದಲ್ಲಿಯೇ ಗೋಕಾಕ ವಲಯವು ಅತ್ಯುತ್ತಮ ಸಾಧನೆಗೈದಿದೆ. ಮುಂಬರುವ ಪರೀಕ್ಷೆಯಲ್ಲಿಯೂ ಕೂಡಾ ಉತ್ತಮ ಸಾಧನೆ ಮಾಡಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಉಪಪ್ರಾಚಾರ್ಯ ಪಿ.ಎಚ್.ಕೌಜಲಗಿ ಮಾತನಾಡಿ ಶ್ರೀಮಂತ ಜನರ ಮಕ್ಕಳು ರಜೆಯಲ್ಲಿ ಖಾಸಗಿ ವ್ಯಾಸಂಗಕ್ಕೆ ಹೋಗುತ್ತಾರೆ. ಬಡ ಮಕ್ಕಳು ರಜೆಯಲ್ಲಿ ಕೆಲಸಕ್ಕೆ ಮತ್ತು ಬೇರೆ ಕಡೆಗೆ ರಜೆಯನ್ನು ಕಾಲಹರಣ ಮಾಡುತ್ತಾರೆ ಆದ್ದರಿಂದ ಸರ್ಕಾರ ಈ ವಿಶ್ವಾಸ ಕಿರಣ ಕಾರ್ಯಕ್ರಮ ಜಾರಿಗೆ ತಂದಿದ್ದು ದಿ.11ರಿಂದ 25ರವರೆಗೆ ಈ ಯೋಜನೆ ಜಾರಿಗೆ ಇದ್ದು ಇದರಲ್ಲಿ ವಿಜ್ಞಾನ, ಗಣಿತ, ಇಂಗ್ಲೀಷ ಭಾಷಾವಾರು ಸಂಪನ್ಮೂಲ ಶಿಕ್ಷಕರಿಂದ ಅಧ್ಯಯನವನ್ನು ನಡೆಯಲಿದ್ದು ವಿದ್ಯಾರ್ಥಿಗಳು ತಪ್ಪದೇ ಈ ಯೋಜನೆಯನ್ನು ಸದ್ಬಳಕೆ ಮಾಡಿಕೊಂಡು ವಿದ್ಯಾರ್ಥಿ ಜೀವನವನ್ನು ಉಜ್ಚಲಗೊಳಿಸಬೇಕೆಂದು ಕರೆ ನೀಡಿದರು.

ವೇದಿಕೆ ಮೇಲೆ ಎಸ್‍ಡಿಎಂಸಿ ಅಧ್ಯಕ್ಷರು ಹಾಗೂ ನಗರಸಭೆ ಸದಸ್ಯ ಸಿದ್ದಪ್ಪ ಹುಚ್ಚರಾಮಗೋಳ, ನಗರಸಭೆ ಸದಸ್ಯ ಚಂದ್ರಕಾಂತ ಈಳಿಗೇರ, ಬಿಆರ್‍ಸಿ ಸಂಪನ್ಮೂಲ ವ್ಯಕ್ತಿ ಶ್ರೀಮತಿ ದೇಶಪಾಂಡೆ ಇದ್ದರು.

Related posts: