RNI NO. KARKAN/2006/27779|Tuesday, November 4, 2025
You are here: Home » breaking news » ಗೋಕಾಕ:ರೈತನೇ ಈ ಜಗದ ಶ್ರೇಷ್ಠ ಜೀವಿಯಾಗಿದ್ದು, , ಸಕಲರಿಗೂ ಅನ್ನ ನೀಡುವ ಕರ್ಮಯೋಗಿಯಾಗಿದ್ದಾನೆ: ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು

ಗೋಕಾಕ:ರೈತನೇ ಈ ಜಗದ ಶ್ರೇಷ್ಠ ಜೀವಿಯಾಗಿದ್ದು, , ಸಕಲರಿಗೂ ಅನ್ನ ನೀಡುವ ಕರ್ಮಯೋಗಿಯಾಗಿದ್ದಾನೆ: ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು 

ರೈತನೇ ಈ ಜಗದ ಶ್ರೇಷ್ಠ ಜೀವಿಯಾಗಿದ್ದು, , ಸಕಲರಿಗೂ ಅನ್ನ ನೀಡುವ  ಕರ್ಮಯೋಗಿಯಾಗಿದ್ದಾನೆ: ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು

ಗೋಕಾಕ ಜ 8 :  ರೈತನೇ ಈ ಜಗದ ಶ್ರೇಷ್ಠ ಜೀವಿಯಾಗಿದ್ದು, , ಸಕಲರಿಗೂ ಅನ್ನ ನೀಡುವ  ಕರ್ಮಯೋಗಿಯಾಗಿದ್ದಾನೆ ಎಂದು ನಂದಿ ಇಂಗಳಗಾಂವಿಯ  ಶ್ರೀ ಮ.ನಿ.ಪ್ರ. ಸಿದ್ದಲಿಂಗ ಮಹಾಸ್ವಾಮಿಗಳು ಹೇಳಿದರು.
ಶುಕ್ರವಾರದಂದು ಸಾಯಂಕಾಲ ನಗರದ  ಶೂನ್ಯ ಸಂಪಾದನ ಮಠದ ಸಭಾಂಗಣದಲ್ಲಿ  ಶ್ರೀ ಬಸವೇಶ್ವರ ಧರ್ಮ ಪ್ರಚಾರಕ ಸಂಸ್ಥೆ, ಲಿಂಗಾಯತ ಮಹಿಳಾ ವೇದಿಕೆ ಹಾಗೂ ವಚನ ಸಾಹಿತ್ಯ ಚಿಂತನ ಮಂಥನ ವೇದಿಕೆ ಇವುಗಳ ಸಂಯುಕ್ತ ಆಶ್ರಯದಲ್ಲಿ ಜರುಗಿದ 161 ನೇ ಮಾಸಿಕ ಶಿವಾನುಭವ ಗೋಷ್ಠಿಯಲ್ಲಿ ಪಾಲ್ಗೊಂಡು   ಮಾತನಾಡಿದ ಅವರು  ವ್ಯಕ್ತಿ ಭವಬಂಧನದಿಂದ ಮುಕ್ತನಾಗಬೇಕಾದರೆ,ಶರೀರವನ್ನು ತೋಟವನ್ನಾಗಿ ಮಾಡಿಕೊಂಡು ಆಧ್ಯಾತ್ಮಿಕ ಸಾಧನೆ ಮಾಡಿದರೆ ಒಳ್ಳೆಯ ಸಮಾಜ ನಿರ್ಮಿಸಬಹುದು ಎಂದು ಹೇಳಿದರು.
ಕಾರ್ಯಕ್ರಮದ ಸಾನಿಧ್ಯವನ್ನು ವಹಿಸಿ ಮಾತನಾಡಿದ ಮುರುಘರಾಜೇಂದ್ರ ಮಹಾಸ್ವಾಮಿಗಳು ಮನುಷ್ಯ ಯಾವುದೇ ಹುದ್ದೆಯಲ್ಲಿದ್ದರೂ ಅದಕ್ಕೆ ಅಂಟಿಕೊಳ್ಳದೇ ಸೇವಾ ಮನೋಭಾವದಿಂದ ಕಾರ್ಯ ನಿರ್ವಹಿಸಿದಾಗ ಮಾತ್ರ ಬದುಕು ಸಾರ್ಥಕವಾಗುತ್ತದೆ ಆ ನಿಟ್ಟಿನಲ್ಲಿ ಸಮಾಜವನ್ನು ಸಂಘಟಿಸುತ್ತಿರುವ ಸಂಘ,ಸಂಸ್ಥೆಗಳು ಸೇವಾ ಮನೋಭಾವದಿಂದ ಕಾರ್ಯ ನಿರ್ವಹಿಸಬೇಕು ಎಂದರು.
ಇದೇ ಸಂದರ್ಭದಲ್ಲಿ ಲಿಂಗಾಯತ ಮಹಿಳಾ ವೇದಿಕೆಯ ನೂತನ ಅಧ್ಯಕ್ಷಯನ್ನಾಗಿ  ಶ್ರೀಮತಿ ವಿಜಯಲಕ್ಷ್ಮೀ ಹಿರೇಮಠ ಅವರನ್ನು ಮತ್ತು ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು ಹಾಗೂ   ಮಾತ್ರಭೂಮಿ ಫೌಂಡೇಷನ್‌ ‘ ನ್ನು ಉದ್ಘಾಟಿಸಲಾಯಿತು.
ವೇದಿಕೆಯಲ್ಲಿ ಬಟಕುರ್ಕಿತ  ಬಸವಲಿಂಗ ಮಹಾಸ್ವಾಮೀಜಿ,  ಬಸನಗೌಡಾ ಪಾಟೀಲ, ಡಾ. ಸಿ.ಕೆ. ನಾವಲಗಿ, ಚಂದನ ಮಗದುಮ್, ಶ್ರೀಮತಿ ಸುಮಿತ್ರಾ ಕಾಳಪ್ಪಾ ಗುರಾಣಿ, ಶ್ರೀಮತಿ ಸುಗಂಧಾ ಡಂಬಳ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಎಸ್. ಕೆ. ಮಠದ   ನಿರೂಪಿಸಿದರು, ಆರ್. ಎಲ್. ಮಿರ್ಜಿ ವಂದಿಸಿದರು.

Related posts: