RNI NO. KARKAN/2006/27779|Sunday, September 24, 2023
You are here: Home » breaking news » ಗೋಕಾಕ:ಬೊಮ್ಮಾಯಿ ನೇತೃತ್ವದ ಡಬಲ್ ಎಂಜಿನ್ ಸರಕಾರ ರಾಜ್ಯದ ಅಭಿವೃದ್ಧಿಗೆ ಶ್ರಮಿಸುತ್ತಿದೆ : ಭರಮನ್ನವರ

ಗೋಕಾಕ:ಬೊಮ್ಮಾಯಿ ನೇತೃತ್ವದ ಡಬಲ್ ಎಂಜಿನ್ ಸರಕಾರ ರಾಜ್ಯದ ಅಭಿವೃದ್ಧಿಗೆ ಶ್ರಮಿಸುತ್ತಿದೆ : ಭರಮನ್ನವರ 

ಬೊಮ್ಮಾಯಿ ನೇತೃತ್ವದ ಡಬಲ್ ಎಂಜಿನ್ ಸರಕಾರ ರಾಜ್ಯದ ಅಭಿವೃದ್ಧಿಗೆ ಶ್ರಮಿಸುತ್ತಿದೆ : ಭರಮನ್ನವರ

ಗೋಕಾಕ ಜ 2 : ಪ್ರಧಾನಿ ನರೇಂದ್ರ ಮೋದಿ ನೇತ್ರತ್ವದ ಕೇಂದ್ರ ಸರಕಾರ ಹಾಗೂ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಡಬಲ್ ಎಂಜಿನ್ ಸರಕಾರ ರಾಜ್ಯದ ಅಭಿವೃದ್ಧಿಗೆ ಶ್ರಮಿಸುತ್ತಿದ್ದು ಬರುವ ಚುನಾವಣೆಯಲ್ಲಿ ಮತ್ತೊಮ್ಮೆ ಬಿಜೆಪಿ ಸರಕಾರ ಅಧಿಕಾರಕ್ಕೆ ಬರುವದಾಗಿ ಬಿಜೆಪಿ ನಗರ ಮಂಡಲ ಅಧ್ಯಕ್ಷ ಭೀಮಶಿ ಭರಮನ್ನವರ ವಿಶ್ವಾಸ ವ್ಯಕ್ತಪಡಿಸಿದರು.
ಅವರು, ಸೋಮವಾರದಂದು ಸಂಜೆ ನಗರದ ವಿವೇಕಾನಂದ ನಗರ 3ನೇ ಕ್ರಾಸ್‍ನ ಎಕ್ಕೇರಿಮಠ ಅವರ ಮನೆ ಮೇಲೆ “ಬೂತ್ ವಿಜಯ ಅಭಿಯಾನ”ಕ್ಕೆ ಬಿಜೆಪಿ ಪಕ್ಷದ ಧ್ವಜ ಕಟ್ಟುವ ಮೂಲಕ ಚಾಲನೆ ನೀಡಿ ಮಾತನಾಡಿದರು.
ಡಬಲ್ ಎಂಜಿನ್ ಸರಕಾರ ಶೋಷಿತರ, ಬಡವರ, ದೀನ ದಲಿತರ, ರೈತರ ಹಿಂದುಳಿದ ವರ್ಗಗಳ ಹಾಗೂ ಯುವಜನತೆಯ ಅಭ್ಯುದ್ಯಯಕ್ಕಾಗಿ ಅನೇಕ ಯೋಜನೆಳನ್ನು ರಾಜ್ಯ ಸರಕಾರ ಜಾರಿಗೊಳಿಸಿದ್ದು, ರಾಜ್ಯಾಧ್ಯಕ್ಷ ನಳಿನಕುಮಾರ ಕಟೀಲು ನೇತ್ರತ್ವದಲ್ಲಿ ಪಕ್ಷದ ಸಂಘಟನೆ ಬಲಿಷ್ಠಗೊಳಿಸಲಾಗಿದ್ದು ಬರುವ ಚುನಾವಣೆಯಲ್ಲಿ ಪ್ರತಿ ಬೂತಗಳಲ್ಲಿ ಮತ್ತೊಮ್ಮೆ ಬಿಜೆಪಿ ಧ್ವಜ ಹಾರಲಿದೆ ಎಂದರು.
ಬೂತ್ ನಂ121, 122, 123 ಹಾಗೂ ಮಹಾಲಿಂಗೇಶ್ವರ ನಗರದ ಬೂತ ನಂ163, 164 ಸೇರಿದಂರೆ ನಗರ ವಿವಿಧ ಬೂತ್‍ಗಳಲ್ಲಿ “ಬೂತ್ ವಿಜಯ ಅಭಿಯಾನ” ಹಮ್ಮಿಕೊಳ್ಳಲಾಯಿತು.
ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷ ಜಯಾನಂದ ಹುಣಚ್ಯಾಳ, ಶಾಸಕರ ಆಪ್ತ ಸಹಾಯಕ ಸುರೇಶ ಸನದಿ, ಸ್ಥಾಯಿ ಸಮಿತಿ ಚೇರಮನ ಸಿದ್ಧಪ್ಪ ಹುಚ್ಚರಾಯಪ್ಪಗೋಳ, ಯುವ ಮೋರ್ಚಾ ಅಧ್ಯಕ್ಷ ಮಂಜುನಾಥ ಪ್ರಭುನಟ್ಟಿ, ಪ್ರಧಾನ ಕಾರ್ಯದರ್ಶಿ ವಿರೇಂದ್ರ ಎಕ್ಕೇರಿಮಠ, ನಗರಸಭೆ ಸದಸ್ಯರಾದ ಹರೀಶ ಬೂದಿಹಾಳ, ಯೂಸುಫ ಅಂಕಲಗಿ, ದುರ್ಗಪ್ಪ ಶಾಸ್ತ್ರಿಗಲ್ಲರ, ಜ್ಯೋತಿಭಾ ಸುಭಂಜಿ, ಪ್ರಕಾಶ ಮುರಾರಿ, ಶ್ರೀಶೈಲ ಯಕ್ಕುಂಡಿ, ಸಂತೋಷ ಮಂತ್ರನ್ನವರ, ಬಸವರಾಜ ಮಾಳಗಿ, ಹನಮಂತ ಕಾಳಮ್ಮನಗುಡಿ, ಬಾಬು ಮುಳಗುಂದ, ಕಾಶೀಮ ಕಲಿಪ, ಶ್ರೀಶೈಲ ಪೂಜೇರಿ ಸೇರಿದಂತೆ ಬಿಜೆಪಿ ಪದಾಧಿಕಾರಿಗಳು, ಕಾರ್ಯಕರ್ತರು ಇದ್ದರು.

Related posts: