RNI NO. KARKAN/2006/27779|Tuesday, February 17, 2026
You are here: Home » breaking news » ಗೋಕಾಕ:ಕಾರು ಟಿಪ್ಪರ ಡಿಕ್ಕಿ ನಗರದ ಇಬ್ಬರು ಯುವಕರು ಸ್ಥಳದಲ್ಲೇ ಸಾವು, ಒಬ್ಬನಿಗೆ ಗಂಭೀರ ಗಾಯ : ಸಿಂದಗಿ ಬಳಿ ಘಟನೆ

ಗೋಕಾಕ:ಕಾರು ಟಿಪ್ಪರ ಡಿಕ್ಕಿ ನಗರದ ಇಬ್ಬರು ಯುವಕರು ಸ್ಥಳದಲ್ಲೇ ಸಾವು, ಒಬ್ಬನಿಗೆ ಗಂಭೀರ ಗಾಯ : ಸಿಂದಗಿ ಬಳಿ ಘಟನೆ 

ಕಾರು ಟಿಪ್ಪರ ಡಿಕ್ಕಿ ನಗರದ ಇಬ್ಬರು ಯುವಕರು ಸ್ಥಳದಲ್ಲೇ ಸಾವು, ಒಬ್ಬನಿಗೆ ಗಂಭೀರ ಗಾಯ : ಸಿಂದಗಿ ಬಳಿ ಘಟನೆ

ಗೋಕಾಕ ಡಿ 15 : ಕಾರು ಟಿಪ್ಪರ ಮುಖಾಮುಖಿ ಡಿಕ್ಕಿಯಾದ ಪರಿಣಾಮ ನಗರದ ಇಬ್ಬರು ಯುವಕರು ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ಕಲಬುರ್ಗಿ ಜಿಲ್ಲೆಯ ಸಿಂದಗಿ ಹೆದ್ದಾರಿಯಲ್ಲಿ ಬೆಳಗಿನ ಜಾವ 2:30 ಸುಮಾರಿಗೆ ಜರುಗಿದೆ.

ಥೈಲ್ಯಾಂಡ್ ಪ್ರವಾಸ ಮುಗಿಸಿ ಹೈದರಾಬಾದ್ ನಿಂದ ಗೋಕಾಕ ನಗರಕ್ಕೆ ಬರುತ್ತಿರುವಾಗ ಈ ದುರ್ಘಟನೆ ಸಂಭವಿಸಿದ್ದು, ಇಲ್ಲಿನ ವಿವೇಕಾನಂದ ನಗರದ ನಿವಾಸಿ ನಾಗರಾಜ ಯದವನ್ನವರ (33), ಮತ್ತು ವಿದ್ಯಾ ನಗರದ ಸಂಜು ಹಿಟ್ಟಲಗೌಡರ (25) ಎಂಬುವವರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಇನ್ನೋರ್ವ ಯುವಕ ಆಸೀಫ ಎಂಬುವವರು ಗಂಭೀರವಾಗಿ ಗಾಯಗೊಂಡಿದ್ದು ಸಿಂದಗಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

Related posts: