RNI NO. KARKAN/2006/27779|Tuesday, January 27, 2026
You are here: Home » breaking news » ಗೋಕಾಕ:ಎಸ್ಎಸ್ಎಲ್ ಎಂ.ಡಿ ಸಿದ್ಧಾರ್ಥ ವಾಡೆನ್ನವರ ಮಗನ ಅಪರಣಕ್ಕೆ ವಿಫಲಯತ್ನ : ಪ್ರಕರಣ ದಾಖಲು

ಗೋಕಾಕ:ಎಸ್ಎಸ್ಎಲ್ ಎಂ.ಡಿ ಸಿದ್ಧಾರ್ಥ ವಾಡೆನ್ನವರ ಮಗನ ಅಪರಣಕ್ಕೆ ವಿಫಲಯತ್ನ : ಪ್ರಕರಣ ದಾಖಲು 

ಎಸ್ಎಸ್ಎಲ್ ಎಂ.ಡಿ ಸಿದ್ಧಾರ್ಥ ವಾಡೆನ್ನವರ ಮಗನ ಅಪರಣಕ್ಕೆ ವಿಫಲಯತ್ನ : ಪ್ರಕರಣ ದಾಖಲು

ಗೋಕಾಕ ಅ 10: ಗೋಕಾಕ ಫಾಲ್ಸ್ ನ  ಫೋರ್ಬ್ಸ್ ಅಕಾಡೆಮಿ ಶಾಲೆಯಲ್ಲಿ ಓದುತ್ತಿರುವ 2ನೇ ತರಗತಿಯ 7 ವರ್ಷದ ಬಾಲಕನ್ನು   ಶಾಲೆ ವೇಳೆ ಮುಗಿದ ನಂತರ  ಮಂಗಳವಾರ ಮಧ್ಯಾಹ್ನ ಕಾರಿನಲ್ಲಿ ಅಪಹರಿಸಲು ಮುಸುಕುಧಾರಿ ದುಷ್ಕರ್ಮಿಗಳು ಯತ್ನಿಸಿದ್ದು, ಕಾರು ಚಾಲಕನ ಸಮಯ ಪ್ರಜ್ಞೆಯಿಂದ ವಿದ್ಯಾರ್ಥಿಯ ಅಪಹರಣ ಪ್ರಯತ್ನ ವಿಫಲಗೊಂಡಿದೆ.

ಸತೀಶ ಶುಗರ್ಸ್ ಲಿಮಿಟೆಡ್ ಮತ್ತು ಬೆಳಗಾವಿ ಶುಗರ್ಸ್ ಪ್ರೈವೆಟ್ ಲಿಮಿಟೆಡ್ ಕಾರ್ಖಾನೆಗಳ ಆಡಳಿತ ಮಂಡಳಿ ವ್ಯವಸ್ಥಾಪಕ ನಿರ್ದೇಶಕ ಸಿದ್ಧಾರ್ಥ ವಾಡೆನ್ನವರ ಅವರ ಮಗ ತುಷಾರ ವಾಡೆನ್ನವರ (7) ಶಾಲೆ ಮುಗಿಸಿ ಕಾರಿನಲ್ಲಿ ಮನೆಗೆ ಹೊರಟ ವೇಳೆ ಈ ಅಪಹರಣ ಯತ್ನ ನಡೆದಿದೆ.

ಶಾಲೆ ಮುಗಿಸಿ ಕಾರಿನಲ್ಲಿ ಮನೆಗೆ ತೆರಳಲು ಬಾಲಕ ತುಷಾರ ಕಾರಿನಲ್ಲಿ ಕುಳಿತುಕೊಂಡಿದ್ದ. ಶಾಲೆಯ ಗೇಟಿನ ಬಳಿಯ ಬೇಲಿಯಿಂದ ಜಿಗಿದು ಬಂದ ಕಪ್ಪುಬಟ್ಟೆ ಮುಖಕ್ಕೆ ಧರಿಸಿದ್ದ ಇಬ್ಬರು ಮುಸುಕುಧಾರಿ ದುಷ್ಕರ್ಮಿಗಳು ಕಾರಿನ ಗ್ಲಾಸುಗಳ ಮೇಲೆ ದ್ರವ ಸಿಂಪಡಿಸಿ ತಮ್ಮ ಗುರುತು ಮರೆಮಾಚಿ ಕಾರಿನೊಳಕ್ಕೆ ನುಗ್ಗಲು ಯತ್ನಿಸಿದ್ದಾರೆ. ಕಾರಿನ ಚಾಲಕ ಕಲ್ಲಪ್ಪ ತಿಗಡಿ ತಕ್ಷಣ ಕಾರಿನ ಕೀಲಿ ಕೈಗೆ ತೆಗೆದುಕೊಂಡು ಕೆಳಗೆ ಇಳಿದಿದ್ದಾರೆ. ಕಲ್ಲು ತೆಗೆದುಕೊಂಡು ದುಷ್ಕರ್ಮಿಗಳ ಯತ್ನಕ್ಕೆ ಭಾರಿ ಪ್ರತಿರೋಧ ತೋರಿದ್ದಾರೆ. ದುಷ್ಕರ್ಮಿಗಳನ್ನು ಹಿಮ್ಮೆಟ್ಟಿಸಲು ಕಲ್ಲುಗಳನ್ನು ಕೈಗೆ ತೆಗೆದುಕೊಂಡು ನಿಲ್ಲುತ್ತಲೇ ಇಬ್ಬರು ಆಗುಂತಕರು ಅಲ್ಲಿಂದ ಪರಾರಿಯಾಗಿ ಬೇಲಿ ಜಿಗಿದು ಮರೆಯಾಗಿದ್ದಾರೆ.
ಗೋಕಾಕ ಫಾಲ್ಸ್ ನ ಫೋರ್ಬ್ಸ್ ಅಕಾಡೆಮಿ ಶಾಲೆಯಲ್ಲಿ ಪ್ರತಿಷ್ಠಿತರ ಮಕ್ಕಳು ಓದುತ್ತಿದ್ದು, ಈ ಘಟನೆಯಿಂದ ಪಾಲಕರು, ಪೋಷಕರಲ್ಲಿ ಆತಂಕದ ವಾತಾವರಣ ಮೂಡಿದೆ.

ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನಾ ಸ್ಥಳಕ್ಕೆ ಸಿಪಿಐ ಮೋಹನ ತಾನಪ್ಪಗೋಳ, ಪಿಎಸ್ ಐ ಆರ್.ಎಸ್.ಜಾಣರ ಭೇಟಿ ನೀಡಿ ಪರಿಶೀಲಿಸಿದರು. ದುಷ್ಕರ್ಮಿಗಳ ಪತ್ತೆಗೆ ಪೊಲೀಸರು ಜಾಲ ಬೀಸಿದ್ದಾರೆ

Related posts: