RNI NO. KARKAN/2006/27779|Tuesday, April 16, 2024
You are here: Home » breaking news » ಗೋಕಾಕ:ರೈತರು ಕಬ್ಬು ಬೆಳೆಯ ಜೊತೆಗೆ ಮಿಶ್ರ ಬೆಳೆಗಳನ್ನು ಬೆಳೆದು ಸ್ವಾವಲಂಬಿ ಜೀವನವನ್ನು ನಡೆಸಬೇಕು : ಸರ್ವೋತ್ತಮ ಜಾರಕಿಹೊಳಿ

ಗೋಕಾಕ:ರೈತರು ಕಬ್ಬು ಬೆಳೆಯ ಜೊತೆಗೆ ಮಿಶ್ರ ಬೆಳೆಗಳನ್ನು ಬೆಳೆದು ಸ್ವಾವಲಂಬಿ ಜೀವನವನ್ನು ನಡೆಸಬೇಕು : ಸರ್ವೋತ್ತಮ ಜಾರಕಿಹೊಳಿ 

ರೈತರು ಕಬ್ಬು ಬೆಳೆಯ ಜೊತೆಗೆ ಮಿಶ್ರ ಬೆಳೆಗಳನ್ನು ಬೆಳೆದು ಸ್ವಾವಲಂಬಿ ಜೀವನವನ್ನು ನಡೆಸಬೇಕು : ಸರ್ವೋತ್ತಮ ಜಾರಕಿಹೊಳಿ

ಗೋಕಾಕ ನ 26 : ರೈತರು ಕಬ್ಬು ಬೆಳೆಯ ಜೊತೆಗೆ ಮಿಶ್ರ ಬೆಳೆಗಳನ್ನು ಬೆಳೆದು ಸ್ವಾವಲಂಬಿ ಜೀವನವನ್ನು ನಡೆಸಬೇಕು ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಗೌರವಾಧ್ಯಕ್ಷ, ಯುವ ನಾಯಕ ಸರ್ವೋತ್ತಮ ಜಾರಕಿಹೊಳಿ ಹೇಳಿದರು.

ಶನಿವಾರದಂದು ನಗರದ ಎನ್.ಇ.ಎಸ್. ಪ್ರೌಢಶಾಲಾ  ಆವರಣದಲ್ಲಿ ಕೃಷಿಮಿತ್ರ ಗ್ರಾಮೀಣ ಅಭಿವೃದ್ಧಿ ಸಂಸ್ಥೆ,  ನಬಾರ್ಡ್ ಹಾಗೂ ಕೃಷಿ ಇಲಾಖೆಯ ಸಹಯೋಗದಲ್ಲಿ   ಹಮ್ಮಿಕೊಂಡ ರೈತ ಉತ್ಪಾದಕದ ಸಂಸ್ಥೆಗಳ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.  ಇಂದಿನ ತಾಂತ್ರಿಕ ಯುಗದಲ್ಲಿ ರೈತರು ಕೂಡಾ ವೈಜ್ಞಾನಿಕವಾಗಿ ಅಭಿವೃದ್ಧಿ ಹೊಂದಿ ಕಾರ್ಪೊರೇಟ್ ಮಟ್ಟಕ್ಕೆ ಬೆಳೆಯುತ್ತಿರುವದು  ಸಂತೋಷದ ಸಂಗತಿಯಾಗಿದ್ದು, ರೈತ ಸಮೂಹ  ಸಹ ಈ ದೇಶದಲ್ಲಿ ತಲೆ ಎತ್ತಿ ನಡೆದಾಡುವ ಮಟ್ಟಕ್ಕೆ ಬೆಳೆದು ನಿಂತಿದೆ. ಕಳೆದ ಹಲವು ದಶಕಗಳಿಂದ ಜಾರಕಿಹೊಳಿ ಕುಟುಂಬವು  ರೈತರ ಅಭಿವೃದ್ಧಿಗಾಗಿ ಹಗಲಿರುಳು ಶ್ರಮಿಸುತ್ತಾ ರೈತರ ಬೆನ್ನೆಲುಬಾಗಿ ನಿಂತಿದೆ ಮುಂದೆಯೂ ಸಹ ರೈತರ ಆಶೋತ್ತರಗಳಿಗೆ ಸ್ವಂದಿಸುವ ಕಾರ್ಯಮಾಡುತ್ತಿದೆ ಎಂದು ಹೇಳಿದರು.
ಇದಕ್ಕೂ ಮೊದಲು ನಗರದ ಬಸವೇಶ್ವರ ವೃತ್ತದಲ್ಲಿ  ಗೋವುಗಳಿಗೆ  ಪೂಜಿಸುವ ಮೂಲಕ ಶಾಸಕ ರಮೇಶ ಜಾರಕಿಹೊಳಿ ಅವರು ಸಮಾವೇಶದ ನಿಮಿತ್ಯ ಹಮ್ಮಿಕೊಂಡ ಮೆರವಣಿಗೆಗೆ ಚಾಲನೆ ನೀಡಿದರು

ವೇದಿಕೆಯಲ್ಲಿ ಮಾಜಿ ಸಚಿವ ಆರ್.ಎಂ ಪಾಟೀಲ ಭೀಮಗೌಡ ಪೊಲೀಸಗೌಡ ಪಾಟೀಲ, ನಗರಸಭೆ ಅಧ್ಯಕ್ಷ ಜಯಾನಂದ ಹುಣ್ಣಚ್ಯಾಳಿ,  ಎಸ್.ಎಸ್.ಅಂಗಡಿ, ಎಸ್.ಕೆ ಬಾಡದ, ಸುಧೀರ ಕುಲಕರ್ಣಿ, ಎಸ್.ಬಿ.ಕೊಮವಾಡ, ಎಲ್.ಐ ರೂಡಗಿ, ಎಂ.ಎಂ ನಧಾಫ್ , ಲೀಲಾ ಕೌಜಗೇರಿ , ಪ್ರಕಾಶ ಕುರಬೇಟ್, ಮಹೇಶ ಕೋಟಬಾಗಿ, ನಜುಂಡ ಜೂಗಳಿ  ಸೇರಿದಂತೆ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.

Related posts: