RNI NO. KARKAN/2006/27779|Saturday, August 2, 2025
You are here: Home » breaking news » ಗೋಕಾಕ:ಬಲಿಷ್ಠ ಭಾರತ ನಿರ್ಮಾಣದತ್ತ ಬಜರಂಗದಳ ದಾಪುಗಾವಲು ಇಟ್ಟಿದೆ : ನಾರಾಯಣ ಮಠಾಧಿಕಾರಿ

ಗೋಕಾಕ:ಬಲಿಷ್ಠ ಭಾರತ ನಿರ್ಮಾಣದತ್ತ ಬಜರಂಗದಳ ದಾಪುಗಾವಲು ಇಟ್ಟಿದೆ : ನಾರಾಯಣ ಮಠಾಧಿಕಾರಿ 

ಬಲಿಷ್ಠ ಭಾರತ ನಿರ್ಮಾಣದತ್ತ ಬಜರಂಗದಳ ದಾಪುಗಾವಲು ಇಟ್ಟಿದೆ : ನಾರಾಯಣ ಮಠಾಧಿಕಾರಿ

 

ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ನ 3 :

 
ಸೇವಾ, ಸುರಕ್ಷಾ, ಸಂಸ್ಕಾರ ಎಂಬ ತತ್ವದಡಿಯಲ್ಲಿ ಯುವಕರನ್ನು ಸಮಾಜಮುಖಿ ಕಾರ್ಯಗಳಲ್ಲಿ ಪಾಲ್ಗೊಳ್ಳಲು ಪ್ರೇರಣೆ ನೀಡುವ ಮೂಲಕ ಬಲಿಷ್ಠ ಭಾರತ ನಿರ್ಮಾಣದತ್ತ ಬಜರಂಗದಳ ದಾಪುಗಾವಲು ಇಟ್ಟಿದೆ ಎಂದು ವಿಎಚ್‍ಪಿಯ ನಾರಾಯಣ ಮಠಾಧಿಕಾರಿ ಹೇಳಿದರು.
ಬುಧವಾರದಂದು ನಗರದ ಶೂನ್ಯ ಸಂಪಾದನಾ ಮಠದ ಶ್ರೀ ಚನ್ನಬಸವೇಶ್ವರ ವಿದ್ಯಾಪೀಠದ ಆವರಣದಲ್ಲಿ ವಿಶ್ವ ಹಿಂದೂ ಪರಿಷತ್ ಬಜರಂಗದಳದ ವತಿಯಿಂದ ಹಮ್ಮಿಕೊಂಡ ಅಯೋಧ್ಯ ಬಲಿದಾನ ದಿವಸ ಪ್ರಯುಕ್ತ ಬೃಹತ್ ರಕ್ತದಾನ ಶಿಬಿರದಲ್ಲಿ ಪಾಲ್ಗೊಂಡು ಮಾತನಾಡಿದರು.
ದೇಶ್ಯಾದ್ಯಂತ ಬಜರಂಗದಳದ 40 ಸಾವಿರ ಘಟಕಗಳಲ್ಲಿ ಲಕ್ಷಾಂತರ ಕಾರ್ಯಕ್ರರ್ತರು ದೇಶ ಕಟ್ಟುವ ಕಾರ್ಯವನ್ನು ಮಾಡುತ್ತಿದ್ದಾರೆ. ಪ್ರವಾಹ ಹಾಗೂ ಕೋರೋನಾ ಸೇರಿಂದತೆ ಸಂಕಷ್ಟದ ಸಂದರ್ಭದಲ್ಲಿ ಅಸಹಾಯಕರಿಗೆ ನೆರೆವಿಗೆ ನಿಂತಿದ್ದಾರೆ. ರಕ್ತದಾನ ಸೇರಿದಂತೆ ಹಲವಾರು ಸಮಾಜಮುಖಿ ಕಾರ್ಯಗಳಲ್ಲಿ ಪಾಲ್ಗೊಂಡು ಮಾದರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮುಂಬರುವ ದಿನಗಳಲ್ಲಿ ಬಜರಂಗದಳದ ಸ್ವಾರಥ್ಯದಲ್ಲಿ ನೇತಾಜಿ ಸುಭಾಶಚಂದ್ರ ಬೋಸ್ ಸೈನಿಕ ತರಬೇತಿ ಕೇಂದ್ರವನ್ನು ಆರಂಭಿಸಿ ಯುವಕರಿಗೆ ಸೈನ್ಯ ಸೇರಲು ತರಬೇತಿಯನ್ನು ನೀಡಲಾಗುವುದು ಎಂದು ತಿಳಿಸಿದರು.
ಕಾರ್ಯಕ್ರಮವನ್ನು ಆರ್‍ಎಸ್‍ಎಸ್ ವಿಭಾಗಿಯ ಸಂಚಾಲಕ ಮಲ್ಲಿಕಾರ್ಜುನ ಚುನಮರಿ ಅವರು ಗೋವುಗಳಿಗೆ ಪೂಜೆಯನ್ನು ನೆರೆವೇರಿಸುವ ಮೂಲಕ ಚಾಲನೆ ನೀಡಿದರು.
ಇದೇ ಸಂದರ್ಭದಲ್ಲಿ ಮಾಜಿ ಸೈನಿಕರಾದ ಶಂಕರ ಕುಂಬಾರ, ಗಂಗಪ್ಪ ಕಡಬಿ, ಅಶೋಕ ಬಂಡಿ, ಅಶೋಕ ಕುಡಚಿ, ಬಸವರಾಜ ಪವಾಡಿ ಅವರನ್ನು ಸತ್ಕರಿಸಲಾಯಿತು. ಆಯುಷ್ಯ ಆರೋಗ್ಯ ತಪಾಸಣಾ ಕೇಂದ್ರದಿಂದ ಉಚಿತ ಆರೋಗ್ಯ ತಪಾಸಣೆ ನಡೆಯಿತು. ಸುಮಾರು 230ಕ್ಕೂ ಹೆಚ್ಚು ಜನರು ತಮ್ಮ ರಕ್ತದಾನ ಮಾಡುವ ಮೂಲಕ ಮಾನವಿಯತೆ ಮೆರೆದರು.
ಈ ಸಂದರ್ಭದಲ್ಲಿ ಶ್ರೀ ಚನ್ನಬಸವೇಶ್ವರ ವಿದ್ಯಾಪೀಠದ ಮುಖ್ಯಸ್ಥ ಅಡಿವೇಶ ಗವಿಮಠ, ಬಜರಂಗದಳದ ವಿಭಾಗೀಯ ಸಂಚಾಲಕ ಸದಾಶಿವ ಗುದಗಗೋಳ, ಜಿಲ್ಲಾ ಸಂಯೋಜಕ ಲಕ್ಷ್ಮಣ ಮೀಶಾಳೆ, ನಾಮದೇವ ಚಿಕ್ಕೋರ್ಡೆ, ಪುರೋತ್ತಮ ವಡೇಯರ್, ಸೂರಜ ದಿವಸೆ, ಕೃಷ್ಣಾ ಕುರಬಗಟ್ಟಿ, ಪ್ರಕಾಶ ಪಾಟೀಲ, ಲಕ್ಕಪ್ಪ ತಹಶೀಲದಾರ, ನ್ಯಾಯವಾದಿಗಳಾದ ಬಲದೇವ ಸಣ್ಣಕ್ಕಿ, ಗಂಗಾಧರ ಬಟ್ಟಿ ಸೇರಿದಂತೆ ಅನೇಕರು ಇದ್ದರು.

Related posts: