ಗೋಕಾಕ:ಬಸವ ಧರ್ಮವು ಅತ್ಯಂತ ವೈಚಾರಿಕ ಮತ್ತು ವೈಜ್ಞಾನಿಕವಾದ ದಯಾಮೂಲ ಧರ್ಮವಾಗಿದೆ : ಡಾ.ಬಿ.ಬಿ.ನಂದನ

ಬಸವ ಧರ್ಮವು ಅತ್ಯಂತ ವೈಚಾರಿಕ ಮತ್ತು ವೈಜ್ಞಾನಿಕವಾದ ದಯಾಮೂಲ ಧರ್ಮವಾಗಿದೆ : ಡಾ.ಬಿ.ಬಿ.ನಂದನ
ಗೋಕಾಕ ಅ 29 : ಹಸಿವಿನ ತೃಪ್ತಿ ಮತ್ತು ಜೀವನೋದ್ದಾರಕ್ಕಾಗಿ ಸತ್ಯ ಶುದ್ಧ ಕಾಯಕವನ್ನು ಮಾಡುವಂತೆ ಕರ್ನಾಟಕ ವಿಶ್ವ ವಿದ್ಯಾಲಯದ ವಿಶ್ರಾಂತ ಕುಲಸಚಿವ ಡಾ.ಬಿ.ಬಿ.ನಂದನ ಹೇಳಿದರು.
ಬುಧವಾರದಂದು ನಗರದ ಬಸವ ಮಂದಿರದಲ್ಲಿ ಶ್ರೀ ಬಸವ ಮೂರ್ತಿ ಪ್ರತಿಪ್ಠಾಪನೆ ಶಿವಯೋಗಿ ತತ್ವ ವಿಚಾರ ವೇದಿಕೆಯ 16ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು.
ಆತ್ಮ ಪರಿಶುದ್ದಿಗಾಗಿ ಮತ್ತು ಆತ್ಮೋದ್ದಾರಕ್ಕಾಗಿ ಶಿವಯೋಗವನ್ನು ಹಾಗೂ ಸಮಾಜದ ಸಮತೋಲನ ಮತ್ತು ಜೀವನ್ಮುಕ್ತಿಗಾಗಿ ದಾಸೋಹ ತತ್ವವನ್ನು ಬಿತ್ತಿ ಬೆಳೆದ ಬಸವ ಧರ್ಮವು ಅತ್ಯಂತ ವೈಚಾರಿಕವಾಗಿಯು ಮತ್ತು ವೈಜ್ಞಾನಿಕವಾದ ದಯಾಮೂಲ ಧರ್ಮವಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಪ್ರವಚನಕಾರ ರಮೇಶ ಮಿರ್ಜಿ, ಬಸವರಾಜ ಕಲ್ಯಾಣ ಶೆಟ್ಟಿ, ಕಾಶಪ್ಪ ಕಲಾಲ , ಪಾರವ್ವ ಗುರನ್ನವರ , ಅಶೋಕ ದಯನ್ನವರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು