RNI NO. KARKAN/2006/27779|Saturday, November 26, 2022
You are here: Home » breaking news » ಗೋಕಾಕ:ಪರಿಶಿಷ್ಟ ಜಾತಿಯವರ ನಿವಾಸಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟಿಲ್ ಭೇಟಿ : ಉಪಹಾರ ಸೇವನೆ

ಗೋಕಾಕ:ಪರಿಶಿಷ್ಟ ಜಾತಿಯವರ ನಿವಾಸಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟಿಲ್ ಭೇಟಿ : ಉಪಹಾರ ಸೇವನೆ 

ಪರಿಶಿಷ್ಟ ಜಾತಿಯವರ  ನಿವಾಸಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟಿಲ್  ಭೇಟಿ  : ಉಪಹಾರ ಸೇವನೆ

ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಸೆ 28 :

ಜನಸ್ಪಂದನ ಕಾರ್ಯಕ್ರಮದ ನಿಮಿತ್ತ ನಗರಕ್ಕೆ ಆಗಮಸಿದ್ದ ಸಂದರ್ಭದಲ್ಲಿ  ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ ಕಟಿಲ್ ಅವರು ನಗರದ ಎಪಿಎಂಸಿಯ ವಾರ್ಡ್ ನಂ 11 ರಲ್ಲಿ ವಾಸಿಸುವ ಹಿಂದುಳಿದ ಜನಾಂಗದ ಪರಶುರಾಮ ಕೋಡಲ್ಯಾಳ ಅವರ ಮನೆಗೆ ಭೇಟಿ ನೀಡಿ ಉಪಹಾರ ಸೇವಿಸಿದರು ನಂತರ ಅದೇ ವಾರ್ಡಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಜಾರಿಗೆ ತಂದ ಜನಪರ ಯೋಜನೆಗಳ ಫಲಾನುಭವಿಗಳೊಂದಿಗೆ ಸಂವಾದ ನಡೆಸಿದರು.

ಈ ಸಂದರ್ಭದಲ್ಲಿ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ , ರಾಜ್ಯ ಕಾರ್ಯದರ್ಶಿ ಮಹೇಶ ತೆಂಗಿನಕಾಯಿ,  ಜಿಲ್ಲಾಧ್ಯಕ್ಷ ಸಂಜಯ ಪಾಟೀಲ, ಮಾಜಿ ಶಾಸಕ ಎಂ ಎಲ್ ಮುತ್ತೆನ್ನವರ, ನಗರ ಘಟಕ ಅಧ್ಯಕ್ಷ ಭೀಮಶಿ ಭರಮನ್ನವರ, ಮುಖಂಡರಾದ ಭೀಮಗೌಡ ಪೊಲೀಸಗೌಡರ, ಸುರೇಶ್ ಸನದಿ, ಬಿಜೆಪಿ ಎಸ್.ಸಿ ಮೋರ್ಚಾ ಅಧ್ಯಕ್ಷ ಮಂಜುನಾಥ್ ಮಾವರಕರ , ನಗರಸಭೆ ಸದಸ್ಯ ಶ್ರೀಶೈಲ ಯಕ್ಕೂಂಡಿ ಸೇರಿದಂತೆ ಅನೇಕರು ಇದ್ದರು.

Related posts: