ಗೋಕಾಕ :ಜಗತ್ತಿಗೆ ರಾಮಾಯಣ ಅರ್ಪಿಸಿದ ಕೀರ್ತಿ ಮಹರ್ಷಿ ವಾಲ್ಮೀಕಿಯವರಿಗೆ ಸಲ್ಲುತ್ತದೆ : ಸಂತೋಷ ಜಾರಕಿಹೊಳಿ , ತಾಲೂಕಿನ ವಿವಿಧ ಕಡೆ ವಿಜ್ರಂಭನೆಯ ವಾಲ್ಮೀಕಿ ಜಯಂತಿ ಆಚರಣೆ
ಜಗತ್ತಿಗೆ ರಾಮಾಯಣ ಅರ್ಪಿಸಿದ ಕೀರ್ತಿ ಮಹರ್ಷಿ ವಾಲ್ಮೀಕಿಯವರಿಗೆ ಸಲ್ಲುತ್ತದೆ : ಸಂತೋಷ ಜಾರಕಿಹೊಳಿ , ತಾಲೂಕಿನ ವಿವಿಧ ಕಡೆ ವಿಜ್ರಂಭನೆಯ ವಾಲ್ಮೀಕಿ ಜಯಂತಿ ಆಚರಣೆ
ಗೋಕಾಕ ಅ 5 : ಜಗತ್ತಿಗೆ ರಾಮಾಯಣ ಅರ್ಪಿಸಿದ ಕೀರ್ತಿ ಮಹರ್ಷಿ ವಾಲ್ಮೀಕಿಯವರಿಗೆ ಸಲ್ಲುತ್ತದೆ ಎಂದು ಯುವ ಧುರೀಣ ಸಂತೋಷ ಜಾರಕಿಹೊಳಿ ತಿಳಿಸಿದರು.
ಇಲ್ಲಿಯ ತಾಲೂಕಾ ಸಾರ್ವಜನಿಕ ಆಸ್ಪತ್ರೆಯಲ್ಲಿ ಗುರುವಾರದಂದು ಶ್ರೀಮತಿ ಭೀಮವ್ವಾ ಲಕ್ಷ್ಮಣರಾವ ಜಾರಕಿಹೊಳಿ ಮೆಮೋರಿಯಲ್ ಚಾರಿಟೇಬಲ್ ಟ್ರಸ್ಟ್ ಸಹಯೋಗದಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಮಹರ್ಷಿ ವಾಲ್ಮೀಕಿ ಅವರ ಇಂದಿನ ಸಮಾಜಕ್ಕೆ ವಿಚಾರಗಳು ಎಂದಿಗಿಂತ ಇಂದು ಹೆಚ್ಚಾಗಿವೆ. ಅವರ ಜಯಂತಿ ಆಚರಿಸುವ ಜೊತೆಗೆ ಅವರ ವಿಚಾರಧಾರೆಗಳು ಜೊತೆಯಾಗಿವೆ. ಇವರೊಬ್ಬ ಆದಿಕವಿಯಾಗಿದ್ದರು. ಶ್ರೇಷ್ಠ ದಾರ್ಶನಿಕರಾಗಿದ್ದರೆಂದು ಅವರು ಹೇಳಿದರು.
ರಾಮಾಯಣ ಭಾರತದಲ್ಲಿ ಹುಟ್ಟಿ ವಿಶ್ವಮಾನ್ಯವಾಗಿದೆ. ರಾಮಾಯಣದಲ್ಲಿ ಜನ ತಮ್ಮ ಬಾಳನ್ನು ನೋಡಿಕೊಳ್ಳಬೇಕು. ಇಲ್ಲಿ ಪ್ರತಿಯೊಬ್ಬರಿಗೂ ಒಂದು ಪಾಠವಿದೆ. ಧರ್ಮ ಮಾರ್ಗದಲ್ಲಿ ಧಾರ್ಮಿಕ, ಸಾಮಾಜಿಕ ಗುಣಗಳನ್ನು ಪ್ರತಿಪಾದಿಸುವ ದಾರಿದೀಪವಾಗಿ ಜ್ಞಾನದ ದಾರಿ ತೋರಿಸುತ್ತದೆ. ರಾಮಾಯಣದಂತಹ ಮಹಾಕಾವ್ಯವನ್ನು ರಚಿಸಿ ಜಗತ್ತಿಗೆ ನೀಡಿದ ಕೀರ್ತಿಗೆ ಮಹರ್ಷಿ ವಾಲ್ಮೀಕಿಯವರು ಪಾತ್ರರಾಗಿದ್ದಾರೆಂದು ಸಂತೋಷ ಜಾರಕಿಹೊಳಿ ಹೇಳಿದರು.
ನಗರಾಧ್ಯಕ್ಷ ತಳದಪ್ಪ ಅಮ್ಮಣಗಿ, ಸರ್ಕಾರಿ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ.ಆರ್.ಎಸ್.ಬೆಣಚಿನಮರಡಿ, ಮಾಜಿ ನಗರಾಧ್ಯಕ್ಷ ಎಸ್.ಎ. ಕೋತವಾಲ, ಲೆಕ್ಕ ಪರಿಶೋಧಕ ಸೈದಪ್ಪ ಗದಾಡಿ, ಅರ್ಬನ್ ಬ್ಯಾಂಕ್ ಅಧ್ಯಕ್ಷ ಬಸವರಾಜ ಕಲ್ಯಾಣಶೆಟ್ಟಿ, ಗಣ್ಯ ಉದ್ಯಮಿ ಬಸವರಾಜ ಹತ್ತರಕಿ, ನಗರಸೇವಕ ಪರಶುರಾಮ ಭಗತ, ಎನ್‍ಎಸ್‍ಎಫ್ ಅತಿಥಿ ಗೃಹದ ನಾಗಪ್ಪ ಶೇಖರಗೋಳ, ನಿಂಗಪ್ಪ ಕುರಬೇಟ, ಬಿಎಲ್‍ಜೆ ಟ್ರಸ್ಟಿನ ಮಂಜು ಪೂಜೇರ, ಮುಂತಾದವರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಸಂತೋಷ ಜಾರಕಿಹೊಳಿ ಅವರು ಮಹರ್ಷಿ ವಾಲ್ಮೀಕಿ ಅವರ ಜಯಂತಿ ನಿಮಿತ್ಯ ಆಸ್ಪತ್ರೆಯ ರೋಗಿಗಳಿಗೆ ಹಣ್ಣು-ಹಂಪಲಗಳನ್ನು ವಿತರಿಸಿದರು.
……………………………………………………………….
ಸತೀಶ ಶುಗರ್ಸ್ ಅಕ್ಯಾಡೆಮಿಯಲ್ಲಿ : ವಾಲ್ಮೀಕಿ ಜಯಂತಿ ಆಚರಣೆ
ಇಲ್ಲಿಯ ಸತೀಶ ಶುಗರ್ಸ್ ಅಕ್ಯಾಡೆಮಿ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಗುರುವಾರದಂದು ಮಹರ್ಷಿ ಶ್ರೀ ವಾಲ್ಮೀಕಿ ಅವರ ಜಯಂತಿಯ ಕಾರ್ಯಕ್ರಮಕ್ಕೆ ಸಂಸ್ಥೆಯ ಆಡಳಿತಾಧಿಕಾರಿ ಪ್ರೊ,ಆರ್.ಎಸ್.ಡುಮ್ಮಗೋಳ ಅವರು ಪೂಜೆಯನ್ನು ನೇರವೆರಿಸುವ ಮೂಲಕ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಹಾವಿದ್ಯಾಲಯದ ಪ್ರಾಚಾರ್ಯ ಪ್ರೊ, ಟಿ.ಬಿ.ತಳವಾರ, ಉಪನ್ಯಾಸಕರಾದ ವಿ.ಎಸ್.ರೆಡ್ಡಿ, ಎಸ್.ಎಮ್.ಗುತ್ತಿ, ಎಸ್.ಎಮ್.ಮುರಮ್ಮಕರ, ಡಿ.ಎಸ್.ಹುಗ್ಗಿ, ಜಿ.ಪಿ.ತಲ್ಲೂರ, ಪಿ.ಜಿ.ತಿಗಡಿ ಸೇರಿದಂತೆ ಸಿಬ್ಬಂದಿಯವರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಇಲ್ಲಿಯ ಸತೀಶ ಶುಗರ್ಸ್ ಅಕ್ಯಾಡೆಮಿ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಮಹರ್ಷಿ ಶ್ರೀ ವಾಲ್ಮೀಕಿ ಅವರ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಗಣ್ಯರು.
ಅರಭಾವಿ ಪಟ್ಟಣ ಪಂಚಾಯತಿಯಲ್ಲಿ ವಾಲ್ಮೀಕಿ ಜಯಂತಿ ಆಚರಣೆ :
ತಾಲೂಕಿನ ಅರಭಾಂವಿ ಪಟ್ಟಣದ ಪಟ್ಟಣ ಪಂಚಾಯತಿಯಲ್ಲಿ ಮಹರ್ಷಿ ಶ್ರೀ ವಾಲ್ಮೀಕಿ ಜಯಂತಿಯನ್ನು ಆಚರಿಸಲಾಯಿತು.
ಪಪಂ ಅಧ್ಯಕ್ಷೆ ಪದ್ಮಾವತಿ ದೇವುಗೋಳ ಅವರು ಮಹರ್ಷಿ ವಾಲ್ಮೀಕಿ ಅವರ ಭಾವಚಿತ್ರಕ್ಕೆ ಪೂಜೆಯನ್ನು ಸಲ್ಲಿಸುವ ಮೂಲಕ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಪಪಂ ಸದಸ್ಯರಾದ ಅಡಿವೆಪ್ಪ ಬಿಲಕುಂದಿ, ರಾಯಪ್ಪ ಬಂಡಿವಡ್ಡರ, ಸುಶೀಲಾ ಸಂಪಗಾಂವಿ, ಮುಖಂಡರಾದ ಬಸವರಾಜ ಆಲೋಶಿ, ಕೆಂಚಪ್ಪ ಸಂಪಗಾಂವಿ, ಕರೆಪ್ಪ ಕಡ್ಡಿ ಸೇರಿದಂತೆ ಸಿಬ್ಬಂದಿಯವರು ಇದ್ದರು.
ತಾಲೂಕಿನ ಅರಭಾಂವಿ ಪಟ್ಟಣದ ಪಟ್ಟಣ ಪಂಚಾಯತಿಯಲ್ಲಿ ಮಹರ್ಷಿ ಶ್ರೀ ವಾಲ್ಮೀಕಿ ಜಯಂತಿಯ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಗಣ್ಯರು.
