RNI NO. KARKAN/2006/27779|Thursday, January 15, 2026
You are here: Home » breaking news » ಗೋಕಾಕ:ಸ್ಕೌಟ್ಸ್ ಮತ್ತು ಗೈಡ್ಸ್ ದಳಗಳು ಶಿಸ್ತನ್ನು ಕಲಿಸಿ, ಮಾನವೀಯ ಮೌಲ್ಯಗಳನ್ನು ವೃದ್ಧಿಸುತ್ತವೆ : ಬಿಇಒ ಬಳಗಾರ

ಗೋಕಾಕ:ಸ್ಕೌಟ್ಸ್ ಮತ್ತು ಗೈಡ್ಸ್ ದಳಗಳು ಶಿಸ್ತನ್ನು ಕಲಿಸಿ, ಮಾನವೀಯ ಮೌಲ್ಯಗಳನ್ನು ವೃದ್ಧಿಸುತ್ತವೆ : ಬಿಇಒ ಬಳಗಾರ 

ಸ್ಕೌಟ್ಸ್ ಮತ್ತು ಗೈಡ್ಸ್ ದಳಗಳು ಶಿಸ್ತನ್ನು ಕಲಿಸಿ, ಮಾನವೀಯ ಮೌಲ್ಯಗಳನ್ನು ವೃದ್ಧಿಸುತ್ತವೆ : ಬಿಇಒ ಬಳಗಾರ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಅ 4 :
ವಿದ್ಯಾರ್ಥಿಗಳಿಗೆ ಸ್ಕೌಟ್ಸ್ ಮತ್ತು ಗೈಡ್ಸ್ ದಳಗಳು ಶಿಸ್ತನ್ನು ಕಲಿಸುವದರೊಂದಿಗೆ ಮಾನವೀಯ ಮೌಲ್ಯಗಳನ್ನು ವೃದ್ಧಿಸಿ, ಉತ್ತಮ ನಾಗರಿಕರನ್ನಾಗಿ ಮಾಡುತ್ತವೆ ಎಂದು ಬಿಇಒ ಜಿ.ಬಿ.ಬಳಗಾರ ಹೇಳಿದರು.

ಗುರುವಾರದಂದು ನಗರದ ಮಯೂರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ , ಕಬ್ಸ್, ಬುಲಬುಲ್ಸ್ ನೂತನ ದಳಗಳ ಉದ್ಘಾಟನಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸ್ಕೌಟ್ಸ್ ಮತ್ತು ಗೈಡ್ಸ್ ದಳಗಳಿಗೆ ಸೇರುವದರಿಂದ ಅಂತರರಾಷ್ಟ್ರೀಯ ಸಂಸ್ಥೆಯ ಸದಸ್ಯರಾಗಿ ಜಗತ್ತಿನ ಕುಟುಂಬದಲ್ಲಿ ಸೇರ್ಪಡೆಯಾಗುತ್ತಿರಿ , ಸೇವೆಯೇ ನಿಜವಾದ ಧರ್ಮ ಎಂಬ ಧೇಯದಡಿ ಈ ದಳಗಳು ಕಾರ್ಯ ನಿರ್ವಹಿಸುತ್ತವೆ. ನಾವೆಲ್ಲ ಮಾನವರು ಒಂದೇ ಎಂಬ ಭಾವನೆಯನ್ನು ಬೆಳೆಸಿ ಸಾಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಳ಼್ಳಲು ಪ್ರೇರೆಪಿಸುತ್ತವೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಕ್ಷೇತ್ರ ಸಂಪನ್ಮೂಲ ಅಧಿಕಾರಿ ಎಂ.ಬಿ.ಪಾಟೀಲ, ಸ್ಕೌಟ್ಸ್ ನ ಸಹಾಯಕ ರಾಜ್ಯ ಸಂಘಟನಾ ಆಯುಕ್ತ ಬಿ.ಬಿ.ಅತ್ತಾರ, ಸ್ಥಳೀಯ ಕಾರ್ಯದರ್ಶಿ ವಾಯ್.ಬಿ ಸಣ್ಣಲಗಮನ್ನವರ, ಮುಖ್ಯೋಪಾಯನಿ ಸಿ.ಬಿ.ಪಾಗದ, ಶಾಲಾ ಸ್ಕೌಟ್ಸ್ ಮತ್ತು ಗೈಡ್ಸ್ ನ ಮುಖ್ಯಸ್ಥರಾದ ಪಿ.ಆರ್.ತಾವಂಶಿ ಉಪಸ್ಥಿತರಿದ್ದರು .

Related posts: