ಗೋಕಾಕ:ದಿನಾಂಕ 17 ರಂದು ಡಾ. ಸಿ.ಕೆ ನಾವಲಗಿ ಪುಸ್ತಕ ಬಿಡುಗಡೆ ಮತ್ತು ಜಾನಪದ ಸಂಭ್ರಮ

ದಿನಾಂಕ 17 ರಂದು ಡಾ. ಸಿ.ಕೆ ನಾವಲಗಿ ಪುಸ್ತಕ ಬಿಡುಗಡೆ ಮತ್ತು ಜಾನಪದ ಸಂಭ್ರಮ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಜು 15 :
‘ಕರ್ನಾಟಕ ಜಾನಪದ ಪರಿಷತ್ತು’ ಜಿಲ್ಲಾ ಘಟಕ ಬೆಳಗಾವಿ, ‘ಭೂಮಿ ಬಳಗ’ ಮಹಿಳಾ ಜಾನಪದ ಸಂಘಟನೆ ಹಾಗೂ ‘ಜಾಗೃತಿ ಮಹಿಳಾ ಸಮಾಜ’ ಬಣಗಾರ ಓಣಿ ಗೋಕಾಕ್ ಇವರ ಸಂಯುಕ್ತ ಆಶ್ರಯದಲ್ಲಿ ಡಾ.ಸಿ.ಕೆ ನಾವಲಗಿ ಅವರ ‘ಬಯಲಾಟ’ ಮತ್ತು ‘ಬಯಲಾಟ ಕಲಾವಿದರು’ ಎರಡು ಪುಸ್ತಕಗಳ ಬಿಡುಗಡೆ ಮತ್ತು ಜಾನಪದ ಸಂಭ್ರಮ ಕಾರ್ಯಕ್ರಮವನ್ನು, ಜುಲೈ 17 ರವಿವಾರ ಬೆಳಗಿನ 10:30 ಗಂಟೆಗೆ ಶಂಕರಲಿಂಗ ಸಂಸ್ಥೆಯ ಬಿ.ಎನ್. ಮಟ್ಟಿಕಲ್ಲಿ ಸಭಾಭವನ ಬಣಗಾರ ಓಣಿ ಗೋಕಾಕ್ ದಲ್ಲಿ ಹಮ್ಮಿಕೊಳ್ಳಲಾಗಿದೆ.
ಬಣಗಾರ ಸಮಾಜದ ಮುಖಂಡ ಬಾಲಚಂದ್ರ ಕುಬಸದ ಅವರ ಅಧ್ಯಕ್ಷತೆ ವಹಿಸುವರು, ನಗರದ ವೈದ್ಯೆ ಡಾ.ಶಶಿಕಲಾ ಕಾಮೋಜಿ ಪುಸ್ತಕ ಬಿಡುಗಡೆ ಮಾಡುವರು. ಧಾರವಾಡ ಪ್ರಾಧ್ಯಾಪಕ ಸಂಶೋಧಕ ಡಾ. ನಿಂಗಪ್ಪ ಮುದೇನೂರ ‘ಬಯಲಾಟ’ ಕೃತಿ ಕುರಿತು, ಬೈಲಹೊಂಗಲದ ಪ್ರಾಧ್ಯಾಪಕ ಸಾಹಿತಿ ಡಾ. ಸಂಗಮನಾಥ ಲೋಕಾಪುರ ‘ಬಯಲಾಟ ಕಲಾವಿದರು’ ಕುರಿತು ಮಾತನಾಡುವರು.
ಕ. ಸಾ.ಪ. ತಾಲೂಕಾಧ್ಯಕ್ಷೆ ಭಾರತಿ ಮದಭಾವಿ ಅವರಿಗೆ ಗೌರವ ಸನ್ಮಾನ ಜರುಗುವದು, ಜಾನಪದ ಸ್ಪರ್ಧಾ ವಿಜೇತರಿಗೆ ಪ್ರಶಸ್ತಿ ಪತ್ರ, ಬಹುಮಾನ ವಿತರಿಸಲಾಗುವುದು. ಕಜಾಪ ಗೋಕಾಕ್ ತಾಲೂಕಾಧ್ಯಕ್ಷ ಮಲ್ಲಿಕಾರ್ಜುನ ಈಟಿ, ಜಾಗೃತಿ ಮಹಿಳಾ ಸಮಾಜದ ಅಧ್ಯಕ್ಷೆ ಶಶಿಕಲಾ ಕೌತನಾಳಿ, ಕಜಾಪ ಜಿಲ್ಲಾಧ್ಯಕ್ಷ. ಡಾ.ಸಿ.ಕೆ. ನಾವಲಗಿ ಉಪಸ್ಥಿತರಿರುವರು. ನಗರದ ಕಲಾವಿದರಿಂದ ಜಾನಪದ ಸಂಭ್ರಮ ಕಾರ್ಯಕ್ರಮ ನೆರವೇರುವುದು. ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಕಜಾಪ ಪ್ರಧಾನ ಕಾರ್ಯದರ್ಶಿ ಈಶ್ವರ ಚಂದ್ರ ಬೆಟಗೇರಿ ಪ್ರಕಟಣೆಯಲ್ಲಿ ಕೋರಿದ್ದಾರೆ.