ಗೋಕಾಕ:ಸೌಭಾಗ್ಯಲಕ್ಷ್ಮೀ ಶುಗರ್ಸ್ ಬಾಯ್ಲರ ಪ್ರದೀಪನಾ ಕಾರ್ಯಕ್ರಮಕ್ಕೆ ಚಾಲನೆ
ಸೌಭಾಗ್ಯಲಕ್ಷ್ಮೀ ಶುಗರ್ಸ್ ಬಾಯ್ಲರ ಪ್ರದೀಪನಾ ಕಾರ್ಯಕ್ರಮಕ್ಕೆ ಚಾಲನೆ
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಸೆ 21 :
ರೈತರ ಸಹಕಾರದೊಂದಿಗೆ ಸೌಭಾಗ್ಯಲಕ್ಷ್ಮೀ ಶುಗರ್ಸ್ ಪ್ರಗತಿಯತ್ತ ಸಾಗುತ್ತಿದೆ ಎಂದು ಕಾರಖಾನೆಯ ಚೇರಮನ್ ಸಂತೋಷ ರಮೇಶ ಜಾರಕಿಹೊಳಿ ಹೇಳಿದರು
ಮಂಗಳವಾರದಂದು ಹೀರೆನಂದಿ ಗ್ರಾಮದ ಸೌಭಾಗ್ಯಲಕ್ಷ್ಮೀ ಸಕ್ಕರೆ ಕಾರ್ಖಾನೆಯ ಬಾಯ್ಲರ್ ಪ್ರದೀಪನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು
ಕಾರ್ಖಾನೆಯು ಸ್ಥಾಪನೆಗೊಂಡಾಗಿನಿಂದ , ಸದಾ ಕಾಲ ರೈತರ ಆರ್ಶಿವಾದ ಕಾರ್ಖಾನೆಗೆ ಮೇಲಿದ್ದು , . ರೈತರು ಈ ಕಾರ್ಖಾನೆಯನ್ನು ತಮ್ಮದೆಂದು ಭಾವಿಸಿ ತಮ್ಮ ಕಬ್ಬನ್ನು ಪೂರೈಸಿ ತಮ್ಮ ಆರ್ಥಿಕ ಪ್ರಗತಿಯೊಂದಿಗೆ ಕಾರ್ಖಾನೆಯ ಅಭಿವೃದ್ಧಿಗೂ ಶ್ರಮಿಸುವಂತೆ ತಿಳಿಸಿದರು.
ಅಧ್ಯಕ್ಷತೆಯನ್ನು ಶ್ರೀಮತಿ ಅಂಬಿಕಾ ಸಂತೋಷ ಜಾರಕಿಹೊಳಿ ವಹಿಸಿದ್ದರು.
ಈ ಸಂದರ್ಭದಲ್ಲಿ
ಕಾರ್ಖಾನೆಯ ಜನರಲ್ ಮ್ಯಾನೇಜರ್ ಅಧಿಕರಾವ ಪಾಟೀಲ,ದತ್ತಕುಮಾರ್ ರಕ್ತಾಲೇ ,
ಪ್ರಮೋದ್ ಸಾಬಳೆ , ಪ್ರಶಾಂತ್ ಪಾಟೀಲ
ರೈತರು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.