ಗೋಕಾಕ:ಎಲ್ಲರೂ ಒಮ್ಮತದಿಂದ ಒಗ್ಗಟ್ಟಾಗಿ ಬಾಳುವುದರೊಂದಿಗೆ ಪ್ರೀತಿ ವಿಶ್ವಾಸವನ್ನು ಉಳಿಸಿಕೊಳ್ಳಬೇಕು : ಮಸೀದಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಮುರುಘರಾಜೇಂದ್ರ ಮಹಾಸ್ವಾಮಿಜಿ ಅಭಿಮತ

ಎಲ್ಲರೂ ಒಮ್ಮತದಿಂದ ಒಗ್ಗಟ್ಟಾಗಿ ಬಾಳುವುದರೊಂದಿಗೆ ಪ್ರೀತಿ ವಿಶ್ವಾಸವನ್ನು ಉಳಿಸಿಕೊಳ್ಳಬೇಕು : ಮಸೀದಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಮುರುಘರಾಜೇಂದ್ರ ಮಹಾಸ್ವಾಮಿಜಿ ಅಭಿಮತ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಮೇ 22 :
ವಿವಿಧತೆಯಲ್ಲಿ ಏಕತೆಯನ್ನು ಕಾಣುವ ಚಿಗಡೊಳ್ಳಿ ಗ್ರಾಮದ ಜಾಮೀಯಾ ಮಸೀದಿಯ ಉದ್ಘಾಟನಾ ಕಾರ್ಯಕ್ರಮದಲ್ಲಿ ವಿವಿಧ ಜಾತಿ ಧರ್ಮದವರು ಸೇರುವುದರೊಂದಿಗೆ ಸೌಹಾರ್ದತೆಗೆ ಇತಿಹಾಸವನ್ನು ಬರೆದಿದ್ದಾರೆ. ಇದೇ ರೀತಿ ಎಲ್ಲಾ ಕಡೆಗಳಲ್ಲೂ ಒಮ್ಮತದಿಂದ ಒಗ್ಗಟ್ಟಾಗಿ ಬಾಳುವುದರೊಂದಿಗೆ ಪ್ರೀತಿ ವಿಶ್ವಾಸವನ್ನು ಉಳಿಸಿಕೊಳ್ಳಲು ಈ ಪ್ರಾರ್ಥನಾ ಮಂದಿರ ಸಾಕ್ಷಿಯಾಗಲಿ ಎಂದು ಶೂನ್ಯ ಸಂಪಾದನ ಮಠದ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳು ಹೇಳಿದರು.
ರವಿವಾರದಂದು ತಾಲೂಕಿನ ಚಿಗಡೊಳ್ಳಿ ಗ್ರಾಮದ ಜಾಮೀಯಾ ಮಸೀದಿ ಉದ್ಘಾಟನಾ ಸಮಾರಂಭ ದಿವ್ಯ ಸಾನ್ನಿಧ್ಯವನ್ನು ವಹಿಸಿ ಅವರು ಮಾತನಾಡಿದರು.
ಇದೇರೀತಿ ದೇಶಾದ್ಯಂತ ನಾವೆಲ್ಲರೂ ದೇವರ ಅನುಯಾಯಿಗಳಾಗಿ ಹೃದಯವಂತಿಗೆಯಿಂದ ಪ್ರಾರ್ಥಿಸಿಕೊಂಡು ಮುನ್ನಡೆದಲ್ಲಿ ಜಾತ್ಯಾತೀತ ಭಾರತದ ನಿರ್ಮಾಣಕ್ಕೆ ಸಾಕ್ಷಿಯಾದೀತು ಎಂದ ಅವರು ಅಲ್ಲಾಹು ನಮ್ಮೆಲ್ಲರನ್ನು ಇದೇ ರೀತಿ ಪ್ರೀತಿ ವಿಶ್ವಾಸದಿಂದ ಮುಂದುವರೆಯುವಂತೆ ಅನುಗ್ರಹಿಸಲಿ. ಹಿಂದಿನಿಂದಲೂ ಈ ಭಾಗದಲ್ಲಿರುವ ಎಲ್ಲಾ ಧರ್ಮದವರು ಅನ್ಯೋನ್ಯತೆಯಿಂದ ಬಾಳ್ವೆ ನಡೆಸುತ್ತಿದ್ದು ಪ್ರೀತಿ ಸೌರ್ಹಾದಕ್ಕೆ ಪ್ರತೀಕವಾಗಿ ನಮ್ಮ ಈ ನಾಡಿನಲ್ಲಿ ನಾವೆಲ್ಲರೂ ವಿವಿಧ ಧರ್ಮಿಯರು ಏರ್ಪಡಿಸುವ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದರೊಂದಿಗೆ ವಿವಿಧತೆಯಲ್ಲಿ ಏಕತೆಯನ್ನು ಸಾರುತ್ತಿದ್ದೇವೆ. ನಮ್ಮ ಮುಂದಿನ ಪೀಳೀಗೆಗೂ ಇದೇ ರೀತಿಯ ಜೀವನ ಮಾದರಿಯಾಗಲಿ ಎಂದು ಶುಭಹಾರೈಸಿದರು. ಮನುಕುಲದ ಉದ್ದಾರಕ್ಕಾಗಿ ಸಾಕಷ್ಟು ಧರ್ಮಗಳು ಹುಟ್ಟಿಕೊಂಡಿವೆ. ಎಲ್ಲಾ ಧರ್ಮದ ಮೂಲ ಒಂದೇ ಎಲ್ಲರೂ ಕೂಡಿ ಬಾಳಿ. ಮಹಾತ್ಮರು ಹೇಳಿದ ನುಡಿಗಳನ್ನು ಪಾಲಿಸಿ ಅವರು ಹಾಕಿ ಕೊಟ್ಟ ಸನ್ನಮಾರ್ಗದಲ್ಲಿ ಸಾಗಬೇಕು ಎಂದು ಹೇಳಿದರು.
ತಪಸಿ ಗ್ರಾಮದ ರೇವಣಸಿದ್ದೇಶ್ವರ ಮಠದ ಪರಮಪೂಜ್ಯ ಶ್ರೀ ಶ್ರೀ ಶ್ರೀ ಸುರೇಶ ಮಹಾರಾಜರು, ಬಿಳಗಿಯ ಹಜರತ್ ಮೌಲಾನಾ ಕಾಜಿ ಅಬ್ದುಲ್ ವಹಾಬ ಸಾಬ ಮಜಹರಿ ಅವರು ಆಶೀರ್ವಚನ ನೀಡಿದರು.
ಈ ಸಂದರ್ಭದಲ್ಲಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಸಹಾಯಕ ನಿಂಗಪ್ಪ ಕುರಬೇಟ, ಅಮಿರಸಾಬ ಹಾಜಿ ಕುತಬುದ್ದೀನ ಬಸ್ಸಾಪೂರ, ಮೌಲಾನ ಬಶೀರ ಉಲ್ಲ್ ಹಕ್ ಕಾಶಮಿ, ಮೌಲಾನಾ ಅಬ್ಬದುಲ್ಲಾ, ಮೌಲಾನ ಜಮ್ಮಶೇದ ಆಲಮ,ಕೊಣ್ಣೂರಿನ ಮೌಲಾನ ಅಬುಲ್ ಹಸನ , ಮುಖಂಡರುಗಳಾದ ಸತ್ತೆಪ್ಪ ಬಬಲಿ, ಕೆಂಚಪ್ಪ ಶಿಂತ್ರೆ,ಈರಪ್ಪ ಹಡಗಿನಾಳ, ಕರೆಪ್ಪ ಬಿಗೌಡರ, ಕಲ್ಲಪ್ಪ ದಂಡಿನ,ಅಡಿವೆಪ್ಪ ಹಂಜಿ, ದಸ್ತಗೀರಸಾಬ ಮುಲ್ಲಾ, ಬಾಳಪ್ಪ ಬಿಗೌಡರ,ಯಲಪ್ಪ ಬಿಗೌಡರ,ಯಲ್ಲಪ್ಪ ಮುರ್ಕಿಬಾಂವಿ,ಮಾರುತಿ ನಾಯಕ,ಲಕ್ಕಪ್ಪ ಹುಲಕುಂದ,ಹಣುಮಂತರಾವ ಘೋರ್ಪಡೆ,ಸಿದ್ದಲಿಂಗಪ್ಪ ವಡೆಯರಹಟ್ಟಿ,ಹಣುಮಂತ ಪಾಟೀಲ,ಅಡಿವೇಪ್ಪ ಭಜಂತ್ರಿ,ಸುರೇಶ ಬಾಗಾಯಿ,ಮಹಾದೇಪ್ಪ ಪತ್ತಾರ ,ಲಕ್ಷ್ಮಣ ದಾಸರ ಸೇರಿದಂತೆ ಗ್ರಾಮ ಪಂಚಾಯಿತಿ ಸದಸ್ಯರು, ಗ್ರಾಮದ ಸರ್ವ ಮುಖಂಡರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.