RNI NO. KARKAN/2006/27779|Wednesday, October 15, 2025
You are here: Home » breaking news » ಬಾಬು ಜಗಜೀವನರಾಂ ಕೂಡಾ ಜಾತಿ ಮತ್ತು ಅನಿಷ್ಟ ಪದ್ಧತಿಗಳ ವಿರುದ್ಧ ಹೋರಾಡಿದ ಮಹಾನ ವ್ಯಕ್ತಿ : ಪ್ರಾಚಾರ್ಯ ಕೆ.ಎಮ್.ವಡೇರ

ಬಾಬು ಜಗಜೀವನರಾಂ ಕೂಡಾ ಜಾತಿ ಮತ್ತು ಅನಿಷ್ಟ ಪದ್ಧತಿಗಳ ವಿರುದ್ಧ ಹೋರಾಡಿದ ಮಹಾನ ವ್ಯಕ್ತಿ : ಪ್ರಾಚಾರ್ಯ ಕೆ.ಎಮ್.ವಡೇರ 

ಬಾಬು ಜಗಜೀವನರಾಂ ಕೂಡಾ ಜಾತಿ ಮತ್ತು ಅನಿಷ್ಟ ಪದ್ಧತಿಗಳ ವಿರುದ್ಧ ಹೋರಾಡಿದ ಮಹಾನ ವ್ಯಕ್ತಿ : ಪ್ರಾಚಾರ್ಯ ಕೆ.ಎಮ್.ವಡೇರ

ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಏ 5 : 

ಡಾ. ಬಿ.ಆರ್‌. ಅಂಬೇಡ್ಕರ ಅವರಂತೆ ಬಾಬು ಜಗಜೀವನರಾಂ ಅವರೂ ಕೂಡಾ ಜಾತಿ ಮತ್ತು ಅನಿಷ್ಟ ಪದ್ಧತಿಗಳ ವಿರುದ್ಧ ಹೋರಾಡಿದವರು. ಶೋಷಿತ ವರ್ಗದವರಿಗಾಗಿ ದುಡಿದ ಮಹನೀಯರು ಎಂದು ಕೌಜಲಗಿ ಸರಕಾರಿ ಪದವಿ ಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯ ಕೆ.ಎಮ್.ವಡೇರ  ಹೇಳಿದರು.

ತಾಲೂಕಾಡಳಿತ , ತಾಲೂಕು ಪಂಚಾಯತ್ ,  ನಗರಸಭೆ ಹಾಗೂ ಸಮಾಜಕಲ್ಯಾಣ ಇಲಾಖೆ ಆಶ್ರಯದಲ್ಲಿ ತಾಲೂಕು ಪಂಚಾಯತ್  ಕಚೇರಿ ಸಭಾಂಗಣದಲ್ಲಿ ಮಂಗಳವಾರದಂದು  ಹಮ್ಮಿಕೊಂಡಿದ್ದ ಡಾ. ಬಾಬು ಜಗಜೀವನರಾಂ ಅವರ 115ನೇ ಜಯಂತಿ ಕಾರ‍್ಯಕ್ರಮದಲ್ಲಿ ಅತಿಥಿಯಾಗಿ ಪಾಲ್ಗೊಂಡು  ಅವರು ಮಾತನಾಡಿದರು. ಜಗಜೀವನರಾಂ ಅವರ ಬದುಕು ಸಂಘರ್ಷಮಯವಾಗಿದ್ದರೂ ಕೂಡಾ ಸಂವಿಧಾನಿಕ ನಾಯಕರಾಗಿ ದೇಶಕ್ಕೆ ಮತ್ತು ಸಮಾಜಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಜಗಜೀವನರಾಂ ಅವರ ಜಯಂತಿಯನ್ನು ಆಚರಿಸುವ ಮೂಲಕ ಅವರ ಆದರ್ಶಗುಣಗಳನ್ನು ನಾವೆಲ್ಲರೂ ಅಳವಡಿಸಿಕೊಳ್ಳಬೇಕಾಗಿದೆ ಎಂದು ಹೇಳಿದರು.
ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ತಹಶೀಲ್ದಾರ ಪ್ರಕಾಶ ಹೊಳೆಪ್ಪಗೋಳ  ಡಾ.ಬಾಬು ಜಗಜೀವನರಾಂ ರವರು ಸ್ವಾತಂತ್ರ್ಯ ಹೋರಾಟಗಾರರಷ್ಟೇ ಅಲ್ಲದೇ ಹಸಿರು ಕ್ರಾಂತಿಯ ಹರಕಾರ ಆಗಿದ್ದರು. ಅಂತಹ ಮಹಾನ್ ವ್ಯಕ್ತಿಯ ಜೀವನ ಚರಿತ್ರೆಯನ್ನು ತಿಳಿದುಕೊಂಡು ಅವರ ತತ್ವ ಸಿದ್ಧಾಂತವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು . ಡಾ. ಬಾಬು ಜಗಜೀವನರಾಂ ರವರು ರಾಜಕೀಯ ಕ್ಷೇತ್ರದಲ್ಲಿ ರಾಜಕಾರಣಿಯಾಗಿ ದೇಶವನ್ನು ಯಾವ ರೀತಿ ಮುನ್ನಡೆಸಬೇಕು ಮತ್ತು ಸಮಾಜದಲ್ಲಿನ ಕೆಳವರ್ಗದವರಿಗೆ ಸೇವೆ ಮಾಡಬೇಕು ಎನ್ನುವುದಕ್ಕೆ ಅತ್ಯುತ್ತಮ ಉದಾಹರಣೆ ಆಗಿದ್ದರು ಎಂದು  ಹೇಳಿದರು.

ವೇದಿಕೆಯಲ್ಲಿ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಮುರಳಿಧರ ದೇಶಪಾಂಡೆ, ಎಸ್.ವ್ಹಿ.ಕಲ್ಲಪ್ಪನವರ, ನಗರಸಭೆ ಉಪಾಧ್ಯಕ್ಷ ಬಸವರಾಜ ಆರೆನ್ನವರ, ಮುಖಂಡರಾದ ಗೋವಿಂದ ಕಳ್ಳಿಮನಿ, ಸುಧೀರ್ ಜೋಡಟ್ಟಿ, ವೀರಭದ್ರ ಮೈಲ್ಲನ್ನವರ, ಬಬಲೆಪ್ಪ ಮಾದರ, ಬಾಳೇಶ ಸಂತವ್ವಗೋಳ, ಶ್ರೀಮತಿ ಶಾಂತಾ ಮರೆನ್ನವರ, ಶ್ರೀಮತಿ ಆರತಿ ಕಾಂಬಳೆ , ಶ್ರೀಧರ ಮಾವರಕರ, ಅಪ್ಪೋಜಿ ದೇವಡಿ, ಮಲ್ಲಿಕಾರ್ಜುನ ಕುಂಬಾರ ಸೇರಿದಂತೆ ಅನೇಕರು ಇದ್ದರು.

Related posts: