ಗೋಕಾಕ:ಆತ್ಮವಿಶ್ವಾಸದಿಂದ ವಿದ್ಯಾರ್ಥಿಗಳು ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕು : ರವೀಂದ್ರನಾಥ್ ದೇಮಶೆಟ್ಟಿ
ಆತ್ಮವಿಶ್ವಾಸದಿಂದ ವಿದ್ಯಾರ್ಥಿಗಳು ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕು : ರವೀಂದ್ರನಾಥ್ ದೇಮಶೆಟ್ಟಿ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಮಾ 6:
ಧನಾತ್ಮಕ ಚಿಂತನೆಯಿಂದ ಗುರು ಹಾಗೂ ಪಾಲಕರ ಮಾರ್ಗದರ್ಶನದಲ್ಲಿ ಆತ್ಮವಿಶ್ವಾಸದಿಂದ ವಿದ್ಯಾರ್ಥಿಗಳು ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳುವಂತೆ ಶಿಕ್ಷಕ ರವೀಂದ್ರನಾಥ್ ದೇಮಶೆಟ್ಟಿ ಹೇಳಿದರು.
ಶನಿವಾರದಂದು ಮಯೂರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳ ಬಿಳ್ಕೋಡುವ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡುತ್ತಾ ಖುಷಿಯಿಂದ ಅಭ್ಯಾಸ ಮಾಡಿ, ಖುಷಿಯಿಂದಲೆ ಪರೀಕ್ಷೆಯನ್ನು ಎದುರಿಸುವಂತೆ ಕರೆ ನೀಡಿದರು.
ಈ ಸಂದರ್ಭದಲ್ಲಿ ಮುಖ್ಯೋಪಾಧ್ಯಾಯನಿ ಸಿ.ಬಿ.ಪಾಗದ, ಶಿಕ್ಷಕರಾದ ಎಂ.ಸಿ.ವಣ್ಣೂರ, ಎಸ್.ಕೆ ಪಾಟೀಲ, ಎನ್.ಎ ಮಕಾಂದಾರ, ಬಿ.ಜಿ.ಪಾಟೀಲ ಇದ್ದರು.