RNI NO. KARKAN/2006/27779|Saturday, February 14, 2026
You are here: Home » breaking news » ಗೋಕಾಕ:ಕಾಂಗ್ರೆಸನ್ನು ನಾನು ಬಿಡುತ್ತೇನೊ, ಕಾಂಗ್ರೆಸ್ ನನ್ನನ್ನು ಬಿಡುತ್ತದೆಯೊ ಮಾರ್ಚ್ 12 ರವರೆ ಕಾದು ನೋಡಿ : ಸಿ.ಎಂ ಇಬ್ರಾಹಿಂ

ಗೋಕಾಕ:ಕಾಂಗ್ರೆಸನ್ನು ನಾನು ಬಿಡುತ್ತೇನೊ, ಕಾಂಗ್ರೆಸ್ ನನ್ನನ್ನು ಬಿಡುತ್ತದೆಯೊ ಮಾರ್ಚ್ 12 ರವರೆ ಕಾದು ನೋಡಿ : ಸಿ.ಎಂ ಇಬ್ರಾಹಿಂ 

ಕಾಂಗ್ರೆಸನ್ನು ನಾನು ಬಿಡುತ್ತೇನೊ, ಕಾಂಗ್ರೆಸ್ ನನ್ನನ್ನು ಬಿಡುತ್ತದೆಯೊ ಮಾರ್ಚ್ 12 ರವರೆ ಕಾದು ನೋಡಿ : ಸಿ.ಎಂ ಇಬ್ರಾಹಿಂ

 
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಮಾ 3 :

 
ಕಾಂಗ್ರೆಸನ್ನು ನಾನು ಬಿಡುತ್ತೇನೊ , ಕಾಂಗ್ರೆಸ್ ನನ್ನನ್ನು ಬಿಡುತ್ತದೆಯೊ ಎಂಬುದನ್ನು ಮಾರ್ಚ್ 12 ತಾರೀಖ ನವರೆ ಕಾದು ನೋಡಿ ಎಂದು ವಿಧಾನ ಪರಿಷತ್ ಸದಸ್ಯ ಸಿ.ಎಂ ಇಬ್ರಾಹಿಂ ಹೇಳಿದರು.

ಗುರುವಾರದಂದು ನಗರದಲ್ಲಿ ನಡೆಯುತ್ತಿರುವ ಶರಣ ಸಂಸ್ಕೃತಿ ಉತ್ಸವ ಸಮಾರಂಭ ಉದ್ಘಾಟನಾ ಸಮಾರಂಭಕ್ಕೆ ಆಗಮಿಸಿದ ಸಂದರ್ಭದಲ್ಲಿ ಅವರನ್ನು ಭೇಟಿಯಾದ ಪತ್ರಕರ್ತರನ್ನು ಉದ್ದೇಶಿ ಅವರು ಮಾತನಾಡಿದರು.

ಬಸವತತ್ವವನ್ನು ಉಳಿಸಿ, ಬೆಳೆಸುವ ಜನರನ್ನು ಒಗ್ಗೂಡಿಸುವ ಸಲುವಾಗಿ ಈಗಾಗಲೇ ರಾಜ್ಯದಲ್ಲಿ ಪ್ರವಾಸ ಮಾಡುತ್ತಿದ್ದೇನೆ ಆದಷ್ಟೂ ಬೇಗ ಅಲಿಂಗಒ ಸಂಘಟನೆಯ ಮೊದಲ ಸಮಾವೇಶ ಹಮ್ಮಿಕೊಳ್ಳಲಾಗುವದು ಎಂದರು .
ಅಲಿಂಗಒ ಸಂಘಟನೆಗೆ ಸೇರಲು ಯಾವ ರಾಜಕಾರಣಿಗಳು ನಿಮ್ಮನ್ನು ಸಂರ್ಪಿಕಿಸಿದ್ದಾರೆ ಎಂದು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು ಬಸವ ತತ್ವವನ್ನು ನಂಬಿ ಬರುವ ಯಾವುದೇ ಪಕ್ಷದ ರಾಜಕಾರಣಿಗಳು ನಮ್ಮ ಸಂಘಟನೆಗೆ ಬರಬಹುದು ಎಂದು ಉತ್ತರಿಸಿದರು.
ಮೇಕದಾಟು ಪಾದಯಾತ್ರೆಯಿಂದ ಅಂತರ ಕಾಯ್ದುಕೊಂಡ ಬಗ್ಗೆ ಉತ್ತರಿಸಿದ ಅವರು ನಾನು ಮೇಕೆದಾಟಿಸುವನಲ್ಲ, ನಾನು ಹುಲಿದಾಟಿಸುವನ್ನು ಎಂದು ಮೇಕದಾಟು ಪಾದಯಾತ್ರೆಯನ್ನು ಗೇಲಿ ಮಾಡಿದರು.
ಸತೀಶ ಜಾರಕಿಹೊಳಿಗೆ ಬಿಪಾರ್ಮ ಕೊಡಿಸಿದ್ದು ನಾನೆ : ಕಾಂಗ್ರೆಸ್ ತೊರೆಯುತ್ತಿರುವ ನಿಮ್ಮನ್ನು ನಿಮ್ಮ ಶಿಷ್ಯ ಸತೀಶ್ ಜಾರಕಿಹೊಳಿ ಭೇಟಿಯಾಗಿ ಮಾತನಾಡಿಸಿದ್ದಾರಾ, ಈ ಸಂದರ್ಭದಲ್ಲಿ ಅವರನ್ನು ಭೇಟಿಯಾಗುತ್ತಿರಾ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸದ ಅವರು ಸತೀಶ ಜಾರಕಿಹೊಳಿ ಈಗ ದೊಡ್ಡ ಮನುಷ್ಯ ಅವನನ್ನು ರಾಜಕೀಯಕ್ಕೆ ತಂದು ಬಿ ಫಾರ್ಮ್ ಕೊಡಿಸಿದ್ದು ನಾನೇ ಬೇಕಾದರೇ ಸಿದ್ದಲಿಂಗ ದಳವಾಯಿ ಅವರಿಗೆ ಕೇಳಿ ಎಂದರು.

Related posts: