ಗೋಕಾಕ : ಹಳೆ ವೈಷಮ್ಯ ಹಿನ್ನೆಲೆ ಮಾರಕಾಸ್ತ್ರಗಳಿಂದ ಕೋಚ್ಚಿ ಯುವಕನ ಕೊಲೆ : ಗೋಕಾಕನಲ್ಲೊಂದು ಬರ್ಬರ ಕೃತ್ಯ

ಹಳೆ ವೈಷಮ್ಯ ಹಿನ್ನೆಲೆ ಮಾರಕಾಸ್ತ್ರಗಳಿಂದ ಕೋಚ್ಚಿ ಯುವಕನ ಕೊಲೆ : ಗೋಕಾಕನಲ್ಲೊಂದು ಬರ್ಬರ ಕೃತ್ಯ
ಗೋಕಾಕ ಸೆ 25 : ಹಳೆ ವೈಷಮ್ಯ ಹಿನ್ನೆಲೆಯಲ್ಲಿ ಯುವಕನೋರ್ವನನ್ನು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೋಲೆಗೈದ ಘಟನೆ ರವಿವಾರ ರಾತ್ರಿ ಗೋಕಾಕ ನಗರದಲ್ಲಿ ನಡೆದಿದೆ
ರೋಹಿತ ಪಾಟೀಲ್ (25) ಕೊಲೆಯಾದ ವ್ಯಕ್ತಿ ಎಂದು ಗುರಿತಿಸಲಾಗಿದೆ ರವಿವಾರ ರಾತ್ರಿ ನಗರದ ಅಫ್ಸರಾ ಕೂಟ ಬಳಿ ನಿಂತಿದ ರೋಹಿತನನ್ನು ಕಾರಿನಲ್ಲಿ ಬಂದ ಕೆಲವರು ಕಣ್ಣಿಗೆ ಖಾರದ ಪುಡಿ ಎರಚಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಫರಾರಿಯಾಗಿದ್ದಾರೆ ಸ್ಥಳಕ್ಕೆ ಬೇಟ್ಟಿ ನೀಡಿದ ಪೊಲೀಸರು ಇತನನ್ನು ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ ಚಿಕಿತ್ಸೆ ಫಲಕಾರಿಯಾಗದೆ ಯುವಕ ನಿನ್ನೆ ರಾತ್ರಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ ಎಂದು ಹೇಳಲಾಗುತ್ತಿದೆ
ಈ ಕುರಿತು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಆರೋಪಗಳಿಗಾಗಿ ಪೊಲೀಸರು ತೀವ್ರ ಶೋಧ ನಡೆಸಿದ್ದಾರೆ
ಘಟನೆಯ ಹಿನ್ನೆಲೆ :
ಕಳೆದ ಕೆಲವು ದಿನಗಳಿಂದ ಎರೆಡು ಬಣಗಳ ಮಧ್ಯೆ ವೈಯಕ್ತಿಕ ವೈಷಮ್ಯ ಬೆಳೆದಿತ್ತು ಎನ್ನಲಾಗುತ್ತಿದೆ ಇದೆ ಕಾರಣಕ್ಕೆ ಕಳೆದ ನಾಗರ ಪಂಚಮಿಯಂದು ಸೋಮವಾರ ಪೇಠೆಯಲ್ಲಿ ತೇರು ನಡೆಯುತ್ತಿದ ಸಂದರ್ಭದಲ್ಲಿ ಎರೆಡು ಬಣಗಳ ಮಧ್ಯೆ ಘರ್ಷಣೆ ನಡೆದು ಹಿರಿಯ ಮಧ್ಯಸ್ಥಿಕೆಯಲ್ಲಿ ಬಗೆ ಹರಿಸಲಾಗಿತ್ತು ಈ ಘಟನೆಯಲ್ಲಿ ರೋಹಿತ್ ಕೂಡ ಇದ್ದ ಎನ್ನಲಾಗಿದೆ . ಇದೇ ಕಾರಣಕ್ಕಾಗಿ ರೋಹಿತ್ ಮೇಲೆ ಹಲ್ಲೆ ನಡೆದಿರ ಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ